ಯುವತಿಗೆ ಅಶ್ಲೀಲ ಸಂದೇಶ ರವಾನಿಸಿದ ಡೆಲಿವರಿ ಬಾಯ್ ವಿರುದ್ಧ ದೂರು

ಬೆಂಗಳೂರು, ಜ. 28: ಯುವತಿಯೊಬ್ಬಳ ನಂಬರ್‌ಗೆ ಮಧ್ಯರಾತ್ರಿ ಅಶ್ಲೀಲ ಸಂದೇಶ ರವಾನಿಸಿದ ಡೆಲಿವರಿ ಬಾಯ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು. ಡೆಲಿವರಿ ಕೊಡುವ ವಿಚಾರದಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಡೆಲಿವರಿ ಬಾಯ್‌ಗಳ ನಡುವೆ ಜಗಳ. ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ಗಳ ಕಿರಿಕ್ ಕುರಿತು ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳ ವಿವರ ಇಲ್ಲಿದೆ.

ಡೆಲಿವರಿ ಬಾಯ್‌ನಿಂದ ಯುವತಿಗೆ ಕಿರುಕುಳ:

ಎಲ್ಲವನ್ನೂ ಮನೆ ಬಾಗಿಲಿಗೆ ತರಿಸಿಕೊಳ್ಳುವ ಮಂದಿ ಡೆಲಿವರಿ ಸರ್ವೀಸ್‌ನ್ನೇ ನಂಬಿದ್ದಾರೆ. ಆದರೆ ಇಲ್ಲೊಬ್ಬ ಡೆಲಿವರಿ ಬಾಯ್ ಯುವತಿಗೆ ಪಾರ್ಸಲ್ ಕೊಡುವ ವೇಳೆ ಆಕೆಯ ನಂಬರ್ ಪಡೆದು ರಾತ್ರಿ ವೇಳೆ ಅಶ್ಲೀಲ ಸಂದೇಶ ರವಾನಿಸಿದ್ದಾನೆ.

ಫುಡ್ ಡೆಲಿವರಿ ಬುಕ್ ಮಾಡಿದ್ದ ಯುವತಿಯೊಬ್ಬಳಿಗೆ ಡೆಲಿವರಿ ಬಾಯ್ ಫುಡ್ ತಂದು ಕೊಟ್ಟಿದ್ದ. ಆನಂತರ ಆಕೆಯ ನಂಬರ್ ಇಟ್ಟುಕೊಂಡು ರಾತ್ರಿ ವೇಳೆ ನಿನ್ನ ಸ್ನೇಹಿತ ಎಂದು ಹೇಳಿಕೊಂಡು ವಾಟ್ಸಪ್ ಸಂದೇಶ ರವಾನಿಸಿದ್ದಾನೆ. ಮಧ್ಯರಾತ್ರಿ ವೇಳೆ ಅಶ್ಲೀಲ ಸಂದೇಶ ಮತ್ತು ಪೋಟೋ ರವಾನಿಸಿ ಕಿರುಕುಳ ನೀಡಿದ್ದಾನೆ. ನಾನಾ ನಂಬರ್‌ಗಳಿಂದ ಪ್ರತಿ ನಿತ್ಯ ಸಂದೇಶ ರವಾನಿಸಿ ಕಿರುಕುಳ ನೀಡಿದ್ದು, ಈ ಸಂಬಂಧ ಯುವಕನೊಬ್ಬ ತನ್ನ ಸ್ನೇಹಿತೆಗೆ ಆಗಿರುವ ಸಮಸ್ಯೆ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಗೌರವ ಸಿಂಗ್ ಎಂಬ ಯುವಕ ಟ್ವಿಟ್ಟರ್ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾನೆ. ಡೆಲಿವರಿ ಬಾಯ್ ಕಳುಹಿಸಿರುವ ಅಶ್ಲೀಲ ಸಂದೇಶಗಳನ್ನು ಕೂಡ ಟ್ಯಾಗ್ ಮಾಡಿದ್ದಾನೆ.

Bengaluru: Complaint against Delivery Boy for sending obscene messages to young woman

ಡೆಲಿವರಿ ಬಾಯ್ ನಂಬರ್ ಪಡೆದು ಕಸುವನಹಳ್ಳಿಯಲ್ಲಿ ನೆಲೆಸಿರುವ ನನ್ನ ಸ್ನೇಹಿತೆಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದಾನೆ. ಈ ಕೂಡಲೇ ಈತನ ವಿರುದ್ಧ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದು, ಆರೋಪಿತ ಡೆಲಿವರಿ ಬಾಯ್‌ಗಾಗಿ ಪೊಲಿಸರು ಹುಡುಕಾಟ ಅರಂಭಿಸಿದ್ದಾರೆ.

ಹೋಟೆಲ್‌ನಲ್ಲಿ ಡೆಲಿವರಿ ಬಾಯ್‌ಗಳ ಕಿರಿಕ್:

ಬಿಟಿಎಂ ಲೇಔಟ್‌ನಲ್ಲಿ ಕೇರಳ ಮೂಲದ ಹೋಟೆಲ್ ಸಿಬ್ಬಂದಿಯ ಜತೆ ಸ್ಥಳೀಯ ಡೆಲಿವರಿ ಬಾಯ್‌ಗಳು ಜಗಳ ತೆಗೆದು ರಂಪಾಟ ಮಾಡಿದ್ದಾರೆ. ನಗರದ ಮೈಕೋ ಲೇಔಟ್ ನಲ್ಲಿರುವ ಕೇರಳ ಮೂಲದ ಹೋಟೆಲ್ ನಲ್ಲಿ ಪಾರ್ಸಲ್ ಸಂಗ್ರಹಿಸಲು ಡೆಲಿವರಿ ಬಾಯ್ ಹೋಗಿದ್ದಾನೆ.

Bengaluru: Complaint against Delivery Boy for sending obscene messages to young woman

ಮಧ್ಯರಾತ್ರಿ ಎರಡು ಗಂಟೆ ಸುಮಾರಿನಲ್ಲಿ ಕೇರಳ ಮೂಲದ ಹೋಟೆಲ್ ಗೆ ಡೆಲಿವರಿ ಬಾಯ್ ಹೋಗಿ ಪಾರ್ಸಲ್ ಕೇಳಿದ್ದಾನೆ. ಈ ವೇಳೆ ತಡ ಮಾಡಿದ ಹೋಟೆಲ್ ಸಿಬ್ಬಂದಿ ವಿರುದ್ಧ ಜಗಳ ನಡೆದಿದೆ. ಈ ವೇಳೆ ಊರು ಬಿಟ್ಟು ಬಂದು ನಮ್ಮನ್ನೇ ಹೀಯಾಳಿಸುತ್ತೀರಾ ಎಂದು ಡೆಲಿವರಿ ಬಾಯ್ಸ್ ಒಗ್ಗೂಡಿ ಜಗಳ ತೆಗೆದಿದ್ದಾರೆ. ಜೊಮ್ಯಾಟೋ ಡೆಲಿವರಿ ಸಂಸ್ಥೆಯ ಸುಮಾರು ನಲವತ್ತು ಯುವಕರು ಸೇರಿ ಹೋಟೆಲ್ ನ ಪಾಟ್ ಗಳನ್ನು ಹೊಡೆದು ಧ್ವಂಸ ಮಾಡಿದ್ದಾರೆ.

ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೋಟೆಲ್ ಸಿಬ್ಬಂದಿ ಜೊಮ್ಯಾಟೋ ಡೆಲಿವರಿ ಬಾಯ್ಸ್ ಗಲಾಟೆ ಮಾಡಿಕೊಂಡಿದ್ದು, ಹಲ್ಲೆಗೆ ಒಳಗಾಗಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recommended Video

      ಮಾಜಿ CM Yediyurappa ಮೊಮ್ಮಗಳು ನೇಣಿಗೆ ಶರಣು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+