ಲಾಲ್‌ಬಾಗ್‌ನಲ್ಲಿ ಮೈಸೂರು ಅರಮನೆ ನೋಡಿ

ಬೆಂಗಳೂರು, ಆ.8: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜಧಾನಿ ಬೆಂಗಳೂರಿನ ಲಾಲ್‌ ಬಾಗ್‌ನಲ್ಲಿ ಫ‌ಲಪುಷ್ಪ ಪ್ರದರ್ಶನ ಆರಂಭಗೊಂಡಿದೆ.

ಲಾಲ್‌‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ದ್ವಿಶತಕದ ಸಂಭ್ರಮ. ಹೀಗಾಗಿ ವಿಶ್ವ ವಿಖ್ಯಾತ ಮೈಸೂರು ಜಗನ್ಮೋಹನ ಅರಮನೆಯ ಪ್ರತಿರೂಪವನ್ನು ಹೂವಿನಲ್ಲಿ ರಚಿಸಿರುವುದು ಈ ಬಾರಿಯ ವಿಶೇಷ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ಆ.8ರಿಂದ 17ರವರೆಗೆ ಬೆಳಗ್ಗೆ 9ರಿಂದ ಸಂಜೆ 6 ಗಂಟೆಯ ತನಕ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಈ ಅರಮನೆಯನ್ನು ಸುಮಾರು ಮೂರು ಲಕ್ಷಕ್ಕೂ ಅಧಿಕ ಉತ್ಕೃಷ್ಟ ಡಚ್‌‌ತಳಿಯ ಗುಲಾಬಿ ಹೂಗಳನ್ನು ಬಳಸಿ ಅಲಂಕರಿಸಲಾಗಿದೆ. ಈ ಅರಮನೆ 45 ಅಡಿ ಉದ್ದ, 27 ಅಡಿ ಎತ್ತರ ಹಾಗೂ 12 ಅಡಿ ಅಗಲವಿದೆ. 25 ಮಂದಿ ವಿಶೇಷ ಪರಿಣತರ ತಂಡ ಸುಮಾರು 15 ದಿನಗಳ ಕಾಲ ಶ್ರಮಿಸಿ ಹೂವಿನಲ್ಲಿ ಮೈಸೂರು ಅರಮನೆ ನಿರ್ಮಿ‌ಸಿದ್ದಾರೆ.

ಅರಮನೆಗೆ ಹೊಂದಿಕೊಂಡತೆ ಪುಷ್ಪಾಲಂಕೃತ, ಶ್ರೀ ಚಾಮುಂಡಿ ದೇವಿಯ ಅಂಬಾರಿಯನ್ನು ಹೊತ್ತ ಆನೆ ಮತ್ತು ದಸರಾ ಮೆರವಣಿಗೆಯ ಪ್ರತಿರೂಪದ ಗಜಪಡೆ,ಅಶ್ವಪಡೆ, ಸೇನಾಪಡೆಯನ್ನು ಹೂಗಳಿಂದ ನಿರ್ಮಿಸಲಾಗಿದೆ.

ಪುಷ್ಪದಲ್ಲಿ ಅರಳಿದ ಅನಾನಸ್‌, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಅಲಂಕಾರಿಕ ಹೂವಿನ ಗಿಡಗಳ ಬೃಹತ್‌ ವಿನ್ಯಾಸ, ಇಂಡೋ ಅಮೇರಿಕನ್‌ ಹೈಬ್ರಿಡ್‌‌ ಸೀಡ್ಸ್‌ ಕಂಪೆನಿಯ ಆಕರ್ಷ‌ಕ ಅಲಂಕಾರಿಕ ಪುಷ್ಪಗಳ ಜೋಡಣೆ, ಆಂಥೋರಿಯಂ ಹೂವುಗಳು, ಗುಲಾಬಿ, ಜರ್ಬೇರಾ, ಆರ್ಕಿಡ್, ನಂದಿ ಗಿರಿಧಾಮದ ವಿಶೇಷ ಹೂವುಗಳು ಪ್ರದರ್ಶನದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ದ್ವಿಶತಕದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಲಾಲ್‌ ಬಾಗ್ ಇತಿಹಾಸ ನೆನಪಿಸುವ 200 ಛಾಯಾಚಿತ್ರಗಳ ಪ್ರದರ್ಶನವನ್ನು ಈ ಬಾರಿ ಆಯೋಜಿಸಲಾಗಿದೆ.

ಸಸ್ಯ ತೋಟಕ್ಕೆ ಭೇಟಿ ನೀಡಿರುವ ಗಣ್ಯಾತಿಗಣ್ಯರ ಅವಿಸ್ಮರಣೀಯ ಸನ್ನಿವೇಶಗಳ ಹಾಗೂ ಅತಿ ವಿರಳ ಛಾಯಚಿತ್ರಗಳ ಸಂಚಯವವು ಚಿತ್ರ ರಸಿಕರ ಛಾಯರಸಿಕರ ಕಣ್ಮನ ಸೆಳೆಯಲಿವೆ.

Lalbagh flower show

ಪ್ರವೇಶ ಶುಲ್ಕ: ಪ್ರದರ್ಶನಕ್ಕೆ ಆಗಮಿಸುವ ಜನರು ಸಾಮಾನ್ಯ ದಿನಗಳಲ್ಲಿ 40 ರೂ., ರಜಾ ದಿನಗಳಲ್ಲಿ 50 ರೂ. ಪ್ರವೇಶ ಶುಲ್ಕ ಪಾವತಿ ಮಾಡಬೇಕಾಗಿದೆ. ಎಲ್ಲಾ ದಿನಗಳಲ್ಲಿ 12 ವರ್ಷದೊಳಗಿನ ಮಕ್ಕಳಿಗೆ 10 ರೂ. ಶುಲ್ಕ. ಪ್ರದರ್ಶನಕ್ಕೆ ಆ.13 ಹಾಗೂ 14 ರಂದು ಶಾಲಾ ಮಕ್ಕಳಿಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಲಾಲ್‌‌ಬಾಗ್‌ನಲ್ಲಿರುವ ಸುಂದರ ಮೈಸೂರು ಅರಮನೆಯನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+