ವಿದೇಶದಲ್ಲಿ ನೌಕರಿ ಆಮಿಷವೊಡ್ಡಿ ಹತ್ಯೆ ಮಾಡುತ್ತಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಬೆಂಗಳೂರು, ಡಿಸೆಂಬರ್ 8: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅವರನ್ನು ಹತ್ಯೆ ಮಾಡಿ ಬಿಸಾಡುತ್ತಿದ್ದ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ಕೆನಾಡದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪಂಜಾಬ್ ಮೂಲದ ವ್ಯಕ್ತಿಯನ್ನು ಕೊಂದು ರಾಮನಗರದಲ್ಲಿ ಶವವನ್ನು ಬಿಸಾಡಿದ್ದ ಅಬ್ದುಲರ್ ಕರೀಂ ರೆಹಮಾನ್ ಖುರೇಷಿ ಬಳಿ ಬರೋಬ್ಬರಿ 108 ಪಾಸ್‌ಪೋರ್ಟ್‌ಗಳು ಸಿಕ್ಕಿವೆ.
ಮುಂಬೈ ಮೂಲದ ಕರೀಂ ಖುರೇಷಿ ಮನೆ ಮೇಲೆ ದಾಳಿ ನಡೆಸಿ 108 ಪಾಸ್‌ಪೋರ್ಟ್ ಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲಿಂದ ಆಧಾರ್ ಕಾರ್ಡ್, ಎಪಿಕ್ ಕಾರ್ಡ್‌ಗಳು, ಕೆನಾ ಮತ್ತು ಅಮೆರಿಕಾ, ಆಸ್ಟ್ರೇಲಿಯಾ, ಥೈಲ್ಯಾಂಡ್, ಇಂಡೋನೇಷ್ಯಾಗೆ ಪ್ರಯಾಣದ ಮೊಹರು ಇರುವ ಪಾಸ್‌ಪೋರ್ಟ್‌ಗಳು, ವೀಸಾಗಳು, ಸಿಮ್ ಕಾರ್ಡ್, ಮೊಬೈಲ್ ಫೋನ್, 18.5 ಲಕ್ಷ ರೂ ಮತ್ತು 526 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

ನಿರಿದ್ಯೋಗಿಗಳಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿತ್ತಿದ್ದ ಆರೋಪಿಗಳು ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದರು, ಮುಂಬೈ ಇನ್ನಿತರೆ ಕಡೆಗಳಲ್ಲಿ ಅವರನ್ನು ಕೂಡಿಟ್ಟು ಪೋಷಕರಿಂದ ಹಣ ಕೀಳಿತ್ತಿದ್ದರು, ನೀಡದಿದ್ದಲ್ಲಿ ಕೊಲೆ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications