ಬೆಂಗಳೂರು:ಪಿಜಿ ಮಾಲೀಕನ ಕೊಂದಿದ್ದ ಅಡುಗೆ ಭಟ್ಟನ ಬಂಧನ
ಬೆಂಗಳೂರು, ಡಿಸೆಂಬರ್ 16: ಮೈಕೋ ಲೇಔಟ್‌ನಲ್ಲಿ ಪಿಜಿ ಮಾಲೀಕನ ಹತ್ಯೆ ಮಾಡಿ ತಲೆ ಮರೆಸಿಕೊಂಡ ಆರೋಪಿಯನ್ನು ಮೈಕೊ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಶಿವಶಂಕರ್ ದೆಹಲಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಡಿಸೆಂಬರ್ 12 ರಂದು ಈತ ಪಿಜಿ ಮಾಲೀಕ ತಿರುಪಾಲ ರೆಡ್ಡಿಯನ್ನು ಕೊಂದು ಪರಾರಿಯಾಗಿದ್ದ.

2 ಲಕ್ಷ ಹಣದ ಆಸೆಗೆ ತಿರುಪಾಲ ರೆಡ್ಡಿಯನ್ನು ಕೊಲೆ ಮಾಡಿದ್ದಾಗಿ ಬಂಧಿತ ಆರೋಪಿಯು ಪೊಲೀಸರ ಬಳಿ ಕೊಲೆಯ ಕಾರಣ ತಿಳಿಸಿದ್ದಾನೆ, ಬಿಹಾರದ ಮೂಲಕ ಶಿವಶಂಕರ ರೆಡ್ಡಿ ಸದಾ ಸಿಐಡಿ ಧಾರವಾಹಿ ನೋಡುತ್ತಿದ್ದ ಧಾರವಾಹಿಯಲ್ಲಿ ನೋಡಿದಂತೆ ಕೊಲೆ ಮಾಡುವ ಮುಂಚೆ ಸಿಸಿಟಿವಿ ಆಪ್ ಮಾಡಿ ಕೊಲೆ ಮಾಡಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ತಿರುಪಾಲ ರೆಡ್ಡಿಯ ಮೈಕೊ ಲೇಔಟ್‌ನ ಪಿಜಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಶಿವಶಂಕರ್ ಹಣದ ಕಾರಣಕ್ಕೆ ತಿರುಪಾಲರೆಡ್ಡಿಯೊಂದಿಗೆ ಜಗಳ ಮಾಡಿಕೊಂಡು, 2 ಲಕ್ಷದ ಆಸೆಗೆ ಆತನನ್ನು ಚೂರಿ ಹಾಕಿ ಕೊಂದಿದ್ದ. ಇದೀಗ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.












Click it and Unblock the Notifications