ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಮಾಹಿತಿಗೆ ಆಪ್
ಬೆಂಗಳೂರು, ಜ. 14: ವಾಹನ ಚಲಾಯಿಸುವಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೂ ಹಲವು ಬಾರಿ ನಿಯಮ ಉಲ್ಲಂಘನೆ ನಡೆದಿರುತ್ತದೆ. ಉದ್ದೇಶಪೂರ್ವಕವಾಗಿ ಇರಬಹುದು ಅಥವಾ ನಿಯಮದ ಅರಿವಿಲ್ಲದೆ ಇರಬಹುದು. ಆಗ ಪೊಲೀಸರು ಹಿಡಿದರೆ ಪ್ರಕರಣ ಹಾಗೂ ದಂಡ ಗ್ಯಾರಂಟಿ.
ಹೀಗೆ ಸಿಕ್ಕಿಬಿದ್ದವರು ನಂತರ ತಮ್ಮ ಪ್ರಕರಣದ ವಿವರ ತಿಳಿಯದೇ ಪರದಾಡುತ್ತಾರೆ. ವಿವರಕ್ಕಾಗಿ ಪೊಲೀಸ್ ಠಾಣೆ ಅಲೆಯಬೇಕಾಗುತ್ತದೆ. ಆದ್ದರಿಂದ ಬೆಂಗಳೂರು ನಗರ ಪೊಲೀಸ್ ಸ್ಮಾರ್ಟ್ ಫೋನ್ ಬಳಕೆದಾರರಿಗಾಗಿ ಆಪ್ ಬಿಡುಗಡೆ ಮಾಡಿದೆ. [ಮೊಬೈಲ್ ಒನ್ ಸೇವೆ ಪಡೆಯುವುದು ಹೇಗೆ?]

ಈ ಆಪ್ ಬಳಸುವುದು ಹೇಗೆಂಬುದನ್ನು ಬೆಂಗಳೂರು ನಗರ ಪೊಲೀಸ್ ಟ್ವೀಟ್ ಮಾಡಿ ಜನರಿಗೆ ತಿಳಿಸಿದೆ. ಆಪ್ ಬಳಕೆ ಹೇಗೆಂದು ತಿಳಿಯೋಣ ಬನ್ನಿ. [ಆಧಾರ್ ಕಾರ್ಡ್ ಆನ್ ಲೈನ್ ನಲ್ಲೇ ಪಡೆಯಿರಿ]
1) ಗೂಗಲ್ ಪ್ಲೇ ಸ್ಟೋರ್‌ನಿಂದ 'BTP' ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.
2) ಆಪ್ ತೆರೆದು ಮೆನು ಕ್ಲಿಕ್ ಮಾಡಿ, ನಂತರ 'ಫೈಂಡ್ ಲೈನ್ಸ್' ಆಯ್ಕೆ ಮಾಡಿ.
3) ನಿಮ್ಮ ವಾಹನ ಸಂಖ್ಯೆ ನಮೂದಿಸಿ ಮತ್ತು ಸಬ್‌ಮಿಟ್ ಕ್ಲಿಕ್ ಮಾಡಿ. [30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್]
4) ಯಾವುದೇ ನಿಯಮ ಉಲ್ಲಂಘನೆ ಪ್ರಕರಣವು ಬಾಕಿ ಇದ್ದರೆ ಅಲ್ಲಿ ತೋರಿಸುತ್ತದೆ.
5) ಇಲ್ಲಿ ತೋರಿಸಿದ ಸಂಖ್ಯೆಯನ್ನು ದಾಖಲಿಸಿಕೊಂಡು ಮತ್ತೆ ಪರೀಕ್ಷಿಸಲು ಉಪಯೋಗಿಸಬಹುದು.
6) ಈಗಾಗಲೇ ನಿಮ್ಮ ಸಂಖ್ಯೆ ದಾಖಲಿಸಿಕೊಂಡಿದ್ದರೆ 'ಲೋಡ್ ನಂಬರ್' ಒತ್ತಿ ಪ್ರಕರಣ ಪರೀಕ್ಷಿಸಬಹುದು.












Click it and Unblock the Notifications