ಹೈದರಾಬಾದ್ ಕರ್ನಾಟಕಕ್ಕೆ 'ಕಲ್ಯಾಣ ಕರ್ನಾಟಕ' ಎಂದು ಹೆಸರಿಡಲು ಆಗ್ರಹ
ಬೆಂಗಳೂರು, ಜುಲೈ 04: ಹೈದರಾಬಾದ್ ಕರ್ನಾಟಕವು ಹಿಂದಿಳಿದ ಭಾಗ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು ಇದನ್ನು ತೊಡೆದುಹಾಕುವ ಸಲುವಾಗಿ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರಿಡಬೇಕು ಎಂದು ಬಿಜೆಪಿ ಶಾಸಕ ರಾಜಶೇಖರ ಪಾಟೀಲ ಒತ್ತಾಯಿಸಿದರು.
ಸದನದಲ್ಲಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಎಂಬ ಹೆಸರು ದಾಸ್ಯದ ಸಂಕೇತವಾಗಿ ಧ್ವನಿಸುತ್ತದೆ. ಈ ಭಾಗದ ಬಗ್ಗೆ ಹಾಗೂ ಇಲ್ಲಿನ ಜನರ ಬಗ್ಗೆ ಇತರೆ ಕರ್ನಾಟಕದ ಜನಗಳಿಗೆ ಇರುವ ಕೀಳರಿಮೆಯನ್ನು ಹೋಗಲಾಡಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಅವರು ಆಗ್ರಹಿಸಿದರು.
ವೈದ್ಯಕೀಯ ಸೀಟುಗಳ ಕರ್ಮಕಾಂಡ
ವೈದ್ಯಕೀಯ ಸೀಟುಗಳ ಶುಲ್ಕ 50-60 ಲಕ್ಷ ಇದ್ದು, ಸಾಮಾನ್ಯರ ಕೈಗೆ ಎಟುಕದ ರೀತಿಯಲ್ಲಿದೆ. ಮೆಡಿಕಲ್ ಕಾಲೇಜುಗಳ ಮೇಲೆ ನಿಯಂತ್ರಣ ಹೇರಿ, ಬಡವರಿಗೂ ವೈದ್ಯಕೀಯ ಸೀಟುಗಳು ಲಭ್ಯವಾಗುವಂತೆ ಮಾಡಬೇಕಿದೆ ಎಂದು ಶಾಸಕ ರಾಜಶೇಖರ ಪಾಟೀಲ ಒತ್ತಾಯಿಸಿದರು.

ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ವೈದ್ಯ ಅಶ್ವಥ್‌ನಾರಾಯಣ್ ಅವರು, ಮೆಡಿಕಲ್ ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ಪಡೆದು ಕೊನೆಯ ಗಳಿಗೆಯಲ್ಲಿ ಲ್ಯಾಪ್ಸ್ ಮಾಡಲಾಗುತ್ತದೆ. ಖಾಸಗಿ ಆಡಳಿತ ಮಂಡಳಿಗೆ ಆ ಸೀಟು ಲಭ್ಯವಾಗುತ್ತದೆ. ಲ್ಯಾಪ್ಸ್ ಮಾಡಿದ್ದಕ್ಕೆ ಕಡಿಮೆ ಪ್ರಮಾಣದ ದಂಡ ಕಟ್ಟಬೇಕಾಗುತ್ತದೆ. ಲ್ಯಾಪ್ಸ್ ಮಾಡದ ಸೀಟುಗಳನ್ನು ಮಧ್ಯವರ್ತಿಗಳು, ಏಜೆನ್ಸಿ ಸೇರಿ ಮಾರಾಟ ಮಾಡುತ್ತಾರೆ. ಇದೊಂದು ರೀತಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತದೆ ಎಂದು ಅವರು ಚಿತ್ರಣ ಬಿಚ್ಚಿಟ್ಟರು.












Click it and Unblock the Notifications