ಈಶು-ಯಡ್ಡಿ ಕೋಳಿ ಜಗಳಕ್ಕೆ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ಕಲ್ಲು!

ಅತ್ತಿ ಮೇಲಿನ ಕೋಪ ಕೊತ್ತಿ ಮೇಲೆ ಎನ್ನುವಂತೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಕೋಳಿ ಜಗಳಕ್ಕೆ ಬಿಜೆಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವನು ಕೆಲಸ ಕಳೆದುಕೊಳ್ಳಬೇಕಾಗಿದೆ.

ಬೆಂಗಳೂರು, ಏಪ್ರಿಲ್ 28 : ಈಶ್ವರಪ್ಪ ಬಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಶಾಕ್​​ ನೀಡಿದ್ದಾರೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಕೋಳಿ ಜಗಳಕ್ಕೆ ಬಿಜೆಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವನು ಕೆಲಸ ಕಳೆದುಕೊಳ್ಳಬೇಕಾಗಿದೆ.

ಅತ್ತಿ ಮೇಲಿನ ಕೋಪ ಕೊತ್ತಿ ಮೇಲೆ ಎನ್ನುವಂತೆ ಆರ್​​ಎಸ್​ಎಸ್​ ಮುಖಂಡ ಸಂತೋಷ್​ ಜೀ ಆಪ್ತ ಎನ್ನಲಾದ ಮಲ್ಲಿಕಾರ್ಜುನ್​ ಎನ್ನುವರನ್ನು ಬಿಜೆಪಿ ಕಚೇರಿಯ ಕಂಪ್ಯೂಟರ್ ಆಪರೇಟರ್ ಹುದ್ದೆಯಿಂದ ವಜಾಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. [ಸಂತೋಷ್ ಗೆ ಅಧಿಕಾರ ಬೇಕಿಲ್ಲ, ಬಿಜೆಪಿ ಬಿಕ್ಕಟ್ಟಿನ ಅಸಲಿ ಕಾರಣ ಏನು?]

Central bjp office staff dismissed for helping Eshwarppa's save bjp conference

ಮಲ್ಲಿಕಾರ್ಜುನ್​ ಕಳೆದ 10 ವರ್ಷಗಳಿಂದ ಬಿಜೆಪಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್​​​​​​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅತೃಪ್ತರ ಸಮಾವೇಶದ ವೇಳೆಯಲ್ಲಿ ಮಲ್ಲಿಕಾರ್ಜುನ್​ ಸಹಕಾರ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಅಷ್ಟೇ ಅಲ್ಲದೆ ಮಲ್ಲಿಕಾರ್ಜುನ್​ ಸಮಾವೇಶ ಕರ ಪತ್ರ ತಯಾರಿಕೆ, ಕೆಲ ನಾಯಕರಿಗೆ ಇಮೇಲ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಈಗ ಮಲ್ಲಿಕಾರ್ಜುನ್​ ನನ್ನು ಬಿಜೆಪಿ ಕಚೇರಿ ಕೆಲಸದಿಂದ ಯಡಿಯೂರಪ್ಪ ವಜಾಗೊಳಿಸಿದ್ದಾರೆ.

ರಾತ್ರಿ 10 ಗಂಟೆ ವರೆಗೆ ಕಚೇರಿಯಲ್ಲಿರುತ್ತಿದ್ದ. ಹಾಗೂ ಸಿಐಡಿ ತರ ಕೆಲಸ ಮಾಡುತ್ತಿದ್ದ ಆದ್ದರಿಂದ ವಜಾ ಮಾಡಲಾಗಿದೆ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+