ದಿನೇ ದಿನೇ ಹೆಚ್ಚುತ್ತಿದೆ ಕಾವೇರಿ ಕಿಚ್ಚು: ಬೆಂಗಳೂರಿನಲ್ಲಿ ಘರ್ಜಿಸಿದ ಕನ್ನಡ ಪರ ಹೋರಾಟಗಾರರು
ಬೆಂಗಳೂರು, ಅಕ್ಟೋಬರ್ 05: ಕಾವೇರಿಗಾಗಿ ಕನ್ನಡ ಒಕ್ಕೂಟದಿಂದ ಇಂದು ಕೆಎಸ್‌ಅರ್ ಮುತ್ತಿಗೆ ಹಾಕಲು ಬ್ರಹತ್ ರ್‍ಯಾಲಿ ಸಾಗಿದ್ದು ಕಾವೇರಿ ನಮ್ಮ ಸ್ವಾಭಿಮಾನದ ಪ್ರತೀಕ ರಕ್ತ ಕೊಟ್ಟೆವು ಆದ್ರೆ ಕಾವೇರಿ ನೀರು ಬಿಡೆವು ಅಂತ ವಾಟಾಳ್ ನಾಗರಾಜ್ ನೇತೃತ್ವದ ನೂರಾರು ಕನ್ನಡಪರ ಸಂಘಟನೆಗಳು ಇಂದು ಬೆಂಗಳೂರಿನಲ್ಲಿ ಮತ್ತೆ ಘರ್ಜಿಸಿದೆ.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕೆಆರ್‌ಎಸ್‌ಗೆ ಮುತ್ತಿಗೆ ಸಾಗುತ್ತಿದ್ದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ರ್ಯಾಲಿ ಆರಂಭವಾಗಿದೆ. ಬೃಹತ್ ರ್‍ಯಾಲಿ ಹಿನ್ನೆಲೆಯಲ್ಲಿ ಮೈಸೂರು ಬ್ಯಾಂಕ್‌ನಲ್ಲಿ ಅಹಿತಕರ ಘಟನೆಗಳು ನಡೆಯದ ರೀತಿ ಹಲಸೂರು ಗೇಟ್ ಎಸಿಪಿ ನೇತೃತ್ವದಲ್ಲಿ ಪೋಲಿಸ್ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿತ್ತು. 2 ಇನ್ಸ್ಪೆಕ್ಟರ್ 10 ಪಿಎಸ್‌ಐ, 5 ಎಎಸ್ಐ ಸೇರಿ 80 ಪೋಲಿಸ್ ಸಿಬ್ಬಂದಿ 2ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು.

ಇನ್ನು ಮೈಸೂರು ಬ್ಯಾಂಕ್ ಸರ್ಕಲ್ ಇಂದ ವಾಟಾಳ್ ರ್‍ಯಾಲಿಗೆ ಸಾ.ರಾ ಗೋವಿಂದ್, ರೂಪೇಶ್ ರಾಜಣ್ಣ ಹೀಗೆ ಸಾಕಷ್ಟು ಮುಖಂಡರು ಕನ್ನಡ ಪರ ಹೋರಾಟಗಾರರು ಸಾತ್ ಕೊಟ್ಟಿದ್ದರು. ಬೈಕ್ ರ್ಯಾಲಿ ಆರಂಭ ಆಗುವ ಮುನ್ನ ಸಾ.ರಾ ಗೋವಿಂದ್ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ್ದು, ಇಂದು ಕೆಆರ್‌ಎಸ್‌ಗೆ ಮುತ್ತಿಗೆ ಹಾಕುತ್ತೇವೆ. ಅಕ್ಟೋಬರ್ 10ರಂದು ಎಲ್ಲಾ ಹೆದ್ದಾರಿ, ಗಡಿ ಬಂದ್ ಮಾಡುತ್ತೇವೆ, ಬೆಳಿಗ್ಗೆ 11.30 ರಿಂದ ಸಂಜೆ 5 ವರೆಗೂ ಬಂದ್ ಮಾಡುತ್ತೇವೆ. ಕಠಿಣ ಹೋರಾಟಕ್ಕೆ ಕರೆ ಕೊಡುತ್ತಿದ್ದೆವೆ ಎಂದು ತಿಳಿಸಿದರು.
ಇನ್ನು ಬಿಗ್ ಬಾಸ್ ಖ್ಯಾತಿಯ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಕಾವೇರಿಗಾಗಿ ನಿತ್ಯ ಹೋರಾಟ ಮಾಡಲು ಸಿದ್ಧ ಅಂತ ಗುಡುಗಿದರು. ಎಲ್ಲಿಯವರೆಗೂ ನಾವು ಹೋರಾಟ ಮಾಡುತ್ತೇವೆ ಎಂದರೆ ಸರ್ಕಾರ ನೀರು ನಿಲ್ಲಿಸುವರೆಗೆ ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದರು.

ಇನ್ನೂ ಬೆಂಗಳೂರಿನಲ್ಲಿ ವಿವಿಧ ಕಡೆ ರಸ್ತೆ ರಸ್ತೆಯಲ್ಲಿ ರ್ಯಾಲಿ ಮಾಡಿದ್ದು ಕಾವೇರಿ ಹೋರಾಟದ ವಿಚಾರವಾಗಿ ಜನರಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಪ್ರಮುಖ ಜಂಕ್ಷನ್‌ಗಳಲ್ಲಿ ಗಾಡಿ ನಿಲ್ಲಿಸಿ ಜನರುನ್ನಿದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್ 'ಕಾವೇರಿಗಾಗಿ ಮಾಡುವ ಹೋರಾಟದಲ್ಲಿ ಕೈ ಜೋಡಿಸಿ ಅಂತ ಕರೆ ಕೊಟ್ಟರು. ಇವತ್ತೊಂದೆ ದಿನ ಹೋರಾಟ ಸೀಮಿತವಾಗಿಲ್ಲ. ಮುಂದೆ ಹೆದ್ದಾರಿ ಬಂದ್ ಮಾಡ್ತೇವೆ' ಎಂದು ಘೋಷಿಸಿದರು.
ಒಟ್ಟಿನಲ್ಲಿ ಕಾವೇರಿ ನೀರಿಗಾಗಿ ಹೋರಾಟದ ಕಹಳೆಯನ್ನು ವಾಟಾಳ್ ನಾಗರಾಜ್ ಮೊಳಗಿಸಿದ್ದು, ಸಾವಿರಾರು ಕನ್ನಡಪರ ಸಂಘಟನೆಗಳು ವಾಟಾಳ್ ನಾಗರಾಜ್ ಅವರಿಗೆ ಸಾಥ್ ನೀಡಿದ್ದಾರೆ.












Click it and Unblock the Notifications