Get Updates
Get notified of breaking news, exclusive insights, and must-see stories!

ಜಲಮಂಡಳಿ: ನ್ಯಾಪ್‌ಕಿನ್ಸ್‌ ವಿತರಣೆ ಹಾಗೂ ನಾಶ ಪಡಿಸುವ ಯಂತ್ರ ಸ್ಥಾಪನೆ

ಬೆಂಗಳೂರು, ಆಗಸ್ಟ್ 1: ಬೆಂಗಳೂರು ನೀರು ಸರಬರಾಜು ಮಂಡಳಿಯು ಸ್ಯಾನಿಟರಿ ನ್ಯಾಪ್‌ಕಿನ್‌ ಮತ್ತು ನ್ಯಾಪ್‌ಕಿನ್‌ಗಳನ್ನು ದಹಿಸಿ ನಾಶಪಡಿಸುವ ಯಂತ್ರವನ್ನು ಮೊದಲ ಬಾರಿಗೆ ಅಳವಡಿಸಿದೆ.

ಈಗಾಗಲೇ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೀಗೊಂದು ಯಂತ್ರವನ್ನು ಅಳವಡಿಸಲಾಗಿದೆ. ಅದು ಎಟಿಎಂ ರೂಪದಲ್ಲಿ ಇರುತ್ತದೆ. ಮಂಡಳಿಯು ಸನ್‌ ಗ್ರೀನ್‌ ಆರ್ಗ್ಯಾನಿಕ್‌ ತ್ಯಾಜ್ಯ ವಿಲೇವಾರಿ ನಿರ್ವಹಣಾ ಸ್ವಯಂಸೇವಾ ಸಂಸ್ಥೆ ಅಳವಡಿಸಿದೆ.

ಇದರಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ವೆಂಡಿಂಗ್‌ ಇನ್‌ಸಿನರೇಟರ್‌ ಎರಡು ಯಂತ್ರಗಳನ್ನು 34 ಸಾವಿರ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಈ ವೆಂಡಿಂಗ್‌ ಮೆಷಿನ್‌ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಬಳಸಬಹುದಾಗಿದೆ.

BWSSB installs sanitary napkin machine

ಸ್ವಚ್ಛತೆ ಹಾಗೂ ಶುಚಿತ್ವ ಇರುವೆಡೆ ಉತ್ತಮ ಆರೋಗ್ಯ ಇರುತ್ತದೆ. ಆರೋಗ್ಯ ಉತ್ತಮವಾಗಿದ್ದರೆ ಕಾರ್ಯಕ್ಷಮತೆಯೂ ಹೆಚ್ಚಿರುತ್ತದೆ. ಮಹಿಳಾ ಸಿಬ್ಬಂದಿಗಳ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದೆ, ತುರ್ತು ಸಂದರ್ಭದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಣಾ ಯಂತ್ರದಲ್ಲಿ ಐದು ರೂ. ನಾಣ್ಯ ಹಾಕಿ ಸ್ಯಾನಿಟರಿ ನ್ಯಾಪ್‌ಕಿನ್‌ ಪಡೆಯಬಹುದು. ಈ ಯಂತ್ರದಲ್ಲಿ ಅಗತ್ಯಕ್ಕೆ ತಕ್ಕಂತೆ ಸ್ಯಾನಿಟರಿ ನ್ಯಾಪ್‌ಕಿನ್‌ ತುಂಬಿಸಬಹುದಾಗಿದೆ.
ಈ ಯಂತ್ರ ವಿವಿಧ ಮಾದರಿಯಲ್ಲಿ ಲಭ್ಯವಿದ್ದು 5 ಪ್ಯಾಕ್‌ನಿಂದ ಒಂದು ಕೆಜಿಯವರೆಗೂ ನ್ಯಾಪ್‌ಕಿನ್‌ಗಳನ್ನು ವಿಲೇವಾರಿ ಮಾಡಲು ಸಹಕಾರಿಯಾಗಿದೆ. ಸದ್ಯ ಬಿಡಬ್ಲ್ಯೂ ಎಸ್‌ಎಸ್‌ಬಿಯಲ್ಲಿ 20 ಸ್ಯಾನಿಟರಿ ಪ್ಯಾಡ್‌ ವಿಲೇವಾರಿ ಮಾಡುವ ಯಂತ್ರ ಅಳವಡಿಸಲಾಗಿದೆ. ಈ ಯಂತ್ರ ನೆಲದ ಮೇಲೆ, ತೆರೆದ ಪ್ರದೇಶದಲ್ಲಿ ಟೆರೇಸ್‌ ಅಥವಾ ಗೋಡೆಯ ಮೇಲೆ ಹಾಗೂ ಶೌಚಾಲಯದಲ್ಲಿ ಅಳವಡಿಸಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+