ಗಾಡಿ ಪಂಚರ್ ಎಂದು ಕೆಳಕ್ಕೆ ಬಗ್ಗಿದರೆ 15 ಲಕ್ಷ ರು. ಮಂಗಮಾಯ!
ಬೆಂಗಳೂರು, ಅಕ್ಟೋಬರ್, 14: ಬೆಂಗಳೂರು ಬರುಬರುತ್ತಾ ಕಳ್ಳರ ಸಂತೆಯಾಗಿ ಮಾರ್ಪಟ್ಟಿದೆ. ಕಳ್ಳರ ಕಾಟಾದಿಂದ ನಾಗರಿಕರು ಸದಾ ಭಯದಲ್ಲಿಯೇ ಓಡಾಡುವಂತಾಗಿದೆ. ಯಾವುದೇ ಅಮೂಲ್ಯಭರಿತವಾದ ವಸ್ತುಗಳನ್ನು ಹಗಲಿನಲ್ಲಿಯೂ ತೆಗೆದುಕೊಂಡು ಹೋಗಲು ದಿಗಿಲಿಗೆ ಒಳಗಾಗುತ್ತಾರೆ.
ಗಿರಿನಗರದ ಸೀತಾ ಸರ್ಕಲ್ ನಲ್ಲಿ ಉದ್ಯಮಿಯೊಬ್ಬರಿಂದ 15 ಲಕ್ಷ ರೂ ಹಣವಿದ್ದ ಬ್ಯಾಗ್ ದರೋಡೆ ಮಾಡಿ ಪರಾರಿಯಾದ ಘಟನೆ ಅಕ್ಟೋಬರ್ 14ರ ಬುಧವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರು ನಿವಾಸಿ ಬಾಲಯ್ಯ ಎಂಬಾತ ಕಳ್ಳರ ಕುತಂತ್ರಕ್ಕೆ ಬಲಿಯಾದ ದುರಾದೃಷ್ಠವಂತ.[ಈ ಸರಗಳ್ಳರ ಎದುರು ಹಾಲಿವುಡ್ ಸಾಹಸ ದೃಶ್ಯ ಏನಿಲ್ಲ!]

ಬಾಲಯ್ಯ ನಗರದ ಎಸ್ ಬಿಐ ಬ್ಯಾಂಕಿನಿಂದ ಬುಧವಾರ ಬೆಳಿಗ್ಗೆ ಹಣ ಡ್ರಾ ಮಾಡಿಕೊಂಡು ಬರುವುದನ್ನು ಗಮನಿಸಿದ ಕಳ್ಳರು ಅವರ ಯೋಜನೆಯಂತೆ ಕಾರನ್ನು ಪಂಚರ್ ಮಾಡಿದ್ದರು. ಆಗ ಪಂಚರ್ ಆಗಿರುವುದನ್ನು ಬಾಲಯ್ಯ ಪರಿಶೀಲಿಸುತ್ತಿದ್ದ ವೇಳೆ ಹಣ ಕಸಿದು ಕಾಲು ಕಿತ್ತಿದ್ದಾರೆ.
ಪಲ್ಸರ್ ಬೈಕಿನಲ್ಲಿ ಬಂದಿದ್ದ ಇಬ್ಬರು ಕಳ್ಳರು ಈ ಕೃತ್ಯ ಎಸಗಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣ ಕಳೆದುಕೊಂಡು ಚಿಂತಾಕ್ರಾತನಾದ ಬಾಲಯ್ಯ ಅವರಿಗೆ ಪೊಲೀಸರು ಹಣವನ್ನು ಶೀಘ್ರವಾಗಿ ತಲುಪಿಸುವ ಭರವಸೆ ನೀಡಿದ್ದಾರೆ. ಈಗಾಗಲೇ ಪೊಲೀಸರು ಕಳ್ಳರ ಜಾಲಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications