ಬೆಂಗಳೂರು : ಗ್ಯಾಂಗ್ ರೇಪ್‌ಗೆ ಬಳಸಿದ್ದ ಟಿಟಿ ಪೊಲೀಸರ ವಶಕ್ಕೆ
ಬೆಂಗಳೂರು, ಅಕ್ಟೋಬರ್ 06 : ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಕಾಲ್ ಸೆಂಟರ್ ಉದ್ಯೋಗಿ ಮೇಲೆ ಟೆಂಪೋ ಟ್ರಾವೆಲರ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಮಂಗಳವಾರ ಕೃತ್ಯಕ್ಕೆ ಬಳಸಿದ್ದ ಟೆಂಪೋ ಟ್ರಾವೆಲರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅತ್ಯಾಚಾರ ನಡೆಸಿದ ಆರೋಪಿಗಳನ್ನು ಬಂಧಿಸಲು ಪೊಲೀಸರು ಮೂರು ತಂಡಗಳನ್ನು ರಚನೆ ಮಾಡಿದ್ದರು. ಒಂದು ತಂಡ ಟಿಟಿ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿತ್ತು. ವಾಹನದ ನೋಂದಣಿ ಸಂಖ್ಯೆಯ ಪತ್ತೆ ಕಾರ್ಯವನ್ನು ಪೊಲೀಸರು ಆರಂಭಿಸಿದ್ದರು. [ಅಕ್ಟೋಬರ್ 3ರ ರಾತ್ರಿ ಏನಾಯ್ತು?]

ಮಂಗಳವಾರ ಮಧ್ಯಾಹ್ನದ ವೇಳೆಗೆ ಕೃತ್ಯಕ್ಕೆ ಬಳಸಿದ ಟಿಟಿ ಪತ್ತೆಯಾಗಿದೆ. ಇಂದಿರಾನಗರ ಆರ್‌ಟಿಓ ಕಚೇರಿಯಲ್ಲಿ 2003ರಲ್ಲಿ ಈ ಟೆಂಪೋ ಟ್ರಾವೆಲರ್ ನೋಂದಣಿ ಮಾಡಿಸಲಾಗಿತ್ತು. ಕೆಎ03 - ಬಿ1863 ನಂಬರಿನ ಟಿಟಿ ಶಂಕರ್ ಅವರ ಹೆಸರಿನಲ್ಲಿ ನೋಂದಣಿಯಾಗಿದೆ. [ಬೆಂಗಳೂರಿನ ರಸ್ತೆಗಳು ರಾತ್ರಿ ಸುರಕ್ಷಿತವೇ?]
ಈ ಟಿಟಿಯ ಚಾಲಕ ಮತ್ತು ಕ್ಲೀನರ್ 22 ವರ್ಷದ ಯುವತಿಯ ಮೇಲೆ ಅಕ್ಟೋಬರ್ 3ರ ಶನಿವಾರ ರಾತ್ರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ನಂತರ ಆಕೆಯನ್ನು ರಸ್ತೆಗೆ ತಳ್ಳಿ ಪರಾರಿಯಾಗಿದ್ದರು. ಈ ಘಟನೆ ನಡೆದ ದಿನ ಯಾರು? ಟಿಟಿಯನ್ನು ಓಡಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.
ಮಂಗಳವಾರ ಬೆಳಗ್ಗೆ ಪೊಲೀಸರ ಒಂದು ತಂಡ ಮೂವರನ್ನು ಈ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಟೆಂಪೋ ಟ್ರಾವೆಲರ್ ಸಿಕ್ಕಿದ್ದರಿಂದ ಪೊಲೀಸರ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.












Click it and Unblock the Notifications