ಬೆಂಗಳೂರು : 5 ಲಕ್ಷ ಮೌಲ್ಯದ ಬೋರ್‌ವೆಲ್ ಬಿಟ್‌ ಕಳ್ಳತನ

ಬೆಂಗಳೂರು, ಏಪ್ರಿಲ್ 03 : ಕೊಳವೆ ಬಾವಿ ಕೊರೆಯುವ ಲಾರಿಯಲ್ಲಿದ್ದ 32 ಬಿಟ್‌ಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿದೆ.

ಸೋಂಪುರ ಹೋಬಳಿಯ ಹಳೆನಿಜಗಲ್ ಬಡಾವಣೆಯಲ್ಲಿ ಸೋಮವಾರ ರಾತ್ರಿ ಈ ಕಳ್ಳತನ ನಡೆದಿದೆ. ಲಾರಿಯಲ್ಲಿದ್ದ 32 ಬಿಟ್‌ಗಳನ್ನು ಕಳ್ಳರು ದೋಚಿದ್ದು, ಇದರ ಮೌಲ್ಯ ಸುಮಾರು 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಪ್ರತಾಪ್ ಎಂಬುವವರಿಗೆ ಸೇರಿದ ಕೊಳವೆ ಬಾವಿ ಕೊರೆಯುವ ಲಾರಿಯಲ್ಲಿದ್ದ ಬಿಟ್ ಕಳ್ಳತನವಾಗಿದೆ. ಸೋಮವಾರ ರಾತ್ರಿ ಮನೆಯ ಬಳಿ ಲಾರಿ ನಿಲ್ಲಿಸಿ ಚಾಲಕ ಮತ್ತು ಕೂಲಿಕಾರರು ಶೆಡ್‌ನಲ್ಲಿ ಮಲಗಿದ್ದರು. ಒಂದು ಬೈಕ್‌ ಮತ್ತು 4 ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಕೊಳವೆ ಬಾವಿಗಳನ್ನು ಕೊರೆಯಲು ಉಪಯೋಗಿಸುವ ಬಿಟ್‌ಗಳನ್ನು ಕದ್ದಿದ್ದಾರೆ.

Borewell drilling bits stolen in Dabaspet

ಲಾರಿ ನಿಲ್ಲಿಸಿದ್ದ ಸ್ಥಳ ಮತ್ತು ಲಾರಿಯಲ್ಲಿ ಸಿಸಿಟಿವಿಗಳಿದ್ದು, ಕಳ್ಳತನದ ದೃಶ್ಯಗಳು ಸೆರೆಯಾಗಿವೆ. ಕಳವು ಮಾಡುವಾಗ ಉಂಟಾದ ಶಬ್ದ ಕೇಳಿ ಕೂಲಿಕಾರರು ಎದ್ದು ಬಂದಿದ್ದು, ಆಗ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.

ಎಲ್ಲಾ ಆರೋಪಿಗಳು ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡಿದ್ದರು. ಲಾರಿಯ ಬಳಿ ಬಂದ ಕಾರಿಗೆ ನಂಬರ್ ಪ್ಲೇಟ್ ಸಹ ಇರಲಿಲ್ಲ. ಆದ್ದರಿಂದ, ಯಾವುದೇ ಸಾಕ್ಷಿ ಸಿಗದಂತೆ ಸಂಚು ರೂಪಿಸಿ ಕಳ್ಳತನ ಮಾಡಿರುವುದು ತಿಳಿದುಬಂದಿದೆ.

ಕಳ್ಳತನಕ್ಕೆ ಸಹಾಯ ಮಾಡಲು ಬಂದಿದ್ದ ಬೈಕ್‌ನಲ್ಲಿದ್ದ ವ್ಯಕ್ತಿಯ ಡಿಲ್ ಸ್ಥಳದಲ್ಲಿಯೇ ಬಿದಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಇದು ಸಹಕಾರಿಯಾಗಲಿದೆ. ಡಾಬಸ್‌ ಪೇಟೆ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಲಾಗಿದೆ.

Borewell drilling bits stolen in Dabaspet

ಕಳುವಾಗಿರುವ ಬಿಟ್‌ಗಳು ಕೇವಲ 2 ಅಡಿ ಇರುತ್ತದೆ. ಈ ಬಿಟ್‌ನಿಂದಲೇ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತದೆ. ಡಾಬಸ್‌ಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+