BMTC: ಅಧಿಕಾರಿಗಳ ಸಹಿ ನಕಲು, 3 ವರ್ಷದಲ್ಲಿ 7ಬಾರಿ ವಂಚನೆ, 8ಮಂದಿ ಆರೋಪಿಗಳು, ₹1 ಕೋಟಿ ನಷ್ಟ
ಬೆಂಗಳೂರು, ಜುಲೈ 31: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವ್ಯಾಪ್ತಿಯಲ್ಲಿನ ವಿವಿಧ ಯೋಜನೆಗಳ ಟೆಂಡರ್‌ಗಳಲ್ಲಿ ಕೆಲವರಿಗೆ ಅನುಕೂಲ ಮಾಡಿಕೊಡಲು ನಿಗಮ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳ ಸಹಿಯನ್ನು ಸುಮಾರು ಎಂಟು ಮಂದಿ ನಕಲು ಮಾಡಿದ್ದಾರೆ. ಹಣ ಲಪಟಾಯಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಹಿರಿಯ ಅಧಿಕಾರಿಗಳ ಸಹಿ ನಕಲು ಮಾಡಿರುವ ಈ ಅಧಿಕಾರಿಗಳು ವಾಣಿಜ್ಯ ಸ್ಥಳಗಳ ಬಾಡಿಗೆ ಗುತ್ತಿಗೆ ಮಂಜೂರು ಮತ್ತು ವಿಸ್ತರಣೆ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸುಮಾರು 1 ಕೋಟಿ ರೂಪಾಯಿಯಷ್ಟು ಹಣವನ್ನು ಇವರು ಸರ್ಕಾರಕ್ಕೆ ನಷ್ಟ ಮಾಡಿದ್ದಾರೆಂದು ಆರೋಪಿಸಲಾಗಿದೆ ಎಂದು TOI ವರದಿ ಮಾಡಿದೆ.

ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಪಾಲಿಕೆ ಕಾರ್ಯದರ್ಶಿ, ವಿಭಾಗೀಯ ಸಂಚಾರಿ ಅಧಿಕಾರಿ ಹಾಗೂ ಇತರರು ಈ ಅಕ್ರಮ ವೆಸಗಿದ್ದು, ಆರೋಪಿ ಸ್ಥಾನದಲ್ಲಿದ್ದಾರೆ. ಪ್ರಕರಣ ಸಂಬಂಧ ಶಾಂತಿನಗರದ ಕೇಂದ್ರ ಕಚೇರಿಯ ಬಿಎಂಟಿಸಿಯ ಸಹಾಯಕ ಭದ್ರತಾ ಮತ್ತು ಜಾಗೃತ ಅಧಿಕಾರಿ ರಮ್ಯಾ ಅವರು ದೂರು ನೀಡಿದ್ದಾರೆ.
ಒಟ್ಟು ಏಳು ವಂಚನೆಗಳು ನಡೆದಿವೆ
ಈ ದೂರಿನ ಆಧಾರದಲ್ಲಿ ವಿಲ್ಸನ್ ಗಾರ್ಡನ್ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೊದಲ ಪ್ರಕರಣವು 4 ವಂಚನೆಗಳಿಗೆ ಸಂಬಂಧಿಸಿದ್ದಾಗಿದ್ದು, ಎರಡನೇ ಪ್ರಕರಣ ಮೂರು ವಂಚನೆಗಳಿಗೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ.
ಆರೋಪಿಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಕಾರ್ಯದರ್ಶಿ ಶ್ರೀರಾಮ್ ಮುಲ್ಕಾವನ್ ಅಧಿಕಾರಿಯು ಹಗರಣ ನಡೆದಾಗ ಬಿಎಂಟಿಸಿಯಲ್ಲಿ ಮುಖ್ಯ ಸಂಚಾರ ನಿಯಂತ್ರಕರಾಗಿ ಕೆಲಸ ಮಾಡುತ್ತಿದ್ದರು. ಶಾಮಲಾ ಮದ್ದೋಡಿ, ವಿಭಾಗೀಯ ಸಂಚಾರಿ ಅಧಿಕಾರಿ ಡಾ. ಸಹಾಯಕ ಸಂಚಾರ ವ್ಯವಸ್ಥಾಪಕ ಮಮತಾ ಬಿ.ಕೆ. ಗುಣಶೀಲ, ಸಹಾಯಕ ಸಂಚಾರ ಅಧೀಕ್ಷಕಿ ಅನಿತಾ ಟಿ. ಸತೀಶ್, ಸಂಚಾರ ನಿರೀಕ್ಷಕರಾದ ಗೋಪಿ ಮತ್ತು ಕಿರಿಯ ಸಹಾಯಕ ಪ್ರಕಾಶ ಕೊಪ್ಪಳ ಅವರು ಆಪಾದಿತರು.

ಈ ಮೂರು ವರ್ಷ ನಡೆದ ವಂಚನೆ
ಈ ಆರೋಪಿಗಳು 2020 ಮಾರ್ಚ್ 9 ರಂದು ಹಾಗೂ 2023ರ ಜುಲೈ 27ವರೆಗಿನ ಅವಧಿಯಲ್ಲಿ ನಿಗಮಕ್ಕೆ ವಂಚನೆ ಮಾಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಜೊತೆಗೆ ಐಎಎಸ್ ಅಧಿಕಾರಿಗಳಾದ ಅನ್ಬು ಕುಮಾರ್, ಡಾ ರೇಜು ಕುಮಾರ್ ಮತ್ತು ಶಿಖಾ ಅವರು ಸಹಿ ಸಹ ನಕಲು ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದೇ ವರ್ಷ ಜನವರಿ ಸಹಿ ನಕಲು (ಫೋರ್ಜರಿ) ಪ್ರಕರಣ ಬೆಳಕಿಗೆ ಬಂದಿದ್ದು, ದೂರಿನ ಮೇರೆಗೆ ಪೊಲೀಸರು ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಒಟ್ಟು ಏಳು ವಂಚನೆಯ ಘಟನೆ ನಡೆದಿವೆ. ಆರೋಪಿಗಳು ಒಟ್ಟು ಸುಮಾರು ಒಂದು ಕೋಟಿ ರೂಪಾಯಿಯಷ್ಟು ಹಣವನ್ನು ಬಿಎಂಟಿಸಿಗೆ ನಷ್ಟ ಮಾಡಿದ್ದಾರೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಎಲ್ಲ ಪ್ರಕರಣಗಳ ದಾಖಲೆ ಪರಿಶಿಲಿಸಲಾಗುತ್ತಿದೆ. ಅಗತ್ಯಗನುಗುಣವಾಗಿ ಆರೋಪಿಗಳ ವಿಚಾರಣೆ ಮಾಡಲಾಗುವುದು. ನಂತರವಷ್ಟೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಆರೋಪಿಗಳ ವಿರುದ್ಧ IPC 420 (ವಂಚನೆ ಮತ್ತು ಅಪ್ರಾಮಾಣಿಕತೆ), IPC 465 (ನಕಲಿ), IPC 468 (ವಂಚನೆಯ ಉದ್ದೇಶಕ್ಕಾಗಿ ನಕಲಿ), IPC 471 (ನಕಲಿ ಎಂದು ಬಳಸಿ), ಮತ್ತು IPC 408 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications