ಅಕ್ಟೋಬರ್ ತಿಂಗಳಿನಲ್ಲಿ ಬಿಎಂಟಿಸಿ ಇ ಬಸ್ ಸೇವೆ ಆರಂಭ!
ಬೆಂಗಳೂರು, ಆಗಸ್ಟ್ 24: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ಬಸ್ ಖರೀದಿಗೆ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಗುತ್ತಿಗೆ ಆಧಾರದ ಮೇಲೆ ಬಸ್ ಸಂಚಾರ ಆರಂಭವಾಗಲಿದೆ.
ಮೊದಲ ಹಂತದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ 80 ಎಲೆಕ್ಟ್ರಿಕ್ ಬಸ್‌ಗಳು ಉದ್ಯಾನ ನಗರಿ ಬೆಂಗಳೂರಿನ ರಸ್ತೆಗೆ ಇಳಿಯಲಿವೆ. ಈ ಪೈಕಿ 60 ಎಸಿ ಬಸ್ ಹಾಗೂ 20 ನಾನ್ ಎಸಿ ಬಸ್ ಗಳು ಸಂಚರಿಸಲಿವೆ. ಇ ಬಸ್ ಸಂಚಾರಕ್ಕಾಗಿ ಕೇಂದ್ರ ಸರ್ಕಾರದಿಂದ 74 ಕೋಟಿ ರು ಸಿಕ್ಕಿದೆ. ಈ ಪೈಕಿ 14 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಹೈದರಾಬಾದ್ ಮೂಲದ ಗೋಲ್ಡ್ ಸ್ಟೋನ್ ಕಂಪನಿಗೆ ಗುತ್ತಿಗೆ ಸಿಕ್ಕಿದ್ದು, 150 ಬಸ್ ಗಳನ್ನು ನಿರ್ಮಿಸಿ, ಬಿಎಂಟಿಸಿಗೆ ನೀಡಲಿದೆ. ಗುತ್ತಿಗೆ ಪಡೆದ ಗೋಲ್ಡ್‌ಸ್ಟೋನ್ ಕಂಪನಿ ಫೈನಾನ್ಸಿಯಲ್ ಬಿಡ್‌ನಲ್ಲಿ 12 ಮೀಟರ್ ಉದ್ದದ 35 ಸೀಟುಗಳ ಬಸ್‌ಗೆ ಪ್ರತಿ ಕಿ.ಮೀಗೆ 37.5 ರೂ. ಬಿಡ್ ಮಾಡಿತ್ತು.

ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಯಿಂದ ನಿಗಮಕ್ಕೆ 10-15 ರೂ. ಉಳಿತಾಯವಾಗಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ಬಸ್ ಖರೀದಿಗೆ ಅನುದಾನ ನೀಡಲು ಒಪ್ಪಿಗೆ ನೀಡಿಲ್ಲ.
Faster Adoption and Manufacturing of Electric Vehicles India (FAME India) ಅಡಿಯಲ್ಲಿ ಪ್ರತಿ ಬಸ್ ಮೇಲೆ 1 ಕೋಟಿ ರು ಸಬ್ಸಿಡಿಗಾಗಿ ಸಾರಿಗೆ ನಿಗಮ ಮನವಿ ಮಾಡಿತ್ತು. ಆದರೆ, 1 ಕೋಟಿ ರು ಎಸಿ ಬಸ್ ಗಳಿಗೆ ಹಾಗೂ ನಾನ್ ಎಸಿ ಬಸ್ ಗಳಿಗೆ 73 ಲಕ್ಷ ರು ಸಿಗಲಿದೆ.
ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಯಿಂದ ನಿಗಮಕ್ಕೆ 10-15 ರೂ. ಉಳಿತಾಯವಾಗಲಿದೆ.
ಈಗಿರುವ ಬಿಎಂಟಿಸಿಯ ಹವಾನಿಯಂತ್ರಿತ ಮಾದರಿ ಬಸ್‌ಗಳ ಪ್ರಯಾಣದರವೇ ಇರುತ್ತದೆ. ಈ ಬಸ್ ಗಳಿಂದ ಸಾರಿಗೆ ಸಂಸ್ಥೆಗೆ ಉಳಿತಾಯವಾಗುವುದಲ್ಲದೆ, ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.
ಎಚ್ ಎಸ್ ಆರ್ ಲೇ ಔಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿಗಳಲ್ಲಿ ಬಸ್ ಚಾರ್ಜಿಂಗ್ ಪಾಯಿಂಟ್ ಇರಿಸಲಾಗುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಒಂದು ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲಾಗುತ್ತದೆ. ಮೊದಲ ಹಂತದ ಬಳಿಕ 500 ಬಸ್ ಗಳಿಗೆ ಹೊಸದಾಗಿ ಟೆಂಡರ್ ಕರೆಯಲಾಗುತ್ತದೆ.












Click it and Unblock the Notifications