ಬೆಂಗಳೂರಿಗರ ಮೇಲೆ ಮತ್ತೊಂದು ಸೆಸ್‌: ಬಿಬಿಎಂಪಿಗೆ ಬಿಎಂಟಿಸಿ ಪ್ರಸ್ತಾವ

ಬೆಂಗಳೂರು, ಜು.12: ಸಾವಿರ ಕೋಟಿ ಸಾಲದಿಂದ ಬಳಲುತ್ತಿರುವ ಬಿಎಂಟಿಸಿ ಇದೀಗ ನಷ್ಟವನ್ನು ಭರಿಸಿಕೊಳ್ಳಲು ಬಿಬಿಎಂಪಿಯಿಂದ ಸೆಸ್‌ ವಸೂಲಿ ಮಾಡಲು ಮುಂದಾಗಿದೆ.

ಈ ಕುರಿತು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸಾರಿಗೆ ಇಲಾಖೆಯಿಂದ ಬಿಬಿಎಂಪಿಗೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ಸರಿಸುಮಾರು 1 ಸಾವಿರ ಕಿ.ಮೀ ರಸ್ತೆಗಳಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ಆದರೆ ಪ್ರತಿ ತಿಂಗಳು ಬಿಬಿಎಂಪಿ ರಸ್ತೆ ಅಗೆಯುವುದರಿಂದ ಬಿಎಂಟಿಸಿ ಬಸ್‌ಗಳಿಗೆ ಹಾನಿ ಉಂಟಾಗುತ್ತಿದೆ ಎಂಬುದು ಬಿಎಂಟಿಸಿಯ ಆರೋಪ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ನಗರದ ನಾಗರಿಕರಿಂದ ಸಾರಿಗೆ ಸೆಸ್ ವಸೂಲಿ ಮಾಡಿ ಬಿಬಿಎಂಪಿಯಿಂದ ಬಿಎಂಟಿಸಿಗೆ ಭರಿಸಬೇಕೆಂಬುದು ಬಿಎಂಟಿಸಿಯ ವಾದವಾಗಿದೆ. ಬೆಂಗಳೂರು ನಗರದ ನಾಗರಿಕರಿಗೆ ನಗರ ಆಡಳಿತ ಸಂಸ್ಥೆಯಾಗಿ ಬಿಬಿಎಂಪಿ ನೀಡುವ ಸೌಕರ್ಯಗಳಲ್ಲಿ ಸಾರಿಗೆ ಸೌಕರ್ಯವೂ ಒಂದಾಗಿರುವುದರಿಂದ ಕಾನೂನು ಪ್ರಕಾರ ಬಿಬಿಎಂಪಿಗೆ ಸಾರಿಗೆ ಸೆಸ್ ವಸೂಲಿ ಮಾಡಲು ಅವಕಾಶವಿದೆ.

BMTC proposes transport session from BBMP

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಮತ್ತಿತರೆ ತೆರಿಗೆ ವಸೂಲಿ ವೇಳೆ ಈ ಸೆಸ್‌ ಕೂಡ ವಸೂಲಿ ಮಾಡಬೇಕು, ನಂತರ ಆ ಮೊತ್ತವನ್ನು ಬಿಎಂಟಿಸಿಗೆ ಭರಿಸಬೇಕು ಎಂಬುದು ಸಾರಿಗೆ ಇಲಾಖೆಯ ವಾದವಾಗಿದೆ. ಇದಕ್ಕೆ ಬಿಬಿಎಂಪಿ ಯಾವ ರೀತಿಯಲ್ಲಿ ಪ್ರತಿಕ್ರಿಯಿ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+