3 ಹೊಸ ಮಾರ್ಗವನ್ನು ಪರಿಚಯಿಸಿದ ಬಿಎಂಟಿಸಿ, ಬಸ್ ಸಂಖ್ಯೆ ವಿವರ
ಬೆಂಗಳೂರು, ಜೂನ್ 27: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊಸ ಮಾರ್ಗವನ್ನು ಪರಿಚಯಿಸಿದೆ. ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಮೂರು ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
1/7/2024 ರಿಂದ ಬಿಎಂಟಿಸಿಯ ನಾನ್ ಎಸಿ ಬಸ್ಗಳು ಹೊಸ ಮಾರ್ಗದಲ್ಲಿ ಸಂಚಾರ ನಡೆಸಲಿವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಚಕ್ರ-1, ಚಕ್ರ-1ಎ, 225-ಎಫ್ ಎಂಬು ಮಾರ್ಗವನ್ನು ವಿಭಾಗ ಮಾಡಲಾಗಿದೆ. ಈ ಮಾರ್ಗದ ಬಸ್ಗಳು ನೆಲಮಂಗಲ-ನೆಲಮಂಗಲವನ್ನು ವಿವಿಧ ಮಾರ್ಗದ ಮೂಲಕ, ಜಾಲಹಳ್ಳಿ ಕ್ರಾಸ್-ನೆಲಮಂಗಲವನ್ನು ಸಂಪರ್ಕ ಕಲ್ಪಿಸುತ್ತಿವೆ.
ಬಸ್ ಮಾರ್ಗದ ವಿವರ: ಚಕ್ರ-1ಎ ಮಾರ್ಗದ ಬಸ್ ನೆಲಮಂಗಲ-ನೆಲಮಂಗಲ ನಡುವೆ ಸಂಚಾರ ನಡೆಸಲಿವೆ. 1 ಬಸ್ 9 ಟ್ರಿಪ್ ಸಂಚಾರ ನಡೆಸಲಿದೆ. ಈ ಬಸ್ ಬಸವನಹಳ್ಳಿ, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಹಸ್ಕೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ನಾಗನೂರು ಕ್ರಾಸ್, ನಾಗನೂರು, ನಂದರಾಮಪಾಳ್ಯ, ಬಿನ್ನಿಮಂಗಲ ಮಾರ್ಗದಲ್ಲಿ ಸಂಚಾರ ನಡೆಸಲಿದೆ.
ಚಕ್ರ-2ಎ ಮಾರ್ಗ ಬಸ್. ನೆಲಮಂಗಲ-ನೆಲಮಂಗಲ ನಡುವೆ ಸಂಚಾರ ನಡೆಸಲಿದೆ. 1 ಬಸ್ ಈ ಮಾರ್ಗದಲ್ಲಿ 9 ಟ್ರಿಪ್ ಸಂಚಾರ ನಡೆಸಲಿದೆ. ಈ ಬಸ್ ಬಿನ್ನಿಮಂಗಲ, ನಂದರಾಮಪಾಳ್ಯ, ನಾಗನೂರು, ನಾಗನೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ಹಸ್ಕೂರು ಕ್ರಾಸ್, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಬಸವನಹಳ್ಳಿ ಮೂಲಕ ಸಂಚಾರ ನಡೆಸುತ್ತದೆ.
225-ಎಫ್ ಬಸ್. ಜಾಲಹಳ್ಳಿ ಕ್ರಾಸ್-ನೆಲಮಂಗಲ ನಡುವೆ ಸಂಚಾರ ನಡೆಸಲಿದೆ. ಈ ಮಾರ್ಗದಲ್ಲಿ 1 ಬಸ್ 8 ಟ್ರಿಪ್ ಸಂಚಾರ ನಡೆಸಲಿದೆ. ಮಾರಿಷನ್ ಫ್ಯಾಕ್ಟರಿ, ಮಾದನಾಯಕನಹಳ್ಳಿ, ಮಾಕಳಿ, ನಾಗನೂರು ಕ್ರಾಸ್, ನಾಗನೂರು, ನಂದರಾಮನಪಾಳ್ಯ, ಬಿನ್ನಿಮಂಗಲ ಮೂಲಕ ಸಂಚಾರ ನಡೆಸಲಿದೆ.
ಚಕ್ರ-1 ಮಾರ್ಗದ ಬಸ್ ನೆಲಮಂಗಲದಿಂದ 7.30, 8.30, 9.35, 11.05, 12.05, 13.30, 14.30, 15.55 ಮತ್ತು 17 ಗಂಟೆಗೆ ಹೊರಡಲಿದೆ.
ಚಕ್ರ-1ಎ ಮಾರ್ಗದ ಬಸ್ ನೆಲಮಂಗಲದಿಂದ 8, 9, 10.05, 11.35, 12.35, 14.00, 15.00, 16.30, 17.35ಕ್ಕೆ ಹೊರಡಲಿದೆ.
225-ಎಫ್ ಬಸ್ ಜಾಲಹಳ್ಳಿ ಕ್ರಾಸ್ನಿಂದ 10.10, 12.45, 15.20 ಮತ್ತು 17.40ಕ್ಕೆ ಹೊರಡಲಿದೆ. ನೆಮಲಂಗಲದಿಂದ 09.05, 11.40, 14.15, 16.35ಕ್ಕೆ ಹೊರಡಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣಿಕರ ಬೇಡಿಕೆಯಂತೆ ಜೂನ್ 22ರಂದು ಹೊಸ ಮಾರ್ಗವನ್ನು ಪರಿಚಯಿಸಿತ್ತು. ಬಸ್ ಹೊರಡುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಒಂದು ಮಾರ್ಗದ ಬಸ್ 302-ಕೆ ಶಿವಾಜಿನಗರ- ಕೆ ಚನ್ನಸಂದ್ರ ನಡುವೆ ಸಂಚಾರ ನಡೆಸುತ್ತದೆ. ಈ ಮಾರ್ಗದ ಬಸ್ ಐಟಿಸಿ, ಸೇವಾನಗರ, ಬಾಣಸವಾಡಿ, ಹೊರಮಾವು, ಜಯಂತಿ ನಗರ, ಕಲ್ಕೆರೆ ಮೂಲಕ ಸಂಚಾರ ನಡೆಸುತ್ತದೆ.
2ನೇ ಮಾರ್ಗ 401-ಎನ್. ಬನಶಂಕರಿ ಬಸ್ ನಿಲ್ದಾಣ- ಮಲ್ಲೇಶ್ವರ ಬಸ್ ನಿಲ್ದಾಣ 18ನೇ ಕ್ರಾಸ್. ಈ ಮಾರ್ಗದ ಬಸ್ ವಿಜಯನಗರ, ಮಾಗಡಿ ರಸ್ತೆ ಟೋಲ್ಗೇಟ್, ಇಎಸ್ಐ, ನವರಂಗ್ ಮೂಲಕ ಸಂಚಾರ ನಡೆಸುತ್ತದೆ.
-
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ












Click it and Unblock the Notifications