Video Viral: ಚಲಿಸುತ್ತಿದ್ದ ಕಾರಿನ ಮೇಲೆ ಎರಗಿ ಹೋದ BMTC ಬಸ್: ಚಾಲಕನ ವರ್ತನೆಗೆ ಜನಾಕ್ರೋಶ

ಬೆಂಗಳೂರು, ಅಕ್ಟೋಬರ್ 25: ಬೆಂಗಳೂರಿನಲ್ಲಿ ಜನದಟ್ಟಣೆ, ವಾಹನ ದಟ್ಟಣೆ ಸರ್ವೇ ಸಾಮಾನ್ಯವಾಗಿದೆ. ರಸ್ತೆಗುಂಡಿ, ಸಾವು ನೋವುಗಳು ನಡೆಯುತ್ತವೆ ಇರುತ್ತವೆ. ರಸ್ತೆ ಮಧ್ಯೆ ಕಾರೊಂದಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಡಿಕ್ಕಿ ಹೊಡೆಯಲು ಪ್ರಯತ್ನಿಸಿದಂತೆ ತೋರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ಈ ಘಟನೆ ನಡೆದಿರುವುದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗು ಹೆಬ್ಬಾಳ, ಯಲಹಂಕ ರಸ್ತೆಯಲ್ಲಿ. ಬಿಎಂಟಿಸಿ ಬಸ್ ಹ್ಯುಂಡೈ ಐ20 ಕಾರಿಗೆ ಡಿಕ್ಕಿ ಹೊಡೆಯಲು ಪ್ರಯತ್ನಿಸಿದ್ದ ವಿಡಿಯೋ ಇದಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಆ ಬಸ್ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹ ಕೇಳಿ ಬಂದಿದೆ.

BMTC Bus Tries to Hyundai i20 on Airport Road Viral Dashcam Video Sparks Outrage

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹೆಚ್ಚು ಹರಿದಾಡುತ್ತಿದೆ. ಬಿಎಂಟಿಸಿ ಬಸ್ ರಸ್ತೆಯಲ್ಲಿ ಚಲಿಸುವಾಗ ಅಕ್ಕಪಕ್ಕ ಕಾರುಗಳನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಮಧ್ಯದಲ್ಲಿದ್ದ ಐ20 ಕಾರಿನ ಕಡೆಗೆ ಆಕ್ರಮಣಕಾರಿಯಾಗಿ ಚಲಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಓವರ್‌ಟೇಕ್ ಗೆ ಕಾದು ದಿಢೀರನೇ ಕಾರಿನತ್ತ ಚಲಾಯಿಸಿದೆ. ಬಸ್ ಅನ್ನು ಓವರ್ ಟೇಕ್ ಮಾಡಲು ಐ20 ಕಾರು ಚಾಲಕ ಬಿಟ್ಟಿಲ್ಲವಾದ್ದರಿಂದ ಆತನಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಯಲು ಬಿಎಂಟಿಸಿ ಚಾಲಕ ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ಈ ವೈರಲ್ ವಿಡಿಯೋ ಅನ್ನು ಬೆಂಗಳೂರು ನಗರ ಸಂಚಾರಿ ಪೊಲಿಸರಿಗೆ ಟ್ಯಾಗ್ ಮಾಡಲಾಗಿದೆ. ಈ ಘಟನೆಯನ್ನು ಕೊಲೆ ಪ್ರಯತ್ನವೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ವೈರಲ್ ವೀಡಿಯೊವನ್ನು ಇಲ್ಲಿ ವೀಕ್ಷಿಸಿ

ಬಿಎಂಟಿಸಿ ಬಸ್ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್‌ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದೆ. ಅಕ್ಟೋಬರ್ 19 ರಂದು ಮಧ್ಯಾಹ್ನ 1:12 ಕ್ಕೆ ಈ ಘಟನೆ ನಡೆದಿದೆ. ಬಸ್ ಚಾಲಕನ ಅಜಾಗರೂಕ ವರ್ತನೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಇಂತಹ ಚಾಲಕರ ವಿರುದ್ಧ ಸಂಬಂಧಿಸಿದ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ನಾಗರಿಕರು/ಕಾರುಗಳು ಓಡಾಡುವ ಸ್ಥಿತಿ ಬೆಂಗಳೂರಲ್ಲಿ ಇಲ್ಲದಂತಾಗಿದೆ.

ರಸ್ತೆಯ ಒಂದು ಬದಿಯಲ್ಲಿ ತೆರಳದ ಬಸ್ ರಸ್ತೆ ಮಧ್ಯದ ಲೈನ್‌ನಲ್ಲಿ ಏಕಿದೆ? ಕಾರಿಗೆ ಇಷ್ಟು ಹತ್ತಿರ ಹೋಗುವ ಬಸ್ ಚಾಲಕನ ಉದ್ದೇಶವೇನಾಗಿತ್ತು. ಈ ರಸ್ತೆಗಳಲ್ಲಿ ಚಾಲಕರು ರೇಸಿಂಗ್ ಮಾಡಲು ಸಿದ್ಧರಿದ್ದಾರೆಯೇ? ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಕಾರು ಚಾಲಕ ರಸ್ತೆ ನಿಯಮಗಳನ್ನು ಪಾಲಿಸಿದ್ದಾನೆ. ರಸ್ತೆ ಬಲ ಭಾಗದ ಲೈನ್ ನಲ್ಲಿ ಪ್ರತಿ ಗಂಟೆಗೆ 80 ಕಿ.ಮೀ. ಮಧ್ಯ ಲೈನ್‌ನಲ್ಲಿ 60 ಕಿ.ಮೀ. ಬಸ್ ಸಂಚಾರ ಮಾಡಿದೆ. ಬಸ್ ಚಾಲಕನ ಪರವಾನಗಿ ರದ್ದು ಮಾಡುವಂತೆ ಮತ್ತೊಬ್ಬರು ಒತ್ತಾಯಿಸಿದ್ದಾರೆ. ಬಸ್ ಚಾಲಕನದ್ದು ಇದೊಂದು ಬೆದರಿಕೆಯ ವರ್ತನೆ ಎಂದು ಕೆಲವರು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+