ಗುಡ್‌ನ್ಯೂಸ್: BMTC ಹೊಸ ಬಸ್ ನಿಲ್ದಾಣ, ಬಸ್‌ಗಳ ಸಂಚಾರ ಆರಂಭ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಸೆಪ್ಟಂಬರ್ 03: ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ನಿತ್ಯದ ಪ್ರಯಾಣಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳನ್ನು ಅವಲಂಬಿಸಿದ್ದಾರೆ. ನಗರದಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಹೆಚ್ಚಿನ ಬಸ್ ಖರೀದಿಸುತ್ತಿರುವ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಮೂರು ವರ್ಷಗಳಿಂದ ಬಸ್ ನಿಲ್ದಾಣದ ಕಾಮಗಾರಿಯು ಕಾರಣಾಂತರಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. ಇದೀಗ ಸಿದ್ಧವಾದ ಎರಡು ಬಸ್‌ಬೇಗಳು ಸಿದ್ಧವಾಗಿದ್ದು, ಬಸ್‌ಗಳ ಸಂಚಾರ ಸಹ ಶುರುವಾಗಿದೆ.
ಹೌದು, ಇತ್ತೀಚೆಗೆ ಕರ್ನಾಟಕ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳ ಸಮ್ಮುಖದಲ್ಲಿ ನಗರದ ನೆಲಮಂಗಲದ ಬಸ್ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾಮಗಾರಿ ತ್ವರಿತ ಪೂರ್ಣಕ್ಕೆ ಸೂಚಿಸಿದರು. ಸಚಿವರ ಭೇಟಿಯಿಂದಾಗಿ ಸುಮಾರು ಎರಡು ವರ್ಷಗಳ ನಂತರ ಇಲ್ಲಿಂದ ಬಿ.ಎಂ.ಟಿ.ಸಿ ಬಸ್ಸುಗಳ ಕಾರ್ಯಚರಣೆ ಆರಂಭವಾಯಿತು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2023 ರಲ್ಲಿ ನೆಲಮಂಗಳದಲ್ಲಿ ಪ್ರಾರಂಭವಾದ ಬಸ್ ನಿಲ್ದಾಣದ ಕಾಮಗಾರಿಯು ಕಾರಣಾಂತರಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯದಿಂದ ವಂಚಿತರಾಗಿದ್ದರು. ಈವಿಷಯವು ಸಾರಿಗೆ ಸಚಿವರ ಗಮನಕ್ಕೆ ಬಂದ ಕೂಡಲೇ ಸ್ಥಳೀಯ (ನೆಲಮಂಗಲ ವಿಧಾನಸಭಾ ಕ್ಷೇತ್ರ) ಶಾಸಕ ಶ್ರೀನಿವಾಸ್ ಹಾಗೂ KSRTC ಮತ್ತು BMTC ವ್ಯವಸ್ಥಾಪಕ ನಿರ್ದೇಶಕರು ಹಾಗೂ ನೆಲಮಂಗಲ ನಗರಸಭಾ ಅಧ್ಯಕ್ಷರೊಂದಿಗೆ ಬಸ್ ನಿಲ್ದಾಣ ವೀಕ್ಷಿಸಿದರು. ಅಧಿಕಾರಿಗಳು ಈ ವೇಳೆ ಅಗತ್ಯ ಮಾಹಿತಿ ಸಚಿವರಿಗೆ ನೀಡಿದರು.
ಬಸ್ ಬೇ ಕಾಮಗಾರಿಗೆ 30 ದಿನ ಗಡುವು
ಕಾಮಗಾರಿ ಪ್ರಗತಿಯಲ್ಲಿರುವ ನೂತನ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ವಾಹನಗಳ ಕಾರ್ಯಾಚರಣೆಗೆ ನಿಗದಿಪಡಿಸಿರುವ ನಾಲ್ಕು ಬಸ್ ಬೇಗಳಲ್ಲಿ ಎರಡು ಬಸ್ ಬೇ ಗಳ ಕಾಮಗಾರಿ ಸಂಪೂರ್ಣಗೊಂಡಿವೆ. ಇನ್ನೂ ಎರಡು ಬಸ್ ಬೇಗಳ ಕಾಮಗಾರಿಯನ್ನು 30 ದಿನಗಳೊಳಗೆ ಪೂರ್ಣಗೊಳಿಸಬೇಕೆಂದು ಸಚಿವರು ತಿಳಿಸಿದರು. ತದನಂತರ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲು ಯೋಜಿಸಿರುವ ವಾಣಿಜ್ಯೋದ್ದೇಶ ಕಟ್ಟಡಗಳ ಕಾಮಗಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರು ಸದರಿ ಬಸ್ ನಿಲ್ದಾಣಕ್ಕೆ ಮುಖ್ಯರಸ್ತೆಯಿಂದ ಸಂಪರ್ಕಿಸುವ ರಸ್ತೆಯು ತುಂಬಾ ಚಿಕ್ಕದಾಗಿದೆ. ಇದರಿಂದಾಗಿ ಬಸ್ ಗಳು ಸದರಿ ರಸ್ತೆಯಲ್ಲಿ ಸಂಚರಿಸಿದರೆ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂಬ ಮಾಹಿತಿಯನ್ನು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸಚಿವರು ರಸ್ತೆಯ ಅಗಲ ಹೆಚ್ಚಿಸಿ ಯೋಜನಾ ಬದ್ಧವಾಗಿ ಬಸ್ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಕಾರ್ಯಸೂಚಿ ರೂಪಿಸಲು ಮುಖ್ಯ ಕಾಮಗಾರಿ ಅಭಿಯಂತರರಿಗೆ ನಿರ್ದೇಶಿಸಿದ್ದಾರೆ.
ಒಂದು ವರ್ಷದಲ್ಲಿ ನಿಲ್ದಾಣ ಪೂರ್ಣಕ್ಕೆ ತಾಕೀತು
ಇನ್ನೂ ಸೋಮವಾರ ನಡೆದ ಸಭೆಯಲ್ಲಿ ಸಚಿವರು ಮತ್ತು ಶಾಸಕರು, ಕೆಎಸ್ ಆರ್ ಟಿ ಸಿ/ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರುಗಳ ಜತೆಗೆ ಈ ನಿರ್ಮಾಣ ಹಂತದ ಬಸ್ ನಿಲ್ದಾಣ ಕುರಿತು ಚರ್ಚಿಸಿದರು. ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸಭೆಯಲ್ಲಿ ಸಚಿವರು ತಾಕೀತು ಮಾಡಿದರು.
ಮಾತ್ರವಲ್ಲದೇ ಈಗಾಗಲೇ ಕಾಮಗಾರಿ ಪೂರ್ಣಗೊಂಡ ಬಸ್ ಬೇ ಗಳನ್ನು ಬಸ್‌ಗಳ ಕಾರ್ಯಾಚರಣೆಗಾಗಿ ಉಪಯೋಗಿಸುವಂತೆ ಸೂಚಿಸಿದರು ಇದರಿಂದಾಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಂಸ್ಥೆಯ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಬಾಕಿ ಇರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು. ಸಚಿವರ ಸೂಚನೆ ಬೆನ್ನಲ್ಲೆ ಬಿ.ಎಂ.ಟಿ.ಸಿಯ ಬಸ್‌ಗಳ ಕಾರ್ಯಾರಣೆ ಆರಂಭವಾಗಿದೆ. ಈ ಭಾಗದ ಸಾವಿರಾರು ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಿದೆ.












Click it and Unblock the Notifications