ಬೆಂಗಳೂರು : ಲಗ್ಗೆರೆ ಬಳಿ ಹೊತ್ತಿ ಉರಿದ ಬಿಎಂಟಿಸಿ ಬಸ್
ಬೆಂಗಳೂರು, ಜ.29 : ಚಲಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಲಗ್ಗೆರೆ ಬಳಿ ಗುರುವಾರ ನಡೆದಿದೆ. ಚಾಲಕ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೆಂಗೇರಿಯಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನ ಇಂಜಿನ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಚಾಲಕ ಬಸ್‌ಅನ್ನು ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಸಿಳಿಸಿದ್ದಾನೆ, ಇದರಿಂದ ಅನಾಹುತ ತಪ್ಪಿದೆ. [ಬಿಎಂಟಿಸಿ ಆಪ್: ಬೆರಳ ತುದಿಯಲ್ಲೇ ಪ್ರಯಾಣ ಮಾಹಿತಿ]

ಎರಡು ಅಗ್ನಿ ಶಾಮಕದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ. ಬಸ್‌ನ ಅರ್ಧಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸ್‌ನಲ್ಲಿ 25 ಪ್ರಯಾಣಿಕರಿದ್ದರು. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಬಿಎಂಟಿಸಿ ಬಗ್ಗೆ ಜನರ ದೂರುಗಳೇನು? ಇಲ್ಲಿದೆ ಸಮೀಕ್ಷೆ]
ವಾರದಲ್ಲಿ ಎರಡನೇ ಘಟನೆ : ಸೋಮವಾರ ಸಹ ಬಿಎಂಟಿಸಿ ಬಸ್ಸು ಬೆಂಕಿಗಾಹುತಿಯಾಗಿತ್ತು. ಒಂದೇ ವಾರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಸೋಮವಾರ ಹಳೆ ಮದ್ರಾಸ್ ರಸ್ತೆಯಲ್ಲಿ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿತ್ತು. ಪ್ರಯಾಣಿಕರು ಯಾವುದೇ ಅಪಾಯವಾಗದಂತೆ ಪಾರಾಗಿದ್ದರು.












Click it and Unblock the Notifications