Bengaluru-Mysuru expressway: ಹೆದ್ದಾರಿ ಜಲಾವೃತವಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ಸಂಸದ ಪ್ರತಾಪ್ ಸಿಂಹ

ಅಕ್ಕಪಕ್ಕದ ಮಾದಾಪುರ ಮತ್ತು ಇತರ ಹಳ್ಳಿಗಳ ಗ್ರಾಮಸ್ಥರು ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಮಾರ್ಗವನ್ನು ನಿರ್ಮಿಸಲು ಚರಂಡಿ ಮುಚ್ಚಿದ್ದಾರೆ.

ಬೆಂಗಳೂರು, ಮಾರ್ಚ್ 19: 'ಬಹುಶಃ ಬೈದು, ಟೀಕಿಸಿ, ಕುಹಕವಾಡಿ ಮುಗಿಯಿತು ಅಂದುಕೊಳ್ಳುತ್ತೀನಿ..!' ಇದು ಸಂಸದ ಪ್ರತಾಪ್ ಸಿಂಹ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಜಲಾವೃತದ ಬಗ್ಗೆ ಟೀಕಿಸಿದವರಿಗೆ ಕೊಟ್ಟ ತಿರುಗೇಟು. ಕಾರಣ ತಿಳಿದುಕೊಳ್ಳದೇ ಸುಮ್ಮನೆ ಕುಹಕವಾಡಿದ್ದಾರ ಎಂದು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ.

ಗುರುವಾರ ರಾತ್ರಿ ಸುರಿದ ಮಳೆಗೆ ಶುಕ್ರವಾರ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಜಲಾವೃತವಾಗಿತ್ತು. ಕಳೆದ ವರ್ಷದ ಮಳೆಗಾಲದಲ್ಲಿ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿರಲಿಲ್ಲ, ರಸ್ತೆಯುದ್ದಕ್ಕೂ ನೀರು ತುಂಬಿ ವಾಹನ ಸಂಚಾರಕ್ಕೆ ಪರದಾಡುವಂತಾಗಿತ್ತು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಮಾಡಿದ್ದಾರೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೂ ಮೊನ್ನೆ ಬೊದ್ದ ಒಂದೇ ಒಂದು ಮಳೆಗೆ ರಾಷ್ಟರೀಯ ಹೆದ್ದಾರಿ ಸಂಪೂರ್ಣ ಜಲಾವೃತವಾಇ ವಾಹನ ಸವಾರರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದರು.

BJP MP Pratap Simha Explains Why Bengaluru-Mysuru expressway Got Fooded

ಬೇಸಿಗೆಯ ಒಂದೇ ಒಂದು ಮಳೆಗೂ ರಸ್ತೆ ತುಂಬಿ, ಸೇತುವೆ ಕೆಳಗೆ ನೀರು ತುಂಬಿ ಅಪಘಾತಗಳಿಗೂ ಕಾರಣವಾಯಿತು. ಇದಕ್ಕೆ ಸಾರ್ವಜನಿಕರು, ಪ್ರತಿಪಕ್ಷಗಳು ಟೀಕೆಗಳ ಮಳೆಯನ್ನೇ ಸುರಿಸಿದ್ದರು. ಆದರೆ, ರಸ್ತೆಯಲ್ಲಿ ನೀರು ನಿಲ್ಲಲು ಕಾರಣವೇ ಬೇರೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ಅಕ್ಕಪಕ್ಕದ ಮಾದಾಪುರ ಮತ್ತು ಇತರ ಹಳ್ಳಿಗಳ ಗ್ರಾಮಸ್ಥರು ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಮಾರ್ಗವನ್ನು ನಿರ್ಮಿಸಲು ಚರಂಡಿ ಮುಚ್ಚಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೂಡ ಮಾಹಿತಿ ನೀಡಿದೆ.

ಈ ಬಗ್ಗೆ ವಿಡಿಯೋವೊಂದನ್ನು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಕೊಡಗು ಮೈಸೂರು ಸಂಸದ ಪ್ರತಾಪ್‌ ಸಿಂಹ, 'ಬಹುಶಃ ಬೈದು, ಟೀಕಿಸಿ, ಕುಹಕವಾಡಿ ಮುಗಿಯಿತು ಅಂದುಕೊಳ್ಳುತ್ತೀನಿ! ಮಳೆ ನೀರು ಹೋಗುವ ಚರಂಡಿಯನ್ನು ಯಾರೋ ರಸ್ತೆ ಮಾಡಿಕೊಳ್ಳಲು ಅನಧಿಕೃತವಾಗಿ ಮುಚ್ಚಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಕೆಲಕಾಲ ಈಜುಕೊಳವಾಗಿತ್ತು. ಎರಡು Hume Pipe ಹಾಕಿ ಸರಿಪಡಿಸಿದ್ದೇವೆ. ಧನ್ಯವಾದಗಳು..' ಎಂದು ತಿಳಿಸಿದ್ದಾರೆ.

BJP MP Pratap Simha Explains Why Bengaluru-Mysuru expressway Got Fooded

ಇದೇ ವಿಷಯದ ಬಗ್ಗೆ ಸ್ಪಷ್ಟನೆ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, "ಕರ್ನಾಟಕದಲ್ಲಿ ನಿನ್ನೆ (17.03.2023) ರಾತ್ರಿ, ಹೆಚ್ಚಿನ ಮಳೆಯಾಗಿದೆ (ಸಾಮಾನ್ಯ 0.1 ಮಿಮೀಗಿಂತ 3.9 ಮಿಮೀ). ಗ್ರಾಮಸ್ಥರು ಕಿಮೀ. 42.640 ದೂರವನ್ನು ಕಡಿಮೆ ಮಾಡಲು ಸುಮಾರು 3 ಮೀಟರ್ ಅಗಲದ ಒಳಚರಂಡಿ ಮಾರ್ಗವನ್ನು ಮುಚ್ಚಿದ ಪರಿಣಾಮವಾಗಿ ಮೇಲ್ಸೇತುವೆಯ ಕೆಳಗೆ ನೀರು ನಿಂತು ರಸ್ತೆ ಜಲಾವೃತವಾಗಿದೆ ಎಂದು ಮಾಹಿತಿ ನೀಡಿದೆ.

"ಮಾದಾಪುರ ಮತ್ತು ಇತರರು ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಹೋಗಲು ಕಿ.ಮೀ.42.640 ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಹೀಗಾಗಿ 3 ಮೀ ಅಗಲದವರೆಗೆ ಒಳ ಚರಂಡಿಯನ್ನು ಮಣ್ಣಿನಿಂದ ಮುಚ್ಚುವ ಮೂಲಕ ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಮಾರ್ಗವನ್ನು ನಿರ್ಮಿಸಿದ್ದಾರರೆ. ಈ ಕಾರಣದಿಂದ ಮಳೆ ಬಂದಾಗ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ರಸ್ತೆ ಮುಳುಗುವಿಕೆಗೆ ಕಾರಣವಾಗಿದೆ" ಎಂದಿದೆ.

BJP MP Pratap Simha Explains Why Bengaluru-Mysuru expressway Got Fooded

ಅನಧಿಕೃತವಾಗಿ ಗ್ರಾಮಸ್ಥರು ಹಾಕಿದ್ದ ದಿಬ್ಬವನ್ನು 18.03.2023 ರಂದು ಮುಂಜಾನೆಯೇ ತೆರವುಗೊಳಿಸಲಾಗಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು 1.2 ಮೀಟರ್‌ ವ್ಯಾಸದ ಎರಡು ಸಾಲಿನ ಪೈಪಲ್‌ಗಳನ್ನು ಅಳವಡಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+