ಡಿ.ಕೆ. ಸುರೇಶ್ ಸೋಲಿಗೆ ಸಿಎಂ ಸಿದ್ದರಾಮಯ್ಯ ಕಾರಣ?
ಡಿ.ಕೆ. ಸುರೇಶ್ ಅವರ ಸೋಲು ಕರ್ನಾಟಕ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಹೀಗೆ ದಿಢೀರ್ ಸೋಲು ಎದುರಾದ ಕಾರಣಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕನಲಿದ್ದಾರೆ. ಹಾಗಾದ್ರೆ ಡಿ.ಕೆ. ಸುರೇಶ್ ಅವರ ಸೋಲಿಗೆ ಕಾರಣ ಯಾರು? ಎಂಬ ಚರ್ಚೆ ಜೋರಾಗಿದೆ. ಇದೇ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಡಿ.ಕೆ. ಸುರೇಶ್ ಸೋಲಿಗೆ ಕಾರಣ ಎಂಬ ಗಂಭೀರ ಆರೋಪ ಮಾಡಲಾಗಿದೆ.
2024ರ ಲೋಕಸಭೆ ಚುನಾವಣೆ ಭಾರಿ ಜಿದ್ದಾಜಿದ್ದಿನಿಂದ ಕೂಡಿತ್ತು, ಹಾಗೇ ಸದ್ದು ಮಾಡಿತ್ತು. ಯಾಕಂದ್ರೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಪಿಎಂ ಮೋದಿ ಹ್ಯಾಟ್ರಿಕ್ ಬಾರಿಸಲು ಸಜ್ಜಾಗಿದ್ರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಭಾರತದ ಮೂಲೆ ಮೂಲೆಯಲ್ಲಿ ಸದ್ದು ಮಾಡಿ, ಸುದ್ದಿಯಾಗಿತ್ತು. ಯಾಕಂದ್ರೆ ಈ ಕ್ಷೇತ್ರದಲ್ಲಿ ಸತತವಾಗಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನ ಕಟ್ಟಿಹಾಕಲು ನೇರ ಬಿಜೆಪಿ ಕೇಂದ್ರ ನಾಯಕರೇ ಸಿದ್ಧತೆ ಮಾಡಿದ್ದರು.

ಅಲ್ಲದೆ ಜೆಡಿಎಸ್ ವರಿಷ್ಠ & ಎಚ್.ಡಿ. ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರನ್ನೇ ಡಿ.ಕೆ. ಸುರೇಶ್ ಅವರ ವಿರುದ್ಧ ಕಣಕ್ಕೆ ಇಳಿಸಿದ್ದರು. ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥರಾಗಿದ್ದ ಡಾ. ಮಂಜುನಾಥ್ ನಿವೃತ್ತಿ ಪಡೆದು ರಾಜಕೀಯಕ್ಕೆ ಬಂದಿದ್ದರು. ಕೊನೆಗೂ ಡಾಕ್ಟರ್ ಮಂಜುನಾಥ್ ಗೆದ್ದರು. ಆದರೆ ಹೀಗೆ ಡಿ.ಕೆ. ಸುರೇಶ್ ಸೋಲಿಗೆ ಯಾರು ಕಾರಣ? ಎಂಬ ಪ್ರಶ್ನೆಗೆ ಬಿಜೆಪಿ ಗಂಭೀರ ಆರೋಪದ ಮೂಲಕ ಉತ್ತರ ನೀಡಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಡಿ.ಕೆ. ಸುರೇಶ್ ಸೋಲಿಗೆ ಕಾರಣ ಎಂದಿದೆ ಬಿಜೆಪಿ.
ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ
ಡಿ.ಕೆ. ಸುರೇಶ್ ಅವರ ಸೋಲಿಗೆ ಸಿಎಂ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದಿದ್ದಾರೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ. ಈ ಬಗ್ಗೆ ನೇರ ಆರೋಪ ಮಾಡಿರುವ ಬಿಜೆಪಿ ಶಾಸಕ ಸುರೇಶ್ ಗೌಡ, ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಉಳಿವಿಗಾಗಿ ಈ ರೀತಿ ಡಿ.ಕೆ. ಸುರೇಶ್ ಅವರನ್ನ ಸೋಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯರ ಆಪ್ತರೇ ಸೇರಿ ಡಿ.ಕೆ. ಸುರೇಶ್ ಅವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಿದ್ದಾರೆ ಎಂದಿದ್ದಾರೆ.
ಬೇಕು ಅಂತಲೇ ಸುಳ್ಳು ಆರೋಪ?
ಒಟ್ನಲ್ಲಿ ಬಿಜೆಪಿ ಶಾಸಕ ಈ ರೀತಿ ಮಾಡುತ್ತಿರುವ ಆರೋಪಕ್ಕೆ ಕಾಂಗ್ರೆಸ್ ಇನ್ನೂ ಯಾವುದೆ ರೀತಿ ಪ್ರತಿಕ್ರಿಯೆ ನೀಡಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಡಿ.ಕೆ. ಸುರೇಶ್ ಪರವಾಗಿ ಖುದ್ದು ಸಿಎಂ ಸಿದ್ದರಾಮಯ್ಯ ಹಲವು ಬಾರಿ ಪ್ರಚಾರ ಕೂಡ ನಡೆಸಿದ್ದರು. ಹೀಗಿದ್ದಾಗ ಡಿ.ಕೆ. ಸುರೇಶ್‌ರ ಸೋಲಿಗೆ ಸಿಎಂ ಸಿದ್ದರಾಮಯ್ಯ ಹೇಗೆ ತಾನೆ ಪ್ಲಾನ್ ಮಾಡಲು ಸಾಧ್ಯ? ಎಂಬುದು ಇದೀಗ ಅವರ ಬೆಂಬಲಿಗರ ವಾದ. ಹಾಗೇ ಬಿಜೆಪಿ ನಾಯಕರು ಬೇಕು ಅಂತಲೇ ಹೀಗೆಲ್ಲಾ ಮಾತು ಆಡುತ್ತಾ ಕಿಚ್ಚು ಹೊತ್ತಿಸುತ್ತಿದ್ದಾರೆ ಅಂತಿದ್ದಾರೆ ಕಾಂಗ್ರೆಸ್ ನಾಯಕರು.












Click it and Unblock the Notifications