BJP Manifesto 2023: ಮಹಿಳೆಯರ ಸುರಕ್ಷತೆ, ಭದ್ರತೆಗಾಗಿ ಎಲ್ಲ ಬೀದಿಗಳಲ್ಲಿ ಸಿಸಿಟಿವಿ, ಬೆಂಗಳೂರಿಗೆ ಇನ್ನು ಏನೇನು?

ಬೆಂಗಳೂರು, ಮೇ 01: ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಪ್ರಮುಖ ರಾಜಕೀಯ ಪಕ್ಷಗಳಿಗೆ ರಾಜಧಾನಿ ಬೆಂಗಳೂರಿನ ಎಲ್ಲ ಕ್ಷೇತ್ರಗಳನ್ನು ತೆಕ್ಕೆ ಪಡೆಯಲು ಸಹ ಸಾಕಷ್ಟು ತಯಾರಿ ನಡೆಸಿವೆ. ಈ ಸಂಬಂಧ ಐಟಿ ಹಬ್ ಆಗಿರುವ ಬೆಂಗಳೂರಿಗೆ ಇತರ ಪಕ್ಷಗಳಂತೆ ಆಡಳಿತಾರೂಢ ಬಿಜೆಪಿ ಸಹ ಮಹತ್ವದ ಭರವಸೆಗಳನ್ನು ಘೋಷಿಸಿದೆ.

ಸೋಮವಾರ ನಡೆದ ' ಚುನಾವಣಾ 2023 ಬಿಜೆಪಿ ಪ್ರಣಾಳಿಕೆ' ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ನಾಯಕರು ಬೆಂಗಳೂರಿನ ಸಮಗ್ರ ಅಭಿವೃದ್ಧಿ ತಾವು ನೀಡಿದ ಅನುದಾನ ಕೈಗೊಂಡ ಯೋಜನೆಗಳನ್ನು ವಿವರಿಸಿದ್ದಾರೆ. ಜೊತೆಗೆ ನ್ಯೂಯಾರ್ಕ್ ಮಾದರಿಯಲ್ಲಿ ನಗರದಲ್ಲಿ 'ವಿಶ್ವ ದರ್ಜೆಯ ಬಹುಮಾದರಿಯ ಸಾರಿಗೆ ಕೇಂದ್ರ-ಕಾನ್‌ಕೋರ್ಡ್ ಬೆಂಗಳೂರು' ಸ್ಥಾಪನೆ, ಸಂಚಾರ ದಟ್ಟಣೆಗೆ ಕ್ರಿಯಾತ್ಮಕ ಪರಿಹಾರ, ಉಪನಗರ ರೈಲು ಯೋಜನೆ, ಸೇರಿದಂತೆ ಹಲವು ಡಿಜಿಟಲ್ ಯೋಜನೆಗಳಿಗೆ ಬಿಜೆಪಿ ಆದ್ಯತೆ ನೀಡಿದೆ.

BJP Election Manifesto For Karnataka Assembly Poll 2023: What Got Promises for Bengaluru

ಬಿಜೆಪಿ ಪ್ರಣಾಳಿಕೆ 2023: ಬೆಂಗಳೂರಿಗೆ ಸಿಕ್ಕ ಭರವಸೆಗಳು ಏನು?

* ನಗರದಲ್ಲಿ ನ್ಯೂಯಾರ್ಕ್ ಮಾದಿರಯಲ್ಲಿ ವಿಶ್ವ ದರ್ಜೆಯ ಬಹು ಮಾದರಿ ಸಾರಿಗೆ ಕೇಂದ್ರ ಸ್ಥಾಪನೆ 'ಕಾನ್ಕಾರ್ಡ್ ಬೆಂಗಳೂರು" ಸ್ಥಾಪಿಸಲಾಗುವುದು. ಸಾರ್ವಜನಿಕರಿಗೆ ಒಂದೇ ಕೇಂದ್ರೀಯ ಸ್ಥಳದಿಂದ ಸಾರಿಗೆ ಸೇವೆ ಸಿಗಲಿದೆ.

* ಬೆಂಗಳೂರಿನಲ್ಲಿ ಏಕ ಮಾದರಿಯ ರೀತಿಯಲ್ಲಿ ಸಾರಿಗೆ ಜಾಲ ಅಭಿವೃದ್ಧಿ ಮಾಡಲಾಗುವುದು. ಲಂಡನ್ ಮಾದರಿಯಲ್ಲಿ ಬೆಂಗಳುರು ಏಕೀಕೃತ ಟ್ರಾನ್ಸಿಟ್ ನೆಟ್‌ವರ್ಕ್ ರಚನೆ ಮಾಡಿ ಸಾರಿಗೆ ಜಾಲ ವಿಸ್ತರಣೆ ಮಾಡಲಾಗುವುದು.

* ಜನರ ಅನೂಕಲಕ್ಕಾಗಿ ಸಾರಿಗೆಯಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ. ಅಂದರೆ 'ಮೈ ಬೆಂಗಳೂರು ಮೈ ರೂಟ್' ಅಪ್ಲಿಕೇಷನ್ ಬಿಡುಗಡೆಗೆ ಆದ್ಯತೆ

* ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಎಲ್ಲ ಬೀದಿಗಳಲ್ಲಿ ಸಿಸಿಟಿ ಅಳವಡಿಕೆ.

* ಬೆಂಗಳೂರಲ್ಲಿ ಯೂನಿವರ್ಸಲ್ ಆಗಿ 'ಒನ್ ಸಿಟಿ ಒನ್ ಕಾರ್ಡ್' ಆರಂಭ. ಇದರಿಂದ ಸಾರ್ವಜನಿಕ ಸಾರಿಗೆ/ ಪ್ರಯಾಣಕ್ಕೆ ಅನುಕೂಲ

* ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯಿದೆ 1972 ಅನ್ನು ಪರಿಶೀಲಿಸಿ ಸೂಕ್ತ ತಿದ್ದುಪಡಿ ತರಲಾಗುವುದು. ಮನೆ ಖರೀದಿದಾರರ ಹಕ್ಕುಗಳ ರಕ್ಷಣೆ ರಾಜ್ಯ ನಿವಾಸಿಗಳ ಕಲ್ಯಾಣ ಸಮಿತಿ ರಚಿಸಲಾಗುವುದು.

*ಅಪಾರ್ಟ್‌ಮೆಂಟ್‌ ಸಂಬಂಧಿಸಿದ ಎಲ್ ಅಪ್ಲಿಕೇಷನ್ ಗಳನ್ನು ಆನ್‌ಲೈನ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.

BJP Election Manifesto For Karnataka Assembly Poll 2023: What Got Promises for Bengaluru

ಬೆಂಗಳೂರು ಡಿಜಿಟಲ್ 4.0
* 'ಯುವ ಕರುನಾಡು ಡಿಜಿಟಲ್ 4.0' ಆರಂಭಿಸಲಿರುವ ಬಿಜೆಪಿ. ಇದರಿಂದ ರಾಜ್ಯದ ಮೊದಲ ಗ್ಲೋಬಲ್ ಇನ್ನೋವೇಷನ್ ಹಬ್ ಸ್ಥಾಪನೆಗೆ ಸಹಕಾರಿ ಆಗಲಿದೆ. ಪ್ರತಿ ವರ್ಷ 250 ಜನರಿಗೆ ತಲಾ 50ಲಕ್ಷ ರೂ. ಮೂಲ ಬಂಡವಾಳ ಒದಗಿಸುವ ಪೂರಕ ನೀತಿ ಜಾರಿ.

* ಆಧುನಿಕ ಇನ್ಕ್ಶಬೇಶನ್ ಕೇಂದ್ರ ಸ್ಥಾಪಿಸುವ ಜೊತೆಗೆ ಖಾಸಗಿ ಇನ್ಕ್ಶಬೇಟರ್‌ಗಳು ಮತ್ತು ವೇಗ ವರ್ಧಕಗಳನ್ನು ಬೆಂಬಲಿಸಲು 'ಯುವಗುರು ಡಿಜಿಟಲ್ 4.0' ಯೋಜನೆ ಆರಂಭ.

* ಜರ್ಮನಿ ಮತ್ತು ಜಪಾನ್‌ಗಳಲ್ಲಿರುವಂತೆ ವೇಗದ ಇಂಟರ್‌ನೆಟ್‌ ಸೌಲಭ್ಯಕ್ಕಾಗಿ ಇಲ್ಲಿ 'ಗಿಗಾಬಿಟ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್' ಸ್ಥಾಪನೆ.

* ಮಕ್ಕಳು ಸಂರ್ಪೂಣವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವಂತೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 'ವರ್ಚವಲ್ ರಿಯಾಲಿಟಿ ಲ್ಯಾಬ್' ಸ್ಥಾಪನೆ.

* ಬೆಂಗಳೂರನ್ನು ವಿಶ್ವದ ಹೊಸ ಯುಗದ ಪ್ರಬುದ್ಧತೆಯ ರಾಜಧಾನಿಯನ್ನಾಗಿ ಮಾಡಲು ಅತ್ಯಾಧುನಿಕ 'ಟೆಕ್ ನೇತೃತ್ವದ ರೂಪಾಂತರ ಸಂಶೋಧನಾ ಕೇಂದ್ರ' ಸ್ಥಾಪನೆ.

* ಆಡಳಿತ ಸಂಬಂಧ ಮಾಹಿತಿ ತಿಳಿಯಲು 'ಬೆಂಗಳೂರು ಆನ್ ಬೋರ್ಡ್' ಡ್ಯಾಶ್ ಬೋರ್ಡ್ ಪರಿಚಯಿಸಲಾಗುವುದು.

ಬಿಜೆಪಿಯ 'ಮಿಷನ್ ರಾಜಕಾಲುವೆ'
* ಕಟ್ಟಡಗಳ ಒಳಚರಂಡಿ, ಹಳೆಯ ಒಳಚರಂಡಿ ನೀರು ಸಂಪರ್ಕ, ಹಾಲಿ ಒಳಚರಂಡಿಗಳಲ್ಲಿನ ಹೂಳೆತ್ತುವುದು, ಸಮಗ್ರ ರಾಜಕಾಲುವೆ ವ್ಯವಸ್ಥೆಗೆ ಪುನಾರಚನೆ.

* ಮಳೆ ನೀರು ಹಾದು ಹೋಗುವ ಜಲಮೂಗಳೊಂದಿಗೆ ಸಂಪರ್ಕಿಸುವ ವ್ಯವಸ್ಥೆ. ರಾಜಕಾಲುವೆ ಮೇಲಿನ ಒತ್ತುವರಿ ತೆರವಿಗೆ ಕ್ರಮ.

ಬಿಜೆಪಿಯಿಂದ ಈಗಾಗಲೇ ಆಗಿರುವ ಸಾಧನೆ
ದೇಶದ 115 ಯುನಿಕಾರ್ನ್‌ಗಳ್ಲಲಿ 43ಕ್ಕೆ ನೆಲೆಯಾಗಿರುವ ಬೆಂಗಳೂರಿನಲ್ಲಿ 69.6ಕಿ.ಮೀ. ದೂರದವರೆಗೆ ಮೆಟ್ರೋ ಜಾಲ ವಿಸ್ತರಿಸುವಲ್ಲಿ ಯಶಸ್ವಿ ಆಗಿದ್ದೇವೆ. 2023-24ರ ಸಾಲಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರು ಸಮಗ್ರ ಅಭಿವೃದ್ಧಿಗ ಎಒಟ್ಟು 9698 ಕೋಟಿ ರೂ. ಅನುದಾನ ಘೋಷಿಸಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಕರ್ನಾಟಕದಲ್ಲಿ 3 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಬಿಬಿಎಂಪಿ ಮೂಲಕ ಅಮೃತ ನಗರೋತ್ತಾನ ಯೋಜನೆಯಡಿ 6000 ಕೋಟಿ ವೆಚ್ಚದ ಕಾಮಗಾರಿ ಆರಂಭವಾಗಿದೆ. ಬೆಂಗಳೂರು ಉಪನಗರ ರೈಲ ಯೋಜನೆಗೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, 16,000 ಕೋಟಿ ವೆಚ್ಚದಲ್ಲಿ ನಿಗದಿತ 40 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+