ಸೆಪ್ಟೆಂಬರ್ 19ರಂದು ಬಿಜೆಪಿ ಶಾಸಕಾಂಗ ಸಭೆ, ಮಹತ್ವದ ಚರ್ಚೆ

ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯ ರಾಜಕರಣದಲ್ಲಿ ಪ್ರತಿದಿನವೂ ಹೊಸ ತಿರುವು ಪಡೆದುಕೊಳ್ಳುತ್ತಿರುವಾಗಲೇ ನಾಳೆ (ಸೆಪ್ಟೆಂಬರ್ 19) ಬಿಜೆಪಿ ಮಹತ್ವದ ಶಾಸಕಾಂಗ ನಾಳೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯುತ್ತಿದ್ದು. ಬಿಜೆಪಿಯ ಶಾಸಕರ ಜೊತೆಗೆ ರಾಜ್ಯದ ಲೋಕಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು, ರಾಜ್ಯಸಭೆ ಸದಸ್ಯರು ಭಾಗವಹಿಸಲಿದ್ದಾರೆ.

ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡುವುದು ನಾಳಿನ ಶಾಸಕಾಂಗ ಸಭೆಯ ಉದ್ದೇಶ ಎನ್ನಲಾಗಿದೆಯಾದರೂ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಈ ಸಂದರ್ಭದಲ್ಲಿ ಬಿಜೆಪಿ ತೆಗೆದುಕೊಳ್ಳಲಿರುವ ನಿರ್ಣಯಗಳ ಬಗ್ಗೆ ಚರ್ಚೆಯೇ ಸಭೆಯ ನಿಜ ಉದ್ದೇಶ ಎನ್ನಲಾಗಿದೆ.

BJP legislative meeting on September 19 in Bengaluru

ನಾಳಿನ ಶಾಸಕಾಗ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರರಾವ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇರಲಿದ್ದಾರೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಗೆ ಪೂರ್ವಭಾವಿಯಾಗಿ ಇಂದು ರಾಜ್ಯ ಬಿಜೆಪಿ ಪ್ರಮುಖರ ಜೊತೆ ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆದಿದೆ.

ಈಗಾಗಲೇ ಉತ್ತರ ಕರ್ನಾಟಕದ ಬಿಜೆಪಿ ಶಾಸಕರು ಬೆಂಗಳೂರಿಗೆ ದೌಡಾಯಿಸಿದ್ದಾರೆ. ನಾಳಿನ ಶಾಸಕಾಂಗ ಸಭೆ ಮಹತ್ವದ್ದು ಎಂದು ಬಿಜೆಪಿ ಶಾಸಕರಿಗೆ ಹೇಳಲಾಗಿದ್ದು. ಖಡ್ಡಾಯವಾಗಿ ಸಭೆಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ. ಸಭೆಯಲ್ಲಿ ಮಹತ್ವದ ವಿಷಯ ಚರ್ಚೆ ಆಗುತ್ತಿರುವ ಕಾರಣವೇ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+