JUST IN: ಪ್ರವೀಣ್ ಹತ್ಯೆ: ಬಿಜೆಪಿಯಿಂದ ಮನೆ ಮತ್ತು 25 ಲಕ್ಷ ಪರಿಹಾರ

ಬೆಂಗಳೂರು, ಜುಲೈ 28: ಪ್ರವೀಣ್ ನೆಟ್ಟಾರು ಹತ್ಯೆಯನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮೃತ ಪ್ರವೀಣ್ ಕುಟುಂಬಕ್ಕೆ ಪಕ್ಷದ ವತಿಯಿಂದ ಪಕ್ಷದ ರಾಜ್ಯಾಧ್ಯಕ್ಷರು 25 ಲಕ್ಷ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ತಿಳಿಸಿದರು.

ನಗದು ಪರಿಹಾರದ ಜೊತೆಗೆ ಮೃತರ ಮನೆ ಕಟ್ಟುವ ಕನಸನ್ನು ನನಸಾಗಿಸುವ ನಿರ್ಧಾರವನ್ನು ಪಕ್ಷದ ರಾಜ್ಯಾಧ್ಯಕ್ಷರು ತೆಗೆದುಕೊಂಡಿದ್ದಾರೆ ಎಂದು ಅಶ್ವತ್ಥನಾರಾಯಣ್ ತಿಳಿಸಿದರು.

ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪಕ್ಷದ ರಾಜ್ಯಾಧ್ಯಕ್ಷರು, ಸಚಿವರು, ಶಾಸಕರು ಪ್ರವೀಣ್ ಅವರ ಮನೆಗೆ ಇಂದು ಭೇಟಿ ಕೊಡಲಿದ್ದಾರೆ ಎಂದರು.

BJP Announces 25 lakh Compensation And a House to the family of Deceased Praveen

"ಈ ಹತ್ಯೆ ಹಿಂದಿನ ಕೈವಾಡವನ್ನು ಕಂಡುಹಿಡಿಯಬೇಕು. ಕೇರಳದವರ ಪಾತ್ರ ಇದರಲ್ಲಿ ಇದೆಯೇ ಎಂಬ ತನಿಖೆ ನಡೆಯಬೇಕಿದೆ. ಹರ್ಷನ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಹುಬ್ಬಳ್ಳಿ ಗಲಭೆಯ ಆರೋಪಿಗಳನ್ನೂ ಬಂಧಿಸಲಾಗಿದೆ. 2020ರ ಡಿ.ಜೆ.ಹಳ್ಳಿ- ಕೆ.ಜಿ ಹಳ್ಳಿ ಗಲಭೆ ಆರೋಪಿಗಳನ್ನೂ ಕೂಡಲೇ ಬಂಧಿಸಲಾಗಿದೆ. ಚುನಾವಣೆ ವೇಳೆ ಕೋಮುಗಲಭೆ ಹಬ್ಬಿಸುವುದು ಮತ್ತು ಇದರಲ್ಲಿ ಜಿಹಾದಿ ಶಕ್ತಿಗಳು ಒಳಗೊಳ್ಳುವುದನ್ನು ಗಮನಿಸಿದ್ದು, ಇಂಥ ಶಕ್ತಿಗಳನ್ನು ಸರಕಾರವು ನಿರ್ದಾಕ್ಷಿಣ್ಯವಾಗಿ ದಮನ ಮಾಡಲಿದೆ' ಎಂದು ತಿಳಿಸಿದರು.

'ಈ ಪ್ರಕರಣದಲ್ಲೂ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ತಂಡ ತನಿಖೆ ಮಾಡುತ್ತಿದೆ. ಶಾಂತಿ ಕಾಪಾಡಲು ಮುಖ್ಯಮಂತ್ರಿಗಳೂ ಮನವಿ ಮಾಡಿದ್ದಾರೆ' ಎಂದು ಹೇಳಿದರು.

'ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಕೊಲೆಗಳಾದವು. ಸರಿಯಾದ ತನಿಖೆ ನಡೆಸಲಿಲ್ಲ; ಆರೋಪಿಗಳನ್ನು ಬಂಧಿಸಲಿಲ್ಲ. ನಮ್ಮ ಸರಕಾರವು ಸಮರ್ಪಕ ತನಿಖೆ ಮಾಡಿ ಕೂಡಲೇ ಆರೋಪಿಗಳನ್ನು ಬಂಧಿಸಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಸೇರಿದಂತೆ ಎಲ್ಲ ಪ್ರಕರಣಗಳನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಿದೆ' ಎಂದರು.

ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಮಾತನಾಡಿ, 'ಘಟನೆ ಹಿಂದಿರುವ ದೊಡ್ಡದಾದ ಜಿಹಾದಿ ಮಾನಸಿಕತೆಯನ್ನು ನಾವೆಲ್ಲರೂ ಸೇರಿ ದೃಢವಾಗಿ ಮಟ್ಟ ಹಾಕಬೇಕಿದೆ. ಪ್ರವೀಣ್ ಬಲಿದಾನವನ್ನು ವ್ಯರ್ಥವಾಗಲು ಬಿಜೆಪಿ ಬಿಡುವುದಿಲ್ಲ. ಆ ಬಲಿದಾನದ ಮೂಲಕ ಈ ದೇಶವನ್ನು ಪೆಡಂಭೂತವಾಗಿ ಕಾಡುತ್ತಿರುವ ಜಿಹಾದಿ ಮಾನಸಿಕ ಶಕ್ತಿಯನ್ನು ದಮನ ಮಾಡುವುದೇ ಬಿಜೆಪಿಯ ಅತ್ಯಂತ ದೊಡ್ಡದಾದ ಕಾರ್ಯ' ಎಂದರು.

Recommended Video

      ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ಮಾಸ್ಟರ್ ಪ್ಲಾನ್!! | OneIndia Kannada

      'ಸಿದ್ದರಾಮಯ್ಯರ ಅವಧಿಯಲ್ಲಿ ಎಸ್‍ಡಿಪಿಐ ಮತ್ತು ಪಿಎಫ್‍ಐ ಮೇಲಿದ್ದ ಸಾವಿರಾರು ಪ್ರಕರಣಗಳನ್ನು ರದ್ದು ಮಾಡಿದ್ದಲ್ಲದೆ, ಈ ಪಕ್ಷಗಳ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿತ್ತು' ಎಂದು ಆರೋಪಿಸಿದರು. ಎಸ್‍ಡಿಪಿಐ ಮತ್ತು ಪಿಎಫ್‍ಐ ನಿಷೇಧಕ್ಕೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಗೃಹ ಖಾತೆಗೆ ನೀಡಲು ನಮ್ಮ ಸರಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ವಿವರಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+