ಭಾರತ ಗೆಲ್ಲಿಸಿ ಎಂದು ಕರೆ ನೀಡುತ್ತಾರೆ ಮೋದಿ!
ಬೆಂಗಳೂರು, ಅ, 30 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರಿನ ಭಾರತ ಗೆಲ್ಲಿಸಿ ಸಮಾವೇಶಕ್ಕೆ ಬಿಜೆಪಿ ತಯಾರಿ ಆರಂಭಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸಮಾವೇಶದ ಪಾಸ್ ವಿತರಣೆ ಮಾಡುವ ಮೂಲಕ ಸಮಾವೇಶದ ತಯಾರಿಗಳಿಗೆ ಚಾಲನೆ ನೀಡಿದರು.
ಬುಧವಾರ ಬೆಳಗ್ಗೆ ಮಲ್ಲೇಶ್ವಂನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, 10 ರೂ. ಪಾಸ್ ಮಾರಾಟ ಮಾಡುವ ಮೂಲಕ ಎರಡು ದಿನಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ಬುಧವಾರ ಮತ್ತು ಗುರುವಾರ ರಾಜ್ಯಾದ್ಯಂತ ಸಮಾವೇಶಕ್ಕಾಗಿ ನೋಂದಣಿ ಅಭಿಯಾನ ನಡೆಯಲಿದೆ. ಆನ್ ಲೈನ್ ಮೂಲಕ ನೋಂದಣಿ ಪ್ರಕ್ರಿಯೆಗೂ ಚಾಲನೆ ದೊರಕಿದ್ದು, ನ.17ರ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾರತ ಗೆಲ್ಲಿಸಿ ಸಮಾವೇ ನಡೆಯಲಿದೆ.
ಅರಮನೆ ಆವರಣದ ತ್ರಿಪುರವಾಸಿನಿ ಮೈದಾನದಲ್ಲಿ ಬಿಜೆಪಿಯ ವಿವಿಧ ನಾಯಕರು ವೇದಿಕೆ ನಿರ್ಮಾಣ ಮಾಡಲು ಗುದ್ದಲಿ ಪೂಜೆಯನ್ನು ನೇರವೇರಿಸಿದ್ದಾರೆ. ಆ ಮೂಲಕ ನರೇಂದ್ರ ಮೋದಿ ಅವರ ಸಮಾವೇಶಕ್ಕಾಗಿ ಅಗತ್ಯ ತಯಾರಿ ಆರಂಭಿಸಿದ್ದಾರೆ. ಸಮಾವೇಶದ ಬಗ್ಗೆ ಒಂದಷ್ಟು ತಿಳಿಯೋಣ ಬನ್ನಿ

ಭಾರತ ಗೆಲ್ಲಿಸಿ ಎಂಬ ಕರೆ
ನರೇಂದ್ರ ಮೋದಿಯವರ ಬೆಂಗಳೂರು ಸಮಾವೇಶಕ್ಕೆ `ಭಾರತ ಗೆಲ್ಲಿಸಿ` ಎಂದು ನಾಮಕರಣ ಮಾಡಲಾಗಿದೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಹೊಡೆದೋಡಿಸಿ ಭಾರತದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ, ಭಾರತವನ್ನು ಗೆಲ್ಲಿಸಿ ಎಂದು ನರೇಂದ್ರ ಮೋದಿ ಸಮಾವೇದಲ್ಲಿ ಕರೆ ನೀಡಲಿದ್ದಾರೆ.

ನೋಂದಣಿ ಆರಂಭ
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸಮಾವೇಶದಲ್ಲಿ ಭಾಗವಹಿಸಲು ಬೇಕಾದ 10 ರೂ.ಗಳ ಪಾಸ್ ಅನ್ನು ಮಾರಾಟ ಮಾಡುವ ಮೂಲಕ ನೋಂದಣಿ ಪ್ರಕ್ರಿಯಿಗೆ ಚಾಲನೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲು ಪಾಸ್ ಪಡೆಯಬೇಕು. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ.

ಆನ್ ಲೈನ್ ನೋಂದಣಿ
ಸಮಾವೇಶದಲ್ಲಿ ಭಾಗವಹಿಸಲು ಆನ್ ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಅದಕ್ಕಾಗಿ ನೀವು ಬಿಜೆಪಿ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ. ನಿಮ್ಮ ಹತ್ತಿರದ ಬಿಜೆಪಿ ಕಚೇರಿಯಲ್ಲಿ ಪಾಸ್ ಗಳು ಎರಡು ದಿನಗಳ ಕಾಲ ನಿಮಗೆ ಲಭ್ಯವಿರುತ್ತದೆ.

ಗುದ್ದಲಿ ಪೂಜೆ
ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶ ನಡೆಯುವ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಿಕೆ ನಿರ್ಮಾಣ ಕಾರ್ಯಕ್ಕೆ ಬಿಜೆಪಿ ನಾಯಕರು ಬುಧವಾರ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಇಂದಿನಿಂದಲೇ ಸಮಾವೇಶದ ವೇದಿಕೆ ನಿರ್ಮಾಣ ಕಾರ್ಯ ಆರಂಭವಾಗಲಿದೆ.

35 ತಂಡಗಳು
ನರೇಂದ್ರ ಮೋದಿ ಅವರ `ಭಾರತ ಗೆಲ್ಲಿಸಿ` ಸಮಾವೇಶದ ಯಶಸ್ಸಿಗೆ ಕೆಲಸ ಮಾಡಲು ಪಕ್ಷದ ವತಿಯಿಂದ 35 ತಂಡಗಳನ್ನು ರಚಿಸಲಾಗಿದೆ ಎಂದು ಸಮಾವೇಶದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆರ್.ಅಶೋಕ್ ಹೇಳಿದ್ದಾರೆ. ಭೋಜನ, ಕುಡಿಯುವ ನೀರು, ಸ್ವಚ್ಛತೆ, ವೈದ್ಯಕೀಯ, ಸಂಚಾರ ನಿರ್ವಹಣೆ ಸೇರಿದಂತೆ ಮತ್ತಿತರ ಕೆಲಸಗಳಿಗೆ ಪ್ರತಿಯೊಂದಕ್ಕೂ ಒಂದೊಂದು ತಂಡದಂತೆ 35 ತಂಡಗಳನ್ನು ರಚಿಸಲಾಗಿದೆ.

ಇತಿಹಾಸ ನಿರ್ಮಿಸುವ ಉತ್ಸಾಹ
ನ.17ರಂದು ಹೆಚ್ಚಿನ ಜನರನ್ನು ಸೇರಿಸಿ ಕರ್ನಾಟಕದ ಇತಿಹಾಸದಲ್ಲೇ ಹೆಚ್ಚು ಜನರು ಭಾಗವಹಿಸಿದ ಸಮಾವೇಶ ಎಂಬ ಹೆಗ್ಗಳಿಗೆ ಪಡೆಯಬೇಕು ಎಂದು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರು, ಜನರು ಸಮಾವೇಶಕ್ಕಾಗಿ ಆಗಮಿಸಲಿದ್ದಾರೆ. ದೀಪಾವಳಿ ನಂತರ ನ.7 ರಿಂದ 10 ರವರೆಗೂ ಜಿಲ್ಲಾ, ನಗರ ಹಾಗೂ ಪಟ್ಟಣ ಕೇಂದ್ರಗಳಲ್ಲಿ ಸಭೆಯನ್ನು ನಡೆಸುವ ಮೂಲಕ ಸಮಾವೇಶಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.












Click it and Unblock the Notifications