ಆಸ್ತಿ ರಾದ್ಧಾಂತ: ಉಪ್ಪು, ಹುಳಿ ಜಯಶ್ರೀಗೆ ಖಾರ ಅರೆದ ಮಾವ!

Recommended Video

      ಬಿಗ್ ಬಾಸ್ ಜಯಶ್ರೀಗೆ ಮಾವನ ಕಾಟ | Oneindia Kannada

      'ಬಿಗ್ ಬಾಸ್ ಸೀಸನ್ 3' ಕಾರ್ಯಕ್ರಮದ ಮೂಲಕ ಮೊದಲ ಬಾರಿಗೆ ಟಿವಿ ಪರದೆ ಮೇಲೆ ಕಾಣಿಸಿಕೊಂಡಿದ್ದ ಜಯಶ್ರೀ ರಾಮಯ್ಯ ಕುಟುಂಬದಲ್ಲಿಗ ದೊಡ್ಡ ರಾದ್ಧಾಂತ ಆಗಿದೆ. ಆಸ್ತಿ ವಿಷಯವಾಗಿ ಅವರ ಮಾವನೇ ಜಯಶ್ರೀ ಬಾಳಿಗೆ 'ವಿಲನ್' ಆಗಿದ್ದಾನೆ.

      ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಜಯಶ್ರೀ ಯಾರು ಎಂಬುದು ತಿಳಿದಿರಲಿಲ್ಲ. ಮಾಡೆಲಿಂಗ್ ಶುರು ಮಾಡಿ, ಯಾವಾಗ ಬಿಗ್ ಬಾಸ್ ಗೆ ಬಂದರೋ ಜಯಶ್ರೀ ಫುಲ್ ಫೇಮಸ್ ಆದ್ರು. ಬಿಗ್ ಬಾಸ್ ಮುಗಿಸಿದ ಬಳಿಕ 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಜೊತೆಗೆ ತೆರೆ ಹಂಚಿಕೊಂಡರು.

      ಓದಬೇಕಿದ್ದ ಕಾಲೇಜ್ ಗೆ ಅತಿಥಿಯಾಗಿ ಹೋಗಿದ್ದ 'ಬಿಗ್ ಬಾಸ್' ಜಯಶ್ರೀ

      ಬಿಗ್ ಬಾಸ್ ಮನೆಯಲ್ಲಿ ಗಲಾಟೆಗಳು ನಡೆಯುವುದು ಸಾಮಾನ್ಯ. ಆದರೆ, ಇದೀಗ ಬಿಗ್ ಬಾಸ್ ಸ್ಪರ್ಧಿಯ ಮನೆಯಲ್ಲಿ ದೊಡ್ಡ ಗಲಾಟೆ ಆಗಿದೆ. ಈ ಘಟನೆಯ ಬಗ್ಗೆ ಸ್ವತಃ ಜಯಶ್ರೀ ರಾಮಯ್ಯ ಒನ್ಇಂಡಿಯಾದ ಸಿನಿಮಾ ತಾಣ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸ್ವಷ್ಟನೆ ನೀಡಿದ್ದಾರೆ.

      ಆಸ್ತಿಗಾಗಿ ಸೋದರ ಮಾವನ ಕಾಟ

      ಆಸ್ತಿಗಾಗಿ ಸೋದರ ಮಾವನ ಕಾಟ

      ಜಯಶ್ರೀ ತಾಯಿಯ ಸಹೋದರ ಗಿರೀಶ್ ಆಸ್ತಿಯ ವಿಚಾರವಾಗಿ ಆಗಾಗ ಕಿರಿಕ್ ಮಾಡುತ್ತಿದ್ದನಂತೆ. ಸಣ್ಣ ಪುಟ್ಟದಾಗಿ ನಡೆಯುತ್ತಿದ್ದ ಈ ಗಲಾಟೆಗಳು ನಿನ್ನೆ (ಸಪ್ಟೆಂಬರ್ 10) ತಾರಕಕ್ಕೆ ಏರಿದೆ. ನಿನ್ನೆ ರಾತ್ರಿ ಮನೆಯಲ್ಲಿ ಗಲಾಟೆ ಶುರು ಮಾಡಿದ ಗಿರೀಶ್, ಆಸ್ತಿ ವಿಷಯ ಪ್ರಸ್ತಾಪ ಮಾಡಿ ಬೈದಿದ್ದಾನೆ. ಮಾತಿನ ಚಕಮಕಿ ಜೋರಾಗಿ ನಡೆದಿದೆ.

      ಮನೆಯಿಂದ ಹೊರ ಹಾಕಿದ ಮಾವ

      ಮನೆಯಿಂದ ಹೊರ ಹಾಕಿದ ಮಾವ

      ಗಲಾಟೆ ಮಾಡಿಕೊಂಡ ಗಿರೀಶ್ ತಮ್ಮ ಕೋಪವನ್ನು ಪ್ರದರ್ಶನ ಮಾಡಿದ್ದಾನೆ. ಜಯಶ್ರೀ ಮತ್ತು ಅವರ ತಾಯಿಯನ್ನು ರಾತ್ರಿ ಬೀದಿಗೆ ತಳ್ಳಿದ್ದಾನೆ. ರಾತ್ರಿ ಮಳೆಯ ನಡುವೆ ರಸ್ತೆಗೆ ಬಂದ ತಾಯಿ ಮಗಳಿಗೆ ದಾರಿ ಕಾಣದಂತೆ ಆಗಿತ್ತು. ಕಡೆಗೆ ಅಶೋಕ ನಗರದ ಅಜ್ಜಿಯ ಮನೆಯಲ್ಲಿ ನಿನ್ನೆ ಇಡೀ ರಾತ್ರಿ ಕಳೆದಿದ್ದಾರೆ.

      ಹಳೆಯ ಹೆಸರನ್ನೇ ಉಳಿಸಿಕೊಂಡ 'ಬಿಗ್ ಬಾಸ್' ಜಯಶ್ರೀ ರಾಮಯ್ಯ

      ಪೊಲೀಸ್ ಠಾಣೆ ಯಲ್ಲಿ ಪ್ರಕರಣ

      ಪೊಲೀಸ್ ಠಾಣೆ ಯಲ್ಲಿ ಪ್ರಕರಣ

      ಸದ್ಯ, ಮಾವನ ವಿರುದ್ಧ ಕಾನೂನು ಸಮರಕ್ಕೆ ಜಯಶ್ರೀ ಮುಂದಾಗಿದ್ದಾರೆ. ಈ ಪ್ರಕರಣದ ಬಗ್ಗೆ ಇಂದು(ಸೆ.11) ಬೆಳಗ್ಗೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂಜೆ 5 ಗಂಟೆಗೆ ಜಯಶ್ರೀ, ಅವರ ಮಾವ ಹಾಗೂ ಕುಟುಂಬದ ಕೆಲವರನ್ನು ಠಾಣೆಗೆ ಕರೆಸಲಾಗುತ್ತದೆ.

      ಜಯಶ್ರೀ ನೀಡಿದ ಸ್ಪಷ್ಟನೆ ಏನು?

      ಜಯಶ್ರೀ ನೀಡಿದ ಸ್ಪಷ್ಟನೆ ಏನು?

      ಘಟನೆಯ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿರುವ ಜಯಶ್ರೀ ನಿನ್ನೆ ನಡೆದ ಘಟನೆಯನ್ನು ವಿವರಿಸಿದರು. ''ನಮ್ಮ ಮಾವ ಒಬ್ಬ ಹುಚ್ಚನಾಗಿದ್ದಾನೆ. ಆಸ್ತಿಗಾಗಿ ನಮಗೆ ಹಿಂಸೆ ನೀಡುತ್ತಿದ್ದಾನೆ. ನಮ್ಮನ್ನು ಹೊಡೆಯುತ್ತಾನೆ. ನಿನ್ನೆ ಮನೆಯಿಂದ ಹೊರ ಹಾಕಿದ, ನಾವು ಈಗ ಹಳೆ ಮನೆಗೆ ಬಂದಿದ್ದೇವೆ. ನಮ್ಮ ತಾತ ಅಜ್ಜಿಯನ್ನೂ ಸರಿಯಾಗಿ ನೋಡಿಕೊಳ್ಳುವುದಿಲ್ಲ. ಈಗ ದೂರು ನೀಡಲು ಪೊಲೀಸ್ ಠಾಣೆಯಲ್ಲಿ ಇದ್ದೇವೆ.'' ಎಂದು ಸ್ಪಷ್ಟನೆ ನೀಡಿದ್ದಾರೆ.

      'Rapid ಫೈರ್' ಪ್ರಶ್ನೆಗಳಿಗೆ ಬಿಗ್ ಬಾಸ್ ಜಯಶ್ರೀ ಕೊಟ್ಟ ನೇರ ಉತ್ತರ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+