ಬೈಯಪ್ಪನಹಳ್ಳಿ ಅಜ್ಜಿಯ ಕೋಳಿ ಕದ್ದ ಕಥೆ ಬಯಲು!
ಬೆಂಗಳೂರು, ನವೆಂಬರ್ 21 : ಬೈಯಪ್ಪನಹಳ್ಳಿಯ 35 ಕೋಳಿ ಕಳ್ಳತನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರಿಗೆ ದೂರು ನೀಡಿದ್ದ ಅಜ್ಜಿಯ ಅಸಲಿಯತ್ತು ಈಗ ಬಯಲಾಗಿದೆ.
ಬೈಯಪ್ಪನಹಳ್ಳಿಯ ನಿವಾಸಿ ಗಿರಿಜಮ್ಮ ಪಕ್ಕದ ಮನೆಯವರು ಕೋಳಿ ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲು ಮಾಡದೆ ರಾಜಿ ಮಾಡಿ ಕಳಿಸಿದ್ದರು.

ಗಿರಿಜಮ್ಮ ಇಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕಚೇರಿಗೆ ಬಂದು ದೂರು ದಾಖಲಿಸಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಅಜ್ಜಿಯ ಕೋಳಿ ಕಥೆ ಬಯಲಾಗಿದೆ.
2011ರಲ್ಲಿ ಗಿರಿಜಮ್ಮ ಮಗ ಪಕ್ಕದ ಮನೆಯವರ ಸರ ಕದ್ದಿದ್ದ. ಅವರು ನೀಡಿದ ದೂರಿನ ಅನ್ವಯ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಅಜ್ಜಿ ಪಕ್ಕದ ಮನೆಯವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಳು.
ಒಂದು ವಾರದ ಹಿಂದೆ ಬೈಯಪ್ಪನಹಳ್ಳಿ ಪೊಲೀಸರಿಗೆ ಅಜ್ಜಿ ಪಕ್ಕದ ಮನೆಯವರು ಕೋಳಿ ಕದ್ದಿದ್ದಾರೆ ಎಂದು ದೂರು ಕೊಟ್ಟಿದ್ದಳು. ಆಗ ಪೊಲೀಸರು ರಾಜಿ ಮಾಡಿಸಿ ಕಳಿಸಿದ್ದರು. ಇಂದು ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಕೊಟ್ಟಾಗ ಪ್ರಕರಣದ ಅಸಲಿ ಮುಖ ಬಯಲಾಗಿದೆ.












Click it and Unblock the Notifications