Get Updates
Get notified of breaking news, exclusive insights, and must-see stories!

ಆಸ್ತಿ GPS, ಮನೆ ಸಮೀಕ್ಷೆ ಆಧಾರದ ಮೇಲೆ ಬೆಂಗಳೂರಿನ ಆಸ್ತಿದಾರರಿಗೆ ಬಿಗ್ ಶಾಕ್: 370 ಕೋಟಿ ರೂ. ವಸೂಲಿಗೆ ನೋಟಿಸ್

Bengaluru Property: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ವು ಬೆಂಗಳೂರಿನಲ್ಲಿ 10,000 ಮನೆಗಳ ವಿಶೇಷ ಸಮೀಕ್ಷೆಯನ್ನು ಮಾಡಿದ್ದು, ಇದೀಗ ಬೆಂಗಳೂರಿನ ಹಲವು ಆಸ್ತಿದಾರರಿಗೆ ಬಿಗ್ ಶಾಕ್ ಕೊಡುವುದಕ್ಕೆ ಮುಂದಾಗಿದೆ. ಮಾಹಿತಿ ತಂತ್ರಜ್ಞಾನ ವಿಭಾಗವು, ಎನ್‌ಐಸಿ (NIC) ಸಹಯೋಗದೊಂದಿಗೆ, 5 ನಗರ ಪಾಲಿಕೆಗಳ ವ್ಯಾಪ್ತಿಯ GPS ತಂಡದಿಂದ ಕೈಗೊಳ್ಳಲಾದ ಸೂಕ್ಷ್ಮವಾಗಿ ಮನೆ-ಮನೆ ಸಮೀಕ್ಷೆಯ ಮೂಲಕ, ಪ್ರತಿ ಆಸ್ತಿಯ GPS ಮಾಹಿತಿ ಹಾಗೂ ಡ್ರೋನ್ ಚಿತ್ರಗಳನ್ನು ಬಳಸಿಕೊಂಡು, ಸುಮಾರು 10,000 ಆಸ್ತಿಗಳ ಮಾಲೀಕರು ಆಸ್ತಿಗಳಿಗೆ ಕಡಿಮೆ ತೆರಿಗೆ ಘೋಷಣೆಗಳ ಮೂಲಕ ಆಸ್ತಿ ತೆರಿಗೆ ವಂಚನೆ ಮಾಡಿರುವುದನ್ನು ಗುರುತಿಸಿದೆ.

ಬೆಂಗಳೂರಿನಲ್ಲಿ ಈ ಹಿಂದೆ ಆಸ್ತಿದಾರರೇ ಸ್ವಯಂ ಆಸ್ತಿ ಘೋಷಣೆ (ಯಾರಿಗೆ ಎಷ್ಟು ಆಸ್ತಿ ಇದೆ ಎಂದು ನಮೂದಿಸುವುದಕ್ಕೆ) ಅವಕಾಶ ನೀಡಿತ್ತು. ಆದರೆ ಬೆಂಗಳೂರಿನ ಕೆಲವು ಆಸ್ತಿದಾರರು ಇದನ್ನು ದುರುಪಯೋಗ ಮಾಡಿಕೊಂಡಿದ್ದು, ಇದೀಗ ಈ ಆಯ್ಕೆಯನ್ನು ದುರುಪಯೋಗ ಮಾಡಿಕೊಂಡಿರುವ ಆಸ್ತಿದಾರರಿಗೆ ಶಾಕ್ ಕೊಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ.

Big Shock for Bengaluru Property Owners Rs 370 Crore Recovery Notices Issued After GPS-Based House Survey

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ವು ಮನೆ ಸಮೀಕ್ಷೆ ಪ್ರಕ್ರಿಯೆಯಲ್ಲಿ ಸುಮಾರು 10,000 ಆಸ್ತಿಗಳಲ್ಲಿ ಆಸ್ತಿ ಮಾಲೀಕರು ಸರಾಸರಿ 5 ವರ್ಷಗಳಿಂದ ಕಡಿಮೆ ತೆರಿಗೆ ಪಾವತಿಸಿರುವುದು ಪತ್ತೆಯಾಗಿದೆ. ಇದರಿಂದ ಸುಮಾರು 370 ಕೋಟಿ ರೂ. ಮೊತ್ತದ ತೆರಿಗೆ ವಂಚನೆಯು ಕಂಡುಬಂದಿದೆ. (ಒಟ್ಟು ಸುಮಾರು 49,000 ನೋಟಿಸ್‌ಗಳು - ಪ್ರತಿ ವರ್ಷಕ್ಕೆ ಒಂದು ನೋಟಿಸ್‌).

ಈ ಸಂಬಂಧ ಕಾರಣ ಕೇಳಿ ನೋಟಿಸ್‌ಗಳನ್ನು (Show Cause Notices) ಜಾರಿ ಮಾಡಲಾಗಿದ್ದು, SMS ಹಾಗೂ IVRS ಮುಖಾಂತರವೂ ಕಳುಹಿಸಲಾಗಿದೆ. ನೋಟಿಸ್‌ ಪಡೆದ ನಾಗರಿಕರು, ನೋಟಿಸ್‌ ದಿನಾಂಕದಿಂದ 15 ದಿನಗಳೊಳಗೆ ಆನ್‌ಲೈನ್ ಮೂಲಕ ಉತ್ತರಿಸಲು ಅಥವಾ ಮೇಲ್ಮನವಿ ಸಲ್ಲಿಸಲು ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು:

https://BBMPenyaya.karnataka.gov.in

ಅಥವಾ ತಕ್ಷಣವೇ ಆನ್‌ಲೈನ್ ಮೂಲಕ ತೆರಿಗೆ ಪಾವತಿಸಬಹುದು:

https://BBMPtax.karnataka.gov.in

Bengaluru Property ಈ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿದ್ದು, ಸಂಕ್ಷಿಪ್ತವಾಗಿ ಕಾರ್ಯನಿರ್ವಹಿಸುವ ವಿಧಾನ ಹೀಗಿದೆ:

1. ಮನೆ-ಮನೆ ಸಮೀಕ್ಷೆ ನಡೆಸುವ GPS ತಂಡವು ಮೊಬೈಲ್ ತಂತ್ರಾಂಶದಲ್ಲಿ ಆಸ್ತಿ ತೆರಿಗೆ ವಿವರಗಳನ್ನು ಹೊಂದಿರುತ್ತದೆ.

2. ಭೇಟಿ ನೀಡುವ ತಂಡದ ಸದಸ್ಯರು ಪ್ರತಿ ಆಸ್ತಿಯ GPS ಮಾಹಿತಿ ದಾಖಲಿಸಿ, ಬಳಕೆ (ವಸತಿ/ವಾಣಿಜ್ಯ/ಮಿಶ್ರ ಇತ್ಯಾದಿ) ಹಾಗೂ ಆ ಬಳಕೆಗೆ ಒಳಪಟ್ಟಿರುವ ವಿಸ್ತೀರ್ಣವನ್ನು ದಾಖಲಿಸುತ್ತಾರೆ.

3. ಆಸ್ತಿಯ GPS, ನೆಲ ಹಾಗೂ ಮೇಲಿನ ಮಹಡಿಗಳ ಬಳಕೆ ಮಾಹಿತಿ, ಮಹಡಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ಮೊಬೈಲ್ ತಂತ್ರಾಂಶದಿಂದ ಬ್ಯಾಕ್‌ಎಂಡ್‌ಗೆ ಕಳುಹಿಸಲಾಗುತ್ತದೆ.

4. ಗುಣಮಟ್ಟ ಪರಿಶೀಲನಾ (QC) ತಂಡವು GPS ತಂಡದಿಂದ ಬಂದ ಎಲ್ಲಾ ಆಸ್ತಿ ಮಾಹಿತಿಯನ್ನು ಶೇ.100 ರಷ್ಟು ಪರಿಶೀಲಿಸುತ್ತದೆ. ತಿರಸ್ಕೃತ ಪ್ರಕರಣಗಳನ್ನು ಮರುಪರಿಶೀಲನೆಗಾಗಿ GPS ತಂಡಕ್ಕೆ ಹಿಂದಿರುಗಿಸಲಾಗುತ್ತದೆ.

5. QC ಅನುಮೋದನೆ ಪಡೆದ ಪ್ರಕರಣಗಳನ್ನು ಡ್ರೋನ್ ಡೇಟಾ ಹಾಗೂ ಡಿಜಿಟೈಸ್ ಮಾಡಲಾದ ನಿರ್ಮಿತ ವಿಸ್ತೀರ್ಣದೊಂದಿಗೆ ಹೋಲಿಕೆ ಮಾಡಲಾಗುತ್ತದೆ. ನಿರ್ಮಿತ ವಿಸ್ತೀರ್ಣ ಹೆಚ್ಚು ಇದ್ದು, ನಾಗರಿಕರು ಕಡಿಮೆ ಘೋಷಿಸಿದ್ದರೆ ಅಥವಾ ಭಾಗಶಃ/ಪೂರ್ಣವಾಗಿ ವಾಣಿಜ್ಯ ಬಳಕೆಯಲ್ಲಿದ್ದರೂ ಘೋಷಿಸದೇ ಇದ್ದರೆ, ತಂತ್ರಾಂಶದ ಮೂಲಕ ಬಾಕಿ ತೆರಿಗೆ, ಬಡ್ಡಿ ಮತ್ತು ದಂಡ ಸಹಿತ ಶೋಕಾಸ್ ನೋಟಿಸ್‌ಗಳನ್ನು ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ.

ನಮ್ಮ GPS ತಂಡವು ಪ್ರತಿದಿನ ಸುಮಾರು 10,000 ಆಸ್ತಿಗಳಿಗೆ ಭೇಟಿ ನೀಡುತ್ತಿದ್ದು, ತೆರಿಗೆ ವಂಚಿಸಿದ ಎಲ್ಲರೂ ಶೀಘ್ರದಲ್ಲೇ ಹೊಣೆಗಾರರಾಗಲಿದ್ದಾರೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎಚ್ಚರಿಕೆ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+