ಸರ್ಕಾರ ಮಾಡದ ಕೆಲಸ ಮಾಡಿದ ಮಹಿಳೆ! ತಾಯಿ ಹೃದಯಕ್ಕೆ ನೆಟ್ಟಿಗರ ಸಲಾಂ, ಜಿಬಿಎಗೆ ಛೀಮಾರಿ Video Viral

ಬೆಂಗಳೂರು: ಸಂಚಾರ ದಟ್ಟಣೆಗೆ ಹೆಸರಾದ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಮೂಲಸೌಕರ್ಯ ಸಮಸ್ಯೆ, ಅಪಘಾತಗಳ ಪ್ರಮಾಣವೇನು ಕಡಿಮೆ ಇಲ್ಲ. ಈಗಾಗಲೇ ರಸ್ತೆಗುಂಡಿಗಳಿಂದ ಸಾಕಷ್ಟು ತೊಂದರೆ, ಸಾವು ನೋವುಗಳಾಗಿವೆ. ಆದರೂ ಬೆಂಗಳೂರಿನಲ್ಲಿ ರಸ್ತೆಗುಂಡಿಗಳು ರಾರಾಜಿಸುತ್ತಿವೆ. ಇದರ ಮಧ್ಯೆ ಮಹಿಳೆಯೊಬ್ಬರು ರಸ್ತೆಗುಂಡಿಯನ್ನು ಮುಚ್ಚಿ ಮಹಿಳೆಯೊಬ್ಬರು ಸಾಮಾಜಿಕ ಕಳಕಳಿ ಮೆರೆದಿದ್ದು, ನೆಟ್ಟಿಗರು ತಾಯಿ ಹೃದಯಕ್ಕೆ ಸಲಾಂ ಹೊಡೆದಿದ್ದಾರೆ. ಸರ್ಕಾರ, ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ.

ರಾಜ್ಯ ಸರ್ಕಾರ ಬೆಂಗಳೂರು ರಸ್ತೆಗುಂಡಿಗಳನ್ನು ಮುಚ್ಚಲು ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿದೆ. ಆದರೂ ಗುಣಮಟ್ಟದ ಕೆಲಸಗಳು ಆಗಿಲ್ಲ. ಮಳೆಗಾಲದಲ್ಲಿ ರಸ್ತೆಗುಂಡಿಗಳ ಸಮಸ್ಯೆಗೆ ಮತ್ತೆ ಜೀವ ಬರುತ್ತದೆ. ಇದರಿಂದಾಗಿ ಪ್ರಯಾಣಿಕರು ಗುಂಡಿ ತಪ್ಪಿಸಲು ಹೋಗಿ ಅನಾಹುತ ಮಾಡಿಕೊಳ್ಳುತ್ತಾರೆ, ಸಂಚಾರ ನಿಧಾನಗತಿಯಲ್ಲಿ ಸಾಗುತ್ತದೆ. ರಸ್ತೆಗುಂಡಿ ಕಂಡು ಕಾಣದಂತೆ ಹೋಗುವವರ ಮಧ್ಯೆ ಇಲ್ಲೊಬ್ಬ ಮಹಿಳೆ ರಸ್ತೆಗುಂಡಿ ಮುಚ್ಚಿ ಮಾದರಿಯಾಗಿದ್ದಾರೆ. ಸಾರ್ವಜನಿಕ ಸಮಸ್ಯೆ ತಮ್ಮ ಸಮಸ್ಯೆ ಎಂದು ತಿಳಿದು ಸ್ವಂತ ಖರ್ಚಿನಲ್ಲಿ ರಸ್ತೆಗುಂಡಿಗೆ ಚೀಲ ಮಣ್ಣು ತಂದು ಸುರಿದ ವಿಡಿಯೋ ವೈರಲ್ ಆಗಿದೆ.

Bengaluru Woman Pothole video 1

ಎಕ್ಸ್ ‌ಪೋಸ್ಟ್‌ನಲ್ಲಿ ಸನಾತನ ಹ್ಯಾಂಡಲ್‌ನಿಂದ ಹಂಚಿಕೊಂಡ ವೈರಲ್ ಆದ ವಿಡಿಯೋದಲ್ಲಿ, ಮಹಿಳೆಯು ಸ್ಕೂಟರ್‌ನಲ್ಲಿ ಎರಡು ಚೀಲ ಮಣ್ಣು ತಂದು ರಸ್ತೆಗುಂಡಿಗೆ ಸುರಿಯುವ, ಮಣ್ಣು ಹಾಕಿ ಗುಂಡಿ ಮುಚ್ಚುವುದು ಕಾಣಿಸುತ್ತದೆ. ಅಸಲಿಗೆ ಇದು ಸಣ್ಣ ಅಥವಾ ಉಪ ರಸ್ತೆಯಲ್ಲ. ಬದಲಾಗಿ KSRTC ಮತ್ತು ಬಿಎಂಟಿಸಿ ಓಡಾಡುವ ಪ್ರಮುಖ ರಸ್ತೆಯಲ್ಲೇ ಬಿದ್ದಿರುವ ಬೃಹತ್ ಹೊಂಡವೆಂದು ಸ್ಪಷ್ಟವಾಗಿ ಕಾಣಿಸುತ್ತದೆ.

ಜಿಬಿಎ, ಸಚಿವರಿಗೆ ನಾಚಿಕೆಗೇಡಿನ ಸಂಗತಿ!

'ತಾಯಿ ಹೃದಯ ಸಾಮಾಜಿಕ ಸಮಸ್ಯೆಗೆ ಮಿಡಿದಿದೆ. ಬೆಂಗಳೂರಿನ ಅಪಾಯಕಾರಿ ಹೊಂಡಗಳಿಂದ ಬೇಸತ್ತು, ಅವಳು ಸ್ವತಃ ಮಣ್ಣನ್ನು ತಂದು ರಸ್ತೆಗುಂಡಿ ತುಂಬಿಸಿ ಮುಚ್ಚಿದ್ದಾರೆ. ರಾಜ್ಯ ಸರ್ಕಾರ, ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚುವಲ್ಲಿ ವಿಫಲವಾಗಿದ್ದಾರೆ. ಜನಸಾಮಾನ್ಯರೇ ಅವರವರ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ಳಬೇಕೆಂಬ ಸ್ಥಿತಿ ತಂದಿದ್ದ ನಾಗರಿಕ ಸಂಸ್ಥೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಇದು ನಾಚಿಕೆಗೇಡಿನ ಸಂಗತಿ' ಎಂದು ಪೋಸ್ಟ್‌ನೊಂದಿಗೆ ಬರೆಯಲಾಗಿದೆ.

ಅಧಿಕಾರಿಗಳು, ಸರ್ಕಾರಕ್ಕೆ ಭ್ರಷ್ಟಾಚಾರಕ್ಕೆ ಮಾತ್ರವೇ ಸಮಯ

ಸಾಮಾಜಿಕ ಬಳಕೆದಾರರು ಬೆಂಗಳೂರು ನಗರ ಸಂಚಾರ ದಟ್ಟಣೆ, ಜಿಬಿಎ, ಸಚಿವರಿಗೆ ಟ್ಯಾಗ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ಪೋಸ್ಟರ್ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಇಂಥಹ ಸಮಸ್ಯೆ ಪರಿಹಾರಕ್ಕೆ ಸಮಯವಿಲ್ಲ. ಬದಲಾಗಿ ಅವರು ಪೋಟೋ ತೆಗೆಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಜಿಬಿಎ ಅಧಿಕಾರಿಗಳಿಗೆ ನಾಚಿಕೆಯಾಗಬೇಕು' ಎಂದು ದೂರಿದ್ದಾರೆ.

'ಬೈಕ್‌ಗಳು ದ್ವಿಚಕ್ರವಾಹನಗಳಿಗೆ ಅಪಾಯ ತರುತ್ತವೆ' ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಮೂರನೇಯವರು, 'ಕೋಟ್ಯಾಂತರ ರೂಪಾಯಿ ಕಪ್ಪು ಹಣ ಹೊಂದಿರುವ ಐಎಎಸ್ ಸರ್ಕಾರಿ ಬಾಬಾಗಳು, ಎಂಜಿನಿಯರ್‍‌ಗಳಿಗೆ ಭ್ರಷ್ಟಾಚಾರ ಬಿಟ್ಟು ಇಂತಹ ಕೆಲಸ ಮಾಡಲು ಸಮಯವಿಲ್ಲ. ಇವರೆಲ್ಲ ಸಾರ್ವಜನಿಕ ಸೇವೆಗಾಗಿ ಬಂದವರಲ್ಲ, ಕೇವಲ ಗರಿಷ್ಠ ಮಟ್ಟದ ಭ್ರಷ್ಟಾಚಾರ ನಡೆಸಲು ಬಂದಂತಿದೆ. ಇತ್ತ ನಮ್ಮಿಂದ ಆಯ್ಕೆಯಾದ ಶಾಸಕರು, ಸಂಸದರು, ಸಚಿವರು ಜನಸೇವೆ ಮಾಡದೇ ಅಧಿಕಾರಿಗಳೊಂದಿಗೆ ಭ್ರಷ್ಟಾಚಾರದ ಒಪ್ಪಂದ ಮಾಡಿಕೊಂಡಿದ್ದಾರೆ' ಎಂದು ದೂರಿದ್ದಾರೆ.

ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆಗೆ ಪ್ರತಿ ವರ್ಷವು ಜಿಬಿಎ ಅನುದಾನ ನೀಡುತ್ತದೆ. ಆದರೂ ಪ್ರತಿ ರಸ್ತೆಗಳಲ್ಲಿ ರಸ್ತೆಗುಂಡಿಗಳು ಕಾಣಿಸುತ್ತಿವೆ. ಇದು ಸರ್ಕಾರ ಅಡಳಿತ, ಗುಣಮಟ್ಟ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+