Bengaluru Weather: ಮಳೆಹಾನಿ ಸಮಸ್ಯೆಗೆ ತ್ವರಿತ ಸ್ಪಂದನೆಗೆ ಬಿಬಿಎಂಪಿ ವಲಯವಾರು ಸಹಾಯವಾಣಿ ಪ್ರಕಟ
ಬೆಂಗಳೂರು, ಮೇ 24: ಬದಲಾದ ಹವಾಮಾನ ವೈಪರಿತ್ಯಗಳಿಂದಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಮುಂದುವರಿದಿದೆ. ಮಳೆ ಕಾರಣದಿಂದ ಬೆಂಗಳೂರಿನಲ್ಲಿ ಹಲವು ಆವಾಂತರಗಳು ಸೃಷ್ಟಿಯಾಗಿವೆ. ಈ ಕಾರಣದಿಂದ ನಾಗರಿಕರಿಗೆ ತುರ್ತು ಸ್ಪಂದನೆಗಾಗಿ ಬಿಬಿಎಂಪಿ ಸಹಾಯವಾಣಿಯ ನಂಬರ್‌ಗಳನ್ನು ಬಿಡುಗಡೆ ಮಾಡಿದೆ.
#BengaluruRains BBMP helpline numbers pic.twitter.com/dBAEDK7PSS
— ChristinMathewPhilip (@ChristinMP_) May 23, 2023
ಬೆಂಗಳೂರಿನಲ್ಲಿ ಎಲ್ಲಿಯಾದರೂ ಮಳೆ ಹಾನಿಗೀಡಾದರೆ, ಮರಗಳು ಉರುಳಿ ಬಿದ್ದು ಸಮಸ್ಯೆ ಉಂಟಾಗಿದ್ದರೆ, ಇಲ್ಲವೇ ರಸ್ತೆಗಳು, ಅಂಡರ್‌ಪಾಸ್‌ಗಳು ಸೇರಿದಂತೆ ಇನ್ನಿತರ ಮಳೆ ಸಮಸ್ಯೆಗಳ ಪರಿಹಾರಕ್ಕೆ ಸಾರ್ವಜನಿಕರು ಈ ಸಹಾಯವಾಣಿಗೆ ಕರೆ ಮಾಡಬಹುದು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿನ ಯಲಹಂಕ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ವಿಮ, ಬೆಂಗಳೂರು ಪೂರ್ವ ಮತ್ತು ಮಹಾದೇವಪುರ ವಲಯದ ಮುಖ್ಯ ಅಭಿಯಂತರು, ಅಧಿಕಾರಿಗಳ ದೂರವಾಣಿ ಸಂಖ್ಯೆ ಸೇರಿದಂತೆ ಎಲ್ಲ ಸಹಾಯವಾಣಿ ನಂಬರ್ ಪಟ್ಟಿ ಇಲ್ಲಿದೆ. ನಗರದ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು ಎಂಟು ವಲಯಗಳ ವ್ಯಾಪ್ತಿಗೆ ಸಂಬಂಧಿಸಿದ ಈ ಸಹಾಯವಾಣಿ ನಂಬರ್ ಪ್ರಕಟಿಸಲಾಗಿದೆ.
ಇಂದಿನಿಂದ ನಾಲ್ಕು ದಿನ ಮಳೆ: ಬಿಬಿಎಂಪಿ ಮುನ್ನೆಚ್ಚರಿಕೆ
ಇಂದಿನಿಂದ ನಾಲ್ಕು ದಿನ ಸಿಲಿಕಾನ್ ಸಿಟಿಗೆ ಸಂಜೆ ನಂತರ ಜೋರು ಮಳೆ ಸುರಿಯಲಿದೆ. ಮಳೆ ಜೊತೆಗೆ ಬಿರುಗಾಳಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಬರಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ (KSNDMC) ಮಳೆ ಮುನ್ಸೂಚನೆ ಮಾಹಿತಿ ನೀಡಿದೆ.

ಕಳೆದ ಭಾನುವಾರ ಸುರಿದ ಧಾರಾಕಾರ ಮಳೆಗೆ ಕೆ.ಆರ್.ವೃತ್ತದ ಅಂಡರ್ ಪಾಸ್‌ನಲ್ಲಿ ನಿಂತ ಮಳೆ ನೀರಿನಲ್ಲಿ ಸಿಲುಕಿ ಯುವತಿ ಸಾವನ್ನಪ್ಪಿದ್ದರು. ಬ್ಯಾಟರಾಯನಪುರದ ರಾಜಕಾಲುವೆಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದರು. ಅಲ್ಲದೇ ಹತ್ತಾರು ಕಡೆಗಳಲ್ಲಿ ಮರಗಳು, ಮರದ ಕೊಂಬೆಗಲು ಧರೆಗುರುಳಿ ಬಿದ್ದವು. ಪ್ರಮುಖ ರಸ್ತೆಗಳೇ ಕರೆಯಂತಾಗಿದ್ದವರು. ವಾಹನ ಸಂಚಾರ ಮತ್ತು ಜನಜೀವನ ಅಸ್ತವೆಸ್ತವಾಗಿತ್ತು. ಅಲ್ಲದೇ ವಿದ್ಯುತ್ ಸಮಸ್ಯೆ ಸಹ ಕಾಡಿತ್ತು. ಇದೆಲ್ಲ ಕಾರಣದಿಂದ ಮುಂಜಾಗೃತ ಕ್ರಮವಾಗಿ ಜನರಿಗೆ ತ್ವರಿತವಾಗಿ ಸ್ಪಂದಿಸಲು ಈಗಾಗಲೇ ಚಾಲ್ತಿಯಲ್ಲಿರುವ ಸಹಾಯವಾಣಿ ಸಂಖ್ಯೆಗಳನ್ನು ಮತ್ತೊಮ್ಮೆ ಪ್ರಕಟಿಸಿದೆ.












Click it and Unblock the Notifications