BWSSB: ನಾಗರಿಕರೇ ಗಮನಿಸಿ! ಮಂಗಳವಾರ (ಸೆ.22) ಕಾವೇರಿ ನೀರು ಬರಲ್ಲ, ಎಲ್ಲೆಲ್ಲಿ?
ಬೆಂಗಳೂರು: ಬೆಂಗಳೂರಿಗೆ ಆಧಾರವಾಗಿರುವ ಕಾವೇರಿ ನೀರು ಸರಬರಾಜಿನಲ್ಲಿ ನಾಳೆ ಸೆಪ್ಟೆಂಬರ್ 22ರಂದು ಮಂಗಳವಾರ 6 ಗಂಟೆಗಳ ಕಾಲ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಾಹಿತಿ ನೀಡಿದೆ. ಯಾವೆಲ್ಲ ಪ್ರದೇಶಗಳಲ್ಲಿ ನೀರು ಬರಲ್ಲ, ಅದಕ್ಕೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.
ಕಾವೇರಿ ನೀರು ಸರಬರಾಜು ಯೋಜನೆಯ 1ನೇ ಹಂತದ ಜಲರೇಚಕ ಯಂತ್ರಾಗಾರದಲ್ಲಿ ಪಂಪ್ ಸಂಖ್ಯೆ-4 ರ ಪ್ರತ್ಯೇಕಿಸುವ ಸ್ಲೂಯಿಸ್ ವಾಲ್ವ್ ಬೈಪಾಸ್ ಹಾಗೂ ಬೆಲ್ಲೋ ವಿಸ್ತರಣೆಯ ತುರ್ತು ದುರಸ್ತಿ ಕಾಮಗಾರಿಯನ್ನು ಅಧಿಕಾರಿಗಳು ಸೆಪ್ಟೆಂಬರ್ 22ರಂದು ಬೆಳಗ್ಗೆಯಿಂದಲೇ ಕೈಗೊಳ್ಳಲಿದ್ದಾರೆ. ಈ ಕಾರಣದಿಂದ ಕೆಳಗಿನ ಪ್ರಮುಖ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತಾತ್ಕಾಲಿಕ ಸ್ಥಗಿತವಾಗಲಿದೆ.

ಆರು ಗಂಟೆ ಯಂತ್ರಾಗಾರ ಸ್ಥಗಿತ
ಕಾವೇರಿ ನೀರು ಸರಬರಾಜು ಯೋಜನೆ 1ನೇ ಹಂತದ ಜಲರೇಚಕ ಯಂತ್ರಾಗಾರಗಳನ್ನು ಮಂಗಳವಾರ ಬೆಳಗ್ಗೆ 06:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಒಟ್ಟು 06 ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಆಗ ನೀರು ಪೂರೈಕೆ ಆಗುವುದಿಲ್ಲ. ನಾಗರಿಕರು ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.
ನೀರಿನ ವ್ಯತ್ಯಯ ಉಂಟಾಗುವ ಪ್ರದೇಶಗಳ ವಿವರ
ಚಾಮರಾಜಪೇಟೆ, ಬನಶಂಕರಿ 2ನೇ ಹಂತ ಶ್ರೀನಗರ, ಅಶೋಕ್ ನಗರ ಪೈಪ್‌ಲೈನ್ ರಸ್ತೆ, ಜಯನಗರ 4ನೇ ಮತ್ತು ಟಿ ಬ್ಲಾಕ್, ತಿಲಕ್ ನಗರ, ಮಾಧವನ್ ಪಾರ್ಕ್, ಹೊಂಬೇಗೌಡ ನಗರ, ಲಕ್ಕಸಂದ್ರ, ಆಡುಗೋಡಿ, ಮಾಗಡಿ ರಸ್ತೆ, ಕದಿರೇನಹಳ್ಳೀ, ಮಿನಾಜ್ ನಗರ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭನಗರ, ಆರ್ ಕೆ ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೇಂದ್ರೆನಗರ, ಕುಮಾರಸ್ವಾಮಿ ಲೇಔಟ್ 1 ಮತ್ತು 2ನೇ ಹಂತ, ಇಲಿಯಾಜ್ ನಗರ, ಚಂದ್ರನಗರ, ಮಾರುತಿ ಲೇಔಟ್, ವಿಟ್ಲ ನಗರ.
ಇಸ್ರೋ ಬಡಾವಣೆ, ಟೀಚರ್ಸ್ ಕಾಲೋನಿ, ಯಲಚೇನಹಳ್ಳಿ, ಪೂರ್ಣಪ್ರಜ್ಞ ಲೇಔಟ್, ಉತ್ತರಹಳ್ಳಿ ಗ್ರಾಮ, ಕೆಎಸ್‌ಆರ್‌ಟಿಸಿ ಲೇಔಟ್, ಅಂಕಪ್ಪ ಲೇಔಟ್, ಗುಮ್ಮಯ್ಯ ಲೇಔಟ್, ಬನಶಂಕರಿ 5ನೇ ಹಂತ, ಎಜಿಎಸ್ ಲೇಔಟ್, ಸರ್ವಭೌಮ ನಗರ, ಸುಬ್ರಹ್ಮಣ್ಯಪುರ, ಬಿಎಚ್‌ಸಿಎಸ್ ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ಕಾಕತಿಯಾ ನಗರ, ಸದ್ದಗುಂಟೆಪಾಳ್ಯ, ಮಾರುತಿನಗರ, ಭವಾನಿ ಬಡಾವಣೆ, ವೆಂಕಟೇಶ್ವರ ಬಡಾವಣೆ, ಬೃಂದಾವನ ಲೇಔಟ್, ಮಡಿವಾಳ, ಚಿನ್ನಮ್ಮ ಲೇಔಟ್, ಕೋರಮಂಗಲ 2,4, 5,6,7 & 8ನೇ ಬ್ಲಾಕ್, ಚಿಕ್ಕಾಡುಗೋಡಿ, ಸೇಂಟ್ ಜಾನ್ಸ್ ಆಸ್ಪತ್ರೆ, ರಾಜೇಂದ್ರನಗರ.
ಜಾನ್ಸನ್ ಮಾರ್ಕೆಟ್, ಸಿಎಲ್ಆರ್, ಶಾಂತಿನಗರ, ಲಾಂಗ್ ಫೋರ್ಡ್ ಟೌನ್, ಎಂಜಿ ರಸ್ತೆ, ರಿಚ್ಮಂಡ್ ಟೌನ್, ಅಶೋಕನಗರ, ನೀಲಸಂದ್ರ, ಆಸ್ಟಿನ್ ಟೌನ್, ವಿವೇಕ್ ನಗರ, ಈಜಿಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ದೊಮ್ಮಲೂರು ಬಡಾವಣೆ, ದೊಮ್ಮಲೂರು ಗ್ರಾಮ, ಕೋಡಿಹಳ್ಳಿ, ದೊಮ್ಮಲೂರು, ಕಮಾಂಡೋ ಆಸ್ಪತ್ರೆ, ಹಲಸೂರು, ಜೋಗುಪಾಳ್ಯ, ಕೇಂಬ್ರಿಡ್ಜ್ ಬಡಾವಣೆ, ಹಲಸೂರು ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ಆರು ಗಂಟೆ ಅಡಚಣೆ ಆಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ಮೂಲಕ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೋರಿದೆ.


Click it and Unblock the Notifications
