Water Crisis: ಇನ್ಮುಂದೆ ಬೆಂಗಳೂರಿನ ಹೋಟೆಲ್‌& ರೆಸ್ಟೋರೆಂಟ್‌ಗಳಲ್ಲಿ ಈ ಬದಲಾವಣೆ

ಬೆಂಗಳೂರು, ಮಾರ್ಚ್ 14: ಬೆಂಗಳೂರಿನಲ್ಲಿ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಉದ್ಯಮದ ಮೇಲೆ ಇದರ ನೇರ ಪರಿಣಾಮ ತಟ್ಟುತ್ತಿದೆ. ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲೀಕರಿಗೆ ನೀರು ಖರೀದಿಸುವುದೇ ದುಬಾರಿಯಾಗುತ್ತಿದೆ. ಅಲ್ಲದೇ ಟ್ಯಾಂಕರ್‌ ನೀರು ಬುಕ್‌ ಮಾಡಿದರೆ ಎರಡು ಮೂರು ದಿನ ನೀರಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ದಿನ ನಿತ್ಯದ ವ್ಯಾಪಾರದ ಜೊತೆಗೆ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಹೋಟೆಲ್‌ ಮಾಲೀಕರಿಗೆ ಸವಾಲಾಗಿದೆ. ಹೀಗಾಗಿ ನಗರದ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲೀಕರು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದ್ದಾರೆ.

Bengaluru Water Crisis Restaurants Changing Routine To Cope With Water Crisis

ಹೋಟೆಲ್‌ಗಳಿಗೆ ಈಗಿರುವ ಬೋರ್‌ವೆಲ್‌ಗಳು ಸಂಪೂರ್ಣ ಬರಿದಾಗುತ್ತಿದೆ. ಹಾಗೂ ಅವುಗಳನ್ನು ರಿಪೇರಿ ಮಾಡಿದರೂ ನಿರೀಕ್ಷಿಸಿದ ಮಟ್ಟಿನ ನೀರು ಸಿಗುವುದು ಅನುಮಾನವಾಗಿದೆ. ಹೀಗಾಗಿ ಹೊಸ ಬೋರ್‌ವೆಲ್‌ಗಳನ್ನು ತೆಗೆಯಲು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲೀಕರು ಮುಂದಾಗಿದ್ದಾರೆ.

ಹೋಟೆಲ್‌ಗಳಲ್ಲಿ ನೀರನ್ನು ಹಿತ-ಮಿತವಾಗಿ ಬಳಸಲು ಯೂಸ್‌ ಆ್ಯಂಡ್‌ ಥ್ರೋ ಅಂದರೆ ಬಳಸಿ ಬಿಸಾಡುವಂತಹ ಪ್ಲೇಟ್‌ ಹಾಗೂ ಕಪ್‌ಗಳನ್ನು ಬಳಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಈ ರೀತಿಯ ಪ್ಲೇಟ್‌ಗಳನ್ನು ಬಳಸಲಾಗುತ್ತಿತ್ತು. ಇದೀಗ ನೀರಿನ ಕೊರೆತೆ ಹಿನ್ನೆಲೆಯಲ್ಲಿ ಮತ್ತೆ ಬಳಸಿ ಬಿಸಾಡುವಂತಹ ವಸ್ತುಗಳನ್ನು ಹೋಟೆಲ್‌ಗಳಲ್ಲಿ ಬಳಕೆ ಮಾಡಲಾಗುತ್ತಿದೆ.

ಇನ್ನು ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ಈ ಕ್ರಮ ಅನುಸರಿಸಲು ಆಗುವುದಿಲ್ಲ. ಏಕೆಂದರೆ ದಿನ ನಿತ್ಯ ಸಾವಿರಾರು ಜನರು ಭೇಟಿ ನೀಡುವುದರಿಂದ ವಿಲೇವಾರಿಗೆ ಕಷ್ಟವಾಗುತ್ತದೆ. ಹಾಗೂ ಗ್ರಾಹಕರ ತೃಪ್ತಿಯೂ ಮುಖ್ಯವಾಗಿರುತ್ತದೆ. ಹೀಗಾಗಿ ರೆಸ್ಟೋರೆಂಟ್‌ಗಳಲ್ಲಿ ಕುಡಿಯುವ ನೀರನ್ನು ಉಳಿಸಲು ಪ್ಯಾಕೆಟ್‌ ಬಾಟೆಲ್‌ಗಳನ್ನು ಹೆಚ್ಚಾಗಿ ನೀಡಲಾಗುತ್ತಿದೆ.

ಅಲ್ಲದೇ ಗ್ರಾಹಕರು ರೆಸ್ಟೋರೆಂಟ್‌ಗೆ ಬಂದ ತಕ್ಷಣ ಗಾಜಿನ ಲೋಟದಲ್ಲಿ ನೀರು ಕೊಡುವುದನ್ನು ನಿಲ್ಲಿಸಲಾಗುತ್ತಿದೆ. ಏಕೆಂದರೆ ಈ ನೀರನ್ನು ಗ್ರಾಹಕರು ಸ್ವಲ್ಪ ಸೇವಿಸಿ ಉಳಿದದನ್ನು ಎಸೆಯುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಕೆಲವು ರೆಸ್ಟೋರೆಂಟ್‌ಗಳಲ್ಲಿ ನೀರು ಕೊಡುವ ಗಾಜಿನ ಲೋಟಗಳ ಗಾತ್ರವನ್ನು ತಗ್ಗಿಸಲಾಗಿದೆ. ಚಿಕ್ಕ ಲೋಟಗಳಲ್ಲಿ ನೀರನ್ನು ನೀಡಲಾಗುತ್ತಿದೆ.

ಇನ್ನು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಪಾತ್ರೆ ತೊಳೆಯಲು ಬಳಸಿದ ನೀರನ್ನು ಎಸೆಯದೇ ಗಿಡಗಳಿಗೆ ಹಾಕಲಾಗುತ್ತಿದೆ. ಹೀಗೆ ತಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡು ನೀರು ಉಳಿಸಲು ನಗರದ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲೀಕರು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+