Bengaluru Tunnel Road: ಬೆಂಗಳೂರಿನ ಈ ಪ್ರಮುಖ ಮಾರ್ಗದಲ್ಲಿ ಸುರಂಗ ರಸ್ತೆ-ಆರಂಭ ಯಾವಾಗ ಹಾಗೂ ವೆಚ್ಚದ ಎಷ್ಟು? ಮಾಹಿತಿ, ವಿವರ
ಬೆಂಗಳೂರು, ಫೆಬ್ರವರಿ, 19: ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದ್ದು, ಅಷ್ಟೇ ಪ್ರಮಾಣದಲ್ಲಿ ವಾಹನ ದಟ್ಟಣೆಯು ಕೂಡ ಹೆಚ್ಚಾಗುತ್ತಲಿದೆ. ಇದನ್ನು ಕಡಿಮೆ ಮಾಡಲು ಹಲವೆಡೆ ಫ್ಲೈಓವರ್, ಸುರಂಗಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಹೆಬ್ಬಾಳ ಬಳಿಕ ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ.
ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಟ್ರಾಫಿಕ್ ಕಡಿಮೆ ಮಾಡಲು ಸರ್ಕಾರ ವಿವಿಧ ಯೋಜನೆ, ಕಾಮಗಾರಿಗಳನ್ನು ಮಾಡುತ್ತಿದೆ. ಅದರಲ್ಲೂ ಇತ್ತಿಚೆಗೆ ಚರ್ಚೆಗೆ ಇರುವ ವಿಚಾರ ಅಂದರೆ ಅದು ಹೆಬ್ಬಾಳದ ಬಳಿ ಎರಡೂವರೆ ಸಾವಿರ ಕೋಟಿ ವೆಚ್ಚದಲ್ಲಿ ಟನಲ್ ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ಇದೀಗ ಯಶವಂತಪುರ, ಗೊರುಗುಂಟೆ ಪಾಳ್ಯದಲ್ಲಿ ಟನಲ್ ನಿರ್ಮಿಸಲು ಪೀಸಿಬಲ್ ವರದಿ ಸಿದ್ದಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗೊರಗುಂಟೆ ಪಾಳ್ಯದ ಬಳಿ ಮೆಟ್ರೋ ಹಾದು ಹೊಗಿರುವ ಹಿನ್ನೆಲೆ ಟನಲ್ ನಿರ್ಮಾಣ ಮಾಡಬೇಕಾ ಅಥವಾ ಫ್ಲೈಓವರ್ ಮಾಡಬೇಕಾ ಎಂಬ ಚರ್ಚೆ ನಡೆಯುತ್ತಿದೆ. ಸುಮನಹಳ್ಳಿವರೆಗೂ ಸಹ ಡಬಲ್ ರಸ್ತೆ ಸೇರಿದಂತೆ ವಿವಿಧ ರೀತಿಯಲ್ಲಿ ಆಲೋಚನೆ ನಡೆಯುತ್ತಿದೆ. ಆದರೆ ಯಶವಂತಪುರ ಮತ್ತು ಗೊರಗುಂಟೆ ಪಾಳ್ಯದಲ್ಲಿ ಟ್ರಾಫಿಕ್ ಜಾಸ್ತಿ ಆಗುತ್ತಿದ್ದು, ಟ್ರಾಫಿಕ್ ಮುಕ್ತಿಗೆ ಬೇರೆ ಮಾರ್ಗ ಕಂಡುಕೊಳ್ಳಬೇಕಿದೆ.
ಗೊರಗುಂಟೆ ಪಾಳ್ಯ ಮತ್ತು ಯಶವಂತಪುರದಲ್ಲಿ ಟನಲ್ ನಿರ್ಮಾಣ ಚರ್ಚೆಯ ಹಂತದಲ್ಲಿದೆ. ಇನ್ನು ಎಷ್ಟು ಕಿಲೋ ಮೀಟರ್‍ವರೆಗೆ ಆಗಲಿದೆ, ವೆಚ್ಚ ಎಷ್ಟು ಆಗಲಿದೆ ಹಾಗೂ ಯಾವಾಗ ಆರಂಭ ಎನ್ನುವ ಮಾಹಿತಿ ತಿಳಿದುಬರಬೇಕಿದೆ.












Click it and Unblock the Notifications