Bengaluru Traffic Alert: ವೈಟ್‌ ಟಾಪಿಂಗ್ ಕಾಮಗಾರಿ! ಈ ರಸ್ತೆಗಳ ಸಂಚಾರದಲ್ಲಿ ಬದಲಾವಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ವೈಟ್‌ ಟಾಪಿಂಗ್ ಕಾಮಗಾರಿ ಇಂದು ಸೋಮವಾರದಿಂದ (ಅಕ್ಟೋಬರ್ 5) ಆರಂಭವಾಗಲಿದೆ. ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿತ್ಯ ಸಂಚರಿಸುವ ವಾಹನಗಳನ್ನು ಈ ಭಾಗದಲ್ಲಿ ನಿಷೇಧಿಸಿ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ನಗರದ ಹೈಗೌಂಡ್ಸ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ರೇಸ್‌ಕೋರ್ಸ್ ರಸ್ತೆಯ ಮೌರ್ಯ ಜಂಕ್ಷನ್‌ನಿಂದ ಹರೇಕೃಷ್ಣ ರಸ್ತೆ ಜಂಕ್ಷನ್‌ವರೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ.

Bengaluru Traffic Alert

ಈ ಕಾರಣದಿಂದ ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೂ ಹಾಗೂ ಶಿವಾನಂದ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ವರೆಗೂ ಸಂಚರಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ. ಸಾರ್ವಜನಿಕರ ಸುಗಮ ಸಂಚಾರ ದೃಷ್ಟಿಯಿಂದ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಚಾರ ನಿರ್ಬಂಧದ ಎಲ್ಲೆಲ್ಲಿ?

* ಶಿವಾನಂದ ಜಂಕ್ಷನ್ ಕಡೆಯಿಂದ ಮೌರ್ಯ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

* ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು

* ಸ್ಯಾಂಕಿ ರಸ್ತೆಯಲ್ಲಿ ಕೆ.ಆರ್. ಮಾರುಕಟ್ಟೆ ಕಡೆಗೆ ಸಂಚರಿಸುವ ಬಿ.ಎಂ.ಟಿ.ಸಿ ಬಸ್ಸುಗಳು, ಖಾಸಗಿ ಬಸ್ಸುಗಳು ಹಾಗೂ ಹೆಚ್.ಜಿ.ವಿ. ವಾಹನಗಳು ವಿಂಡ್ಲರ್ ಮ್ಯಾನರ್‌ನಿಂದ ನೇರವಾಗಿ ಎಲ್.ಆರ್.ಡಿ.ಇ. ಜಂಕ್ಷನ್‌ ಕಡೆಗೆ ಚಲಿಸಿ, ಎಲ್.ಆ‌ರ್.ಡಿ.ಇ. ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಬಸವೇಶ್ವರ ಜಂಕ್ಷನ್ ಮುಖಾಂತರ ಸಂಚರಿಸಬೇಕು.

* ಸ್ಯಾಂಕಿ ರಸ್ತೆಯಲ್ಲಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ಬಿ.ಎಂ.ಟಿ.ಸಿ ಬಸ್ಸುಗಳು, ಖಾಸಗಿ ಬಸ್ಸುಗಳು ಹಾಗೂ ಹೆಚ್.ಜಿ.ವಿ. ವಾಹನಗಳು ಒಳಗೊಂಡಂತೆ ಎಲ್ಲಾ ರೀತಿಯ ವಾಹನಗಳು ಕುಮಾರಕೃಪ ರಸ್ತೆಯ ಮುಖಾಂತರ ಶಿವಾನಂದ ಸರ್ಕಲ್ ತಲುಪಿ ಬಲ ತಿರುವು ಪಡೆದು ಎಸ್. ಸಿ. ರಸ್ತೆಯಲ್ಲಿ ಎಡತಿರುವು ಪಡೆದು ಮೆಜೆಸ್ಟಿಕ್ ಕಡೆಗೆ ಸಂಚರಿಸಬಹುದಾಗಿದೆ.

* ಓಲ್ಡ್ ಜೆ.ಡಿಎಸ್ ಜಂಕ್ಷನ್‌ನಿಂದ ಟ್ರಿಲೈಟ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಓಲ್ಡ್ ಜೆ.ಡಿಎಸ್ ಜಂಕ್ಷನ್‌ನಲ್ಲಿ ಎಡಭಾಗದ ರಸ್ತೆಯಲ್ಲಿ ಟ್ರಿಲೈಟ್ ಜಂಕ್ಷನ್ ಕಡೆಗೆ ಮತ್ತು ರೆಸ್‌ವ್ಯೂ ಜಂಕ್ಷನ್‌ನಲ್ಲಿ ಎಡತಿರುವ ಪಡೆದು ಕುಮಾರ ಕೃಪ ರಸ್ತೆಯ ಮೂಲಕ ಶಿವಾನಂದ ಜಂಕ್ಷನ್ ಕಡೆಗೆ ಸಂಚರಿಸುವಂತೆ ಸೂಚಿಸಲಾಗಿದೆ.

* ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಕಡೆಗೆ ಹೋಗುವ ಎಲ್ಲಾ ತರದ ವಾಹನಗಳು ಟ್ರಿಲೈಟ್ ಜಂಕ್ಷನ್‌ನಿಂದ ಶಿವಾನಂದ ಪ್ರೈಓವರ್ ಮೇಲೆ ನೇರವಾಗಿ ಚಲಿಸುವ ಮೂಲಕ ನೆಹರು ಸರ್ಕಲ್‌ನಿಂದ ಎಸ್.ಸಿ. ರಸ್ತೆಯನ್ನು ತಲುಪಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವಂತೆ ಟ್ರಾಫಿಕ್ ಪೊಲೀಸರ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+