Bengaluru Traffic: ಟ್ರಾಫಿಕ್‌ನಲ್ಲಿ ಬೆಂಗಳೂರು ನಂ.1, 10 ಕಿಮೀ ಕ್ರಮಿಸಲು 37 ನಿಮಿಷ! ಈ ಸಮಸ್ಯೆಗೆ ಪರಿಹಾರಗಳೇನು?

ಬೆಂಗಳೂರು: ವಿಶ್ವದಲ್ಲಿ ಐಟಿ ಕೇಂದ್ರ, ಸಿಲಿಕಾನ್ ಸಿಟಿ ಎಂದು ಬಿರುದು ಪಡೆದ ಕರ್ನಾಟಕ ರಾಜಧಾನಿ ಬೆಂಗಳೂರು ಇದೀಗ ಅತ್ಯಧಿಕ ಟ್ರಾಫಿಕ್ ಇರುವ ನಗರಗಳಲ್ಲಿ ಮೊದಲ ಸ್ಥಾನಕ್ಕೇರಿದೆ. ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಜನಸಂಖ್ಯೆಯಿಂದಾಗಿ ದೇಶದ ಇತರ ನಗರಗಳಿಗಿಂತ ಟ್ರಾಫಿಕ್ ಉಲ್ಬಣಿಸಿದೆ. ಇದಕ್ಕೆ ರಾಜ್ಯ ಸರ್ಕಾರ ಪಂಚ ಸೂತ್ರಗಳನ್ನು ಜಾರಿಗೆ ತೆರುವ ಮೂಲಕ ನಿಯಂತ್ರಣಕ್ಕೆ ಮುಂದಾಗಿದೆ. ಅತೀ ಹೆಚ್ಚು ಟ್ರಾಫಿಕ್‌ ಪಟ್ಟಿಯಲ್ಲಿ ಬೇರೆ ಯಾವ ನಗರಗಳು ಇವೆ, ಬೆಂಗಳೂರು ಟ್ರಾಫಿಕ್‌ಗೆ ಪರಿಹಾರಗಳೇನು? ಎಂಬ ಮಾಹಿತಿ ಇಲ್ಲಿದೆ.

ನೆದರ್‍‌ಲ್ಯಾಂಡ್ ಮೂಲದ ನ್ಯಾವಿಗೇಷನ್ ತಂತ್ರಜ್ಞಾನ ಸಂಸ್ಥೆ ಟಾಮ್ ಟಾಮ್ ವಿಶ್ವದ ವಿವಿಧ ನಗರಗಳ ಸಂಚಾರ ಪರಿಸ್ಥಿತಿ ವಿಶ್ಲೇಷಿಸಿ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. 10 ಕಿಲೋ ಮೀಟರ್ ಸಂಚರಿಸಲು ಎಷ್ಟು ಸಮಯ ಬೇಕು ಎಂಬುದರ ಮೇಲೆ ನಗರಗಳ ಸ್ಥಾನ ನಿರ್ಧರಿಸಿದೆ. ಬೆಂಗಳೂರಲ್ಲಿ 10 ಕಿಮೀ ಸಂಚಾರಕ್ಕೆ ಬರೋಬ್ಬರಿ 36.9 ನಿಮಿಷ ಬೇಕು. ಎರಡನೇ ಸ್ಥಾನದಲ್ಲಿರುವ ಕೊಲ್ಕತ್ತದಲ್ಲಿ 10 ಕಿಮೀ ಸಂಚಾರಕ್ಕೆ 35.18 ನಿಮಿಷ ಬೇಕು.

Bengaluru

ಅದೇ ರೀತಿ ನಂತರದ ಸ್ಥಾನದಲ್ಲಿ ಪುಣೆ ಇದ್ದು, ಅಲ್ಲಿ ಇಷ್ಟೇ ಕಿಮೀ ಸಂಚಾರಕ್ಕೆ 33.20 ನಿಮಿಷ, ಹೈದರಾಬಾದ್‌ನಲ್ಲಿ 32.37 ನಿಮಿಷ, ಚೆನ್ನೈ 31.15 ನಿಮಿಷ, ಎರ್ನಾಕುಲಂ 29.51 ನಿಮಿಷ, ಜೈಪುರ 29.16 ನಿಮಿಷ, ಮುಂಬೈನಲ್ಲಿ 28.51 ನಿಮಿಷ ಮತ್ತು ದೆಹಲಿಯಲ್ಲಿ 24ನಿಮಿಷಗಳು ಬೇಕಾಗುತ್ತದೆ. ವಾಯ ಮಾಲಿನ್ಯದಲ್ಲಿ ಮುಂದಿರುವ ದೆಹಲಿ ಟ್ರಾಫಿಕ್‌ನಲ್ಲಿ ಕೊನೆಯ ಹತ್ತನೇ ಸ್ಥಾನದಲ್ಲಿದೆ.

ಬೆಂಗಳೂರಿನ ಪರಿಸ್ಥಿತಿ ಬದಲಾಗಲ್ಲ!

ಬೆಂಗಳೂರಿನಲ್ಲಿ ನಿರಂತರ ಕೈಗಾರಿಕೆಗಳು ಹೂಡಿಕೆ ಮಾಡುತ್ತಲೇ ಇವೆ. ಕೃಷಿ ಭೂಮಿಗಳು ಹೊಸ ಹೊಸ ಯೋಜನೆಗಳ ಪಾಲಾಗುತ್ತಿವೆ. ರಾಜ್ಯ ಸರ್ಕಾರಗಳು ದಶಕದ ಹಿಂದೆ ಬೆಂಗಳೂರಿನಾಚಿಗಿನ ನಗರಗಳಿಗೆ ಆದ್ಯತೆ ಕೊಟ್ಟಿದ್ದರೆ ಇವತ್ತಿಗೆ ಜನಸಂಖ್ಯೆ, ಉದ್ಯೋಗ ವಲಯದಲ್ಲಿ ಪ್ರಾದೇಶಿಕ ಸಮಾನತೆ ಉಂಟಾಗುತ್ತಿತ್ತು. ತಕ್ಕಮಟ್ಟಿನ ಜನರ ಕೇವಲ ಬೆಂಗಳೂರಿಗೆ ಬರುವುದು ಬಿಟ್ಟು ರಾಜ್ಯದ ಬೇರೆ ಬೇರೆ ನಗರಗಳಿಗೂ ವಲಸೆ ಹೋಗುತ್ತಿದ್ದರು. ಅಲ್ಲಿಯು ಬಂಡವಾಳ, ಕೈಗಾರಿಕೆ ಅಭಿವೃದ್ಧಿ, ವಿದೇಶಿ ಕಂಪನಿಗಳು ಬರುತ್ತಿದ್ದವು. ಆದರೆ ಇಂದು ಎಲ್ಲದ್ದಕ್ಕೂ ಬೆಂಗಳೂರು ಒಂದೇ ಎಂಬಂತಾಗಿದೆ. ಇದು ಬೆಂಗಳೂರಿನ ಟ್ರಾಫಿಕ್, ನೀರು, ಮೂಲಸೌಕರ್ಯ ಸಮಸ್ಯೆಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ.

ಟ್ರಾಫಿಕ್‌ನಿಂದ ಉತ್ಪಾದನೆ ಕುಸಿತ, ಇಂಧನ ಬಳಕೆ ಮೇಲೆ ಪ್ರಭಾವ

ಬೆಂಗಳೂರಿನಲ್ಲಿ ಒಂದೂವರೆ ಕೋಟಿಯಷ್ಟು ವಾಹನಗಳಿವೆ. ನಿತ್ಯ ಜನರು ಟ್ರಾಫಿಕ್‌ನಲ್ಲೇ ಸಿಲುಕುವ ಮೂಲಕ ಮನಾಸಿಕ ಯಾತನೆ ಪಡುತ್ತಿದ್ದಾರೆ. ನಿಧಾನಗತಿ ಸಂಚಾರದಿಂದ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಇದು ಆರ್ಥಿಕತೆ, ಜನರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಸಿಗ್ನಲ್ ಜಂಕ್ಷನ್‌ಗಳಲ್ಲಿ ವಾಹನಗಳು ನಿಲ್ಲುವ ಕಾರಣ ಇಂಧನ ಹೆಚ್ಚಾಗಿ ಸುಡುತ್ತದೆ. ಇದು ವಾಹನ ಸವಾರರ ಆರ್ಥಿಕತೆಗೆ ಧಕ್ಕೆ ತರುತ್ತದೆ. ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.

ನಿತ್ಯ 2100 ವಾಹನಗಳು ನೋಂದಣಿ

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಬೈಕ್, ಕಾರು, ಟ್ಯಾಕ್ಸಿ ಸೇರಿದಂತೆ ನಿತ್ಯ ಸುಮಾರು 2100 ವಾಹನಗಳು ಆರ್‍‌ಟಿಒ ಕಚೇರಿಯಲ್ಲಿ ನೋಂದಣಿಯಾಗುತ್ತಿವೆ. 2025-26ರ ಒಂದೇ ವರ್ಷದಲ್ಲಿ 5 ಲಕ್ಷಕ್ಕೂ ಅಧಿಕ ಹೊಸ ವಾಹನಗಳು ರಿಜಿಸ್ಟರ್ ಆಗಿ ರಸ್ತೆಗೆ ಇಳಿದಿವೆ. ನಗರದ ಸಂಚಾರ ಜಾಲ ಸುಮಾರು 14,000 ವ್ಯಾಪ್ತಿ ಇದ್ದು, ಇಷ್ಟು ಜಾಲವು ಸುಮಾರು 1000 ವಾಹನಗಳ ಸಾಂಧ್ರತೆಗೆ ಸಮಾನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸರ್ಕಾರದಿಂದ ಟ್ರಾಫಿಕ್ ಪರಿಹಾರಕ್ಕೆ ಕ್ರಮಗಳು ಜಾರಿ

ಬೆಂಗಳೂರಿಗೆ ಹೊರ ರಾಜ್ಯಗಳಿಂದ ಬರುವ ಸಾಮಾನ್ಯ, ಭಾರೀ ವಾಹನಗಳ ಪ್ರಮಾಣ ಹೆಚ್ಚಾಗಿದೆ. ಪೀಕ್ ಸಮಯ, ಹಗಲು ಹೊತ್ತಿನಲ್ಲಿ ಕೆಲವು ವಾಹನಗಳ ಪ್ರವೇಶ/ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

* ಆಲ್‌ ಇಂಡಿಯಾ ಪರ್ಮಿಟ್ ಇರುವ ಖಾಸಗಿ ಬಸ್‌ಗಳ ಸಂಚಾರಕ್ಕೆ ನಗರದಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ನಿಷೇಧಿಸಲಾಗಿದೆ. ಇದರಿಂದ ತೆಲಂಗಾಣ, ಆಂಧ್ರ, ಕೇರಳ, ತಮಿಳುನಾಡು ಭಾಗದ ಖಾಸಗಿ ವಾಹನಗಳು ನಗರ ಪ್ರವೇಶಕ್ಕೆ ಬ್ರೇಕ್ ಬೀಳಲಿದ್ದು, ಹಗಲು ಸಂಚಾರ ನಿಯಂತ್ರಣಕ್ಕೆ ಬರಬಹುದು.

* ಭಾರೀ ಉದ್ದದ, ಸರಕು ಸೇವಾ ವಾಹನಗಳಿಗೆ ನಗರದಲ್ಲಿ ಹಗಲು ಸಂಚಾರ ನಿರ್ಬಂಧಿಸಲಾಗಿದೆ. ರಾತ್ರಿ ಸಂಚಾರಕ್ಕೆ ಮಾತ್ರವೇ ಅನುಮತಿ ಇದೆ.

* ಎಂಟರಿಂದ ಹದಿನೈದು ಟನ್ ಸಾಮರ್ಥ್ಯದ ವಾಹನಗಳಿಗೆ ಬೆಳಗ್ಗೆ 7ರಿಂದ ರಾತ್ರಿವರೆಗೆ ಸಂಚಾರಕ್ಕೆ ಅನುಮತಿ ನೀಡಲಾಗಿಲ್ಲ.

* ಎಫ್‌ಎಂಸಿಜಿ ಸಣ್ಣ ಸರಕು ವಾಹನಗಳಿಗೆ ಸಂಜೆ ನಗರದಲ್ಲಿ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.

* ಬೇರೆ ಬೇರೆ ಪ್ರಮುಖ ನಗರಗಳಲ್ಲಿರುವಂತೆ ಪ್ರಮುಖ ನಿಯಮಗಳನ್ನು ಅನುಸರಿಸಲಾಗುತ್ತದೆ. ಈ ಸಂಬಂಧ ಸ್ಪಷ್ಟ ರೂಪರೇಷೆಗಳನ್ನು ತಯಾರಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+