ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ದೇಶದ ದೊಡ್ಡ ಚಿನ್ನ ಶುದ್ಧೀಕರಣ ಘಟಕ ಸ್ಥಾಪನೆ

|
Google Oneindia Kannada News

ಬೆಂಗಳೂರು, ಮೇ 03 : ದೇಶದ ಅತಿ ದೊಡ್ಡ ಚಿನ್ನ ಶುದ್ಧೀಕರಣ ಘಟಕ ಕರ್ನಾಟಕದಲ್ಲಿ ಸ್ಥಾಪನೆಯಾಗಲಿದೆ. ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಘಟಕ ನಿರ್ಮಾಣವಾಗುತ್ತಿದೆ.

ಬೆಂಗಳೂರಿನ ವೈಟ್ ಫೀಲ್ಡ್ ಪ್ರದೇಶದಲ್ಲಿ ಚಿನ್ನ ಶುದ್ಧೀಕರಣ ಘಟಕ ನಿರ್ಮಾಣವಾಗುತ್ತಿದೆ. ಚಿನ್ನಾಭರಣ ತಯಾರಿಕಾ ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್‌ ಈ ಘಟಕವನ್ನು ನಿರ್ಮಾಣ ಮಾಡುತ್ತಿದ್ದು, 2019ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಸುಮಾರು 350 ಕೋಟಿ ವೆಚ್ಚದಲ ಘಟಕದಲ್ಲಿ ವಾರ್ಷಿಕ 600 ಟನ್ ಚಿನ್ನ ಶುದ್ಧೀಕರಣ ಮಾಡಲಾಗುತ್ತದೆ. ಇದು ಭಾರತದಲ್ಲಿ ಪ್ರತಿ ವರ್ಷ ಬಳಕೆಯಾಗುವ ಚಿನ್ನದ ಶೇ 75ರಷ್ಟಿದೆ.

Bengaluru to get biggest gold refinery soon

ಭಾರತ ಮತ್ತು ವಿದೇಶದಲ್ಲಿ ರಾಜೇಶ್ ಎಕ್ಸ್‌ಪೋರ್ಟ್ಸ್‌ನ ಚಿನ್ನ ಶುದ್ಧೀಕರಣ ಘಟಕದ ಸಾಮರ್ಥ್ಯ 2,400 ಟನ್‌ಗಳಷ್ಟಿದೆ. ಸಂಸ್ಥೆ ಚಿನ್ನವನ್ನು ಶುದ್ಧೀಕರಿಸಿ ಚಿನ್ನ ವಹಿವಾಟುದಾರರಿಗೆ ಪೂರೈಕೆ ಮಾಡುತ್ತದೆ.

'ಸದ್ಯಕ್ಕೆ ನಾವು ವಿಶ್ವದ ವಿವಿಧ ಭಾಗಗಳಲ್ಲಿ ಇರುವ ಗಣಿಗಳಿಂದ ಚಿನ್ನ ಆಮದು ಮಾಡಿಕೊಂಡು ಶುದ್ಧೀಕರಣಗೊಳಿಸುತ್ತಿದ್ದೇವೆ. ಈ ಘಟಕ ಕಾರ್ಯಾರಂಭ ಮಾಡಿದ ಬಳಿಕ ಚಿನ್ನದ ಶುದ್ಧೀಕರಣ ಮತ್ತು ಬ್ರ್ಯಾಂಡಿಂಗ್ ಶುಲ್ಕದಲ್ಲಿ ಉಳಿತಾಯವಾಗಲಿದೆ' ಎಂದು ರಾಜೇಶ್ ಎಕ್ಸ್‌ಪೋರ್ಟ್ಸ್‌ ಅಧ್ಯಕ್ಷ ರಾಜೇಶ್ ಮೆಹ್ತಾ ಹೇಳಿದ್ದಾರೆ.

ರಾಜೇಶ್ ಎಕ್ಸ್‌ಪೋರ್ಟ್ಸ್‌ ಉತ್ತರಾಖಂಡ್‌ನಲ್ಲಿ ವಾರ್ಷಿಕ 72 ರಿಂದ 80 ಟನ್ ಚಿನ್ನ ಶುದ್ಧೀಕರಿಸುವ ಘಟಕವನ್ನು ಹೊಂದಿದೆ. ಬೆಂಗಳೂರಿನಲ್ಲಿನ ಘಟಕ ಕಾರ್ಯಾರಂಭ ಮಾಡಿದ ಬಳಿಕ ಅಲ್ಲಿನ ಘಟಕವನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ.

English summary
In Bengaluru Whitefield biggest gold refinery to be set up soon. Rajesh Exports will set up plant in the cost of Rs 350 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X