ಸವಾರರಿಗೆ ಗುಡ್‌ನ್ಯೂಸ್: ಬೆಂಗಳೂರಲ್ಲಿ ಮತ್ತೊಂದು ಟೋಲ್ ಮೇಲ್ಸೇತುವೆ! 18.5 ಕಿಮೀ ಕಾರಿಡಾರ್ ಯೋಜನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸದಾ ಕಂಡುಬರುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಸರ್ಕಾರ ಮತ್ತೊಂದು ಶುಲ್ಕ ಸಹಿತ ಬೃಹತ್ ಮೇಲ್ಸೇತೆ ನಿರ್ಮಾಣಕ್ಕೆ ಮುಂದಾಗಿದೆ. ಬೆಂಗಳೂರು ನಗರದ ದಕ್ಷಿಣ ಭಾಗದ ವಾಹನ ಸವಾರರಿಗೆ ಈ ರಸ್ತೆ ಸಂಚಾರ ದಟ್ಟಣೆಯ ಪರಿಹಾರವಾಗಲಿದೆ. ಒಟ್ಟು 18.5 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ ಇದಾಗಿದ್ದು, ನಗರದ ಪ್ರಮುಖ ಭಾಗಗಳಲ್ಲಿ ಸಿದ್ಧಗೊಳ್ಳಲಿದೆ.

ನಗರದ ರಾಗಿಗುಡ್ಡ ಜಂಕ್ಷನ್‌ನಿಂದ ತಲಘಟ್ಟಪುರ ಜಂಕ್ಷನ್ ಮಾರ್ಗವಾಗಿ ಕನಕಪುರ ಮುಖ್ಯ ರಸ್ತೆಯ ನೈಸ್ ಜಂಕ್ಷನ್‌ವರೆಗೆ (18.50 ಕಿಮೀ) ವರೆಗೆ ಈ ಬೃಹತ್ 'ಟೋಲ್ ಶುಲ್ಕದ ಎತ್ತರಿಸಿದ ಕಾರಿಡಾರ್ (ಮೇಲ್ಸೇತುವೆ) ಸ್ಥಾಪನೆಗೆ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟಕ್ಟರ್ ಲಿಮಿಟೆಡ್ (ಬಿ-ಸ್ಮೈಲ್) ಯೋಜನೆ ರೂಪಿಸಿದೆ. ಇದಕ್ಕೆ ರಾಜ್ಯ ಸರ್ಕಾರ ಗುಡುವು ನೀಡಿದ್ದು, ಅಗತ್ಯ ಅನುದಾನ ಸಹ ಒದಗಿಸಲಿದೆ.

Bengaluru Elevated Corridor

₹2,283 ಕೋಟಿ ಯೋಜನೆಗೆ 40% ಸರ್ಕಾರದ ಪಾಲು

ನಾಲ್ಕು ಪಥಗಳ ಪ್ರಸ್ತುತ ಈ ಮೇಲ್ಸೇತುವೆಗೆ ಒಟ್ಟು ಸುಮಾರು 2,283 ಕೋಟಿ ರೂಪಾಯಿ ಅಂದಾಜು ವೆಚ್ಚ ತಗುಲಬಹುದು ಎನ್ನಲಾಗಿದೆ. ಬಿಒಒಟಿ (ನಿರ್ಮಾಣ, ಮಾಲೀಕತ್ವ ನಿರ್ವಹಣೆ ಮತ್ತು ವರ್ಗಾವಣೆ) ಮಾದರಿಯಲ್ಲಿ ನಿರ್ಮಿಸಲು ಬಿ-ಸ್ಮೈಲ್ ಮುಂದಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ನಿರ್ಮಿಸಿದ ಸಂಸ್ಥೆಯೇ ನಿರ್ದಿಷ್ಟ ಅವಧಿವರೆಗೆ ವಾಹನ ಸವಾರರಿಂದ ಟೋಲ್ ಶುಲ್ಕವನ್ನು ಸಂಗ್ರಹಿಸಲಿದೆ. ಸದ್ಯ ಯೋಜನೆಗೆ ಅಂದಾಜಿಸಿದ ಒಟ್ಟು ವೆಚ್ಚದಲ್ಲಿ ಶೇ.40ರಷ್ಟು ಅಂದರೆ 913 ಕೋಟಿ ರೂಪಾಯಿ ವೆಚ್ಚವನ್ನು ರಾಜ್ಯ ಸರ್ಕಾರ ಒದಗಿಸುವುದಾಗಿ ತಿಳಿಸಿದೆ.

ಫ್ಲೈಓವರ್ ನಿರ್ಮಾಣ ಎಲ್ಲಿಂದ ಎಲ್ಲಿಗೆ?

ಮಾರೇನಹಳ್ಳಿಯ ಮುಖ್ಯರಸ್ತೆಯಿಂದ ರಾಗಿಗುಡ್ಡ ಜಂಕ್ಷನ್ ಮೂಲಕ ತಲಘಟ್ಟಪುರ ಜಂ, ಜಲಮಂಡಳಿ ಪೈಪ್‌ಲೈನ್ ರಸ್ತೆ, ಕನಕಪುರ ಮುಖ್ಯ ರಸ್ತೆ ಮಾರ್ಗವಾಗಿ ನೈಸ್ ರಸ್ತೆ ಜಂಕ್ಷನ್‌ ದಾಟಿ ಕೊಂಚ ದೂರದವರೆಗೆ ಈ ಶುಲ್ಕ ಸಹಿತ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ ಎಂದು ಬಿ-ಸ್ಮೈಲ್ ಮಾಹಿತಿ ನೀಡಿದೆ.

ಈ ಮಾರ್ಗದ ವಾಹನ ಸವಾರರಿಗೆ ಹೆಚ್ಚು ಅನುಕೂಲ

ಎಲೆಕ್ಟ್ರಾನಿಕ್ ಸಿಟಿ-ಹೊಸೂರು ಕಡೆಗೆ ಸಂಚಾರ ಮಾಡುವಾಗ ಟೋಲ್ ಶುಲ್ಕ ಕಟ್ಟಿ ಮೇಲ್ಸೇತುಗಳ ಮೇಲೆ ಸಂಚಾರ ಮಾಡಲಾಗುತ್ತಿದೆ. ಅದೇ ರೀತಿ ಈ ಮೇಲ್ಸೇತುವೆ ಮೇಲೆ ನಿಗದಿಯಾಗಲಿರುವ ವಾಹನಗಳು ಸಂಚರಿಸಬಹುದು. ಈ ಯೋಜನೆಯು ಜಯನಗರ, ರಾಗಿಗುಡ್ಡ ಭಾಗದಿಂದ ಬನಶಂಕರಿ ಮೂಲಕ ಕನಕಪುರ ರಸ್ತೆಗೆ ತೆರಳುವ ಔಟರ್‍‌ ರಿಂಗ್ ರಸ್ತೆ ಪ್ರಯಾಣಿಕರಿಗೆ, ವಾಹನಗಳ ಸವಾರರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಅಲ್ಲದೇ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಬಿಟಿಎಂ ಮಾರ್ಗವಾಗಿ ಕನಕಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನೇರವಾಗಿ ಈ ಉದ್ದೇಶಿತ ಮೇಲ್ಸೇತುವೆ ಮೇಲೆ ಏರಬಹುದು. ಮುಂದೆ ನೈಸ್ ರಸ್ತೆವರೆಗೂ ನೀವು ಒಂದೇ ಮಾರ್ಗವಾಗಿ ಸಾಗಲಿದ್ದೀರಿ. ಇದರಿಂದ ನಗರ ಒಳಗೆ ಟ್ರಾಫಿಕ್ ನಿಯಂತ್ರಣವಾಗುವ ಜೊತೆಗೆ ನಗರದಿಂದ ಹೊರ ಹೋಗುವವರಿಗೆ ತ್ವರಿತ ಸಂಚಾರ ಸಾಧ್ಯವಾಗುತ್ತದೆ.

2.5 ವರ್ಷದಲ್ಲಿ ಕಾಮಗಾರಿ ಮುಗಿಸಲು ಗಡುವು

ಈ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಬಿ-ಸ್ಮೈಲ್‌ಗೆ ಒಟ್ಟು 30 ತಿಂಗಳ (2.5 ವರ್ಷ) ಗುಡವು ನೀಡಿದೆ. ಇನ್ನೂ ಈ ಯೊಜನೆಯಲ್ಲಿ ವಸಂತಪುರ, ವಾಜರಹಳ್ಳಿ ಮುಖ್ಯರಸ್ತೆ, ಔಟರ್‌ರಿಂಗ್ ರೋಡ್, ಸಂಗಮ್ ಸರ್ಕಲ್ ಬಳಿ ವಾಹನಗಳು ಕಾರಿಡಾರ್‌ಗೆ ಸೇರಲು ಮತ್ತು ಹೊರ ಬರಲು ರೋಟರಿ ಸರ್ಕಲ್, ರ್‍ಯಾಂಪ್, ಡೌನ್ ರ್‍ಯಾಂಪ್ ನಿರ್ಮಿಸಲಾಗುತ್ತದೆ. ಮೇಲ್ಸೇತುವೆ ಎರಡು ಕಡೆಗೆ ಹತ್ತಲು, ಇಳಿಯಲು ಸಮನಾಂತರವಾಗಿ ಈ ಕಾರಿಡಾರ್ ನಿರ್ಮಿಸಲಾಗುತ್ತದೆ ಎಂದು ಬಿ-ಸ್ಮೈಲ್ ತಿಳಿಸಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+