Salary: ಬೆಂಗಳೂರಿನ ಈ ದಂಪತಿಗೆ ₹7 ಲಕ್ಷ ಸಂಬಳ; ಹೆಚ್ಚಿನ ಹಣ ಉಳಿಯುತ್ತಿರುವುದೇ ಸಮಸ್ಯೆಯಂತೆ!
ಬೆಂಗಳೂರಿಗೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ವಲಸೆ ಬರುತ್ತಾರೆ. ಒಳ್ಳೆ ಕೆಲಸ, ಉತ್ತಮ ಸಂಪಾದನೆಯೇ ವಲಸೆ ಬರುವ ಮೂಲ ಉದ್ದೇಶ, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಿ, ಮನೆ, ಆಸ್ತಿ ಮಾಡುವುದು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದಾಗಿರುತ್ತದೆ.
ಒಂದು ವರ್ಷ ಸಂಬಳ ಹೆಚ್ಚಾಗದೇ ಇದ್ದರೂ, ಕಂಪನಿ ಬದಲಾಯಿಸಲು ಕೂಡ ಉದ್ಯೋಗಿಗಳು ಚಿಂತಿಸುತ್ತಾರೆ. ಆದರೆ ಬೆಂಗಳೂರಿನ ಈ ದಂಪತಿಗೆ ಸಂಬಳ ಹೆಚ್ಚಿಗೆ ಬರುತ್ತಿರುವುದೇ ಸಮಸ್ಯೆಯಂತೆ!

ಹೌದು, ವಿಚಿತ್ರವಾದರೂ ಸತ್ಯ, ತಮಗೆ ಸಂಬಳ ಹೆಚ್ಚಾಗಿದ್ದು, ಹಣವನ್ನು ಏನು ಮಾಡಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ ಎನ್ನುವ ಪೋಸ್ಟ್ ಒಂದು ವೈರಲ್ ಆಗಿದ್ದು, ಜನ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
This is awesome 💪
— Saumil Heard It (@OnTheGrapevine) June 15, 2024
Once upon a time it was only Indian Businessmen who would run into problems of excess
But today we’re seeing even some regular 30 year olds in the service class facing proper rich people problems :)
193 comments: https://t.co/AZM1tXEknH pic.twitter.com/NbrpNTvYkm
ಪೋಸ್ಟ್‌ನಲ್ಲಿ ಏನಿದೆ?
ಸಾಮಾಜಿಕ ಮಾಧ್ಯಮ ಗ್ರೇಪ್‌ವೈನ್ ಆಪ್‌ನಲ್ಲಿ ಈ ಸಂದೇಶ ಹಂಚಿಕೊಂಡಿದ್ದಾರೆ. ಭಾರತೀಯ ಉದ್ಯೋಗಿ ವೃತ್ತಿಪರರಿಗೆ ಸಂಬಳ, ಕೆಲಸದ ಸ್ಥಳಗಳು ಮತ್ತು ಹಣಕಾಸು ಕುರಿತು ಚರ್ಚಿಸಲು ಗ್ರೇಪ್‌ವೈನ್ ಒಂದು ವೇದಿಕೆಯಾಗಿದೆ.
ತಾನು ಮತ್ತು ಪತ್ನಿ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದೇವೆ ಎಂದು ವ್ಯಕ್ತಿ ಹೇಳಿದ್ದಾರೆ. ಮಕ್ಕಳಿಲ್ಲದ ಎರಡು ಆದಾಯದ ಕುಟುಂಬವಾಗಿ, ಅವರು ಪ್ರತಿ ತಿಂಗಳು ತಮ್ಮ ಸಂಬಳದ ಭಾರೀ ಭಾಗವನ್ನು ಉಳಿಸುತ್ತಾರೆ. ಜೀವನವೆಚ್ಚ, ಕಾರು ನಿರ್ವಹಣೆ ಮತ್ತಿತರ ಲೆಕ್ಕ ಕೊಟ್ಟರೂ ಅವರ ಬ್ಯಾಂಕ್ ಖಾತೆಗಳಲ್ಲಿ ಪ್ರತಿ ತಿಂಗಳು ₹3 ಲಕ್ಷಕ್ಕೂ ಅಧಿಕ ಹಣ ಉಳಿಯುತ್ತಿರುವುದು ಸಮಸ್ಯೆಯಾಗಿದೆ.
ಹೆಚ್ಚಾಗಿ ಉಳಿಯುತ್ತಿರುವ ಹಣವನ್ನು ಖರ್ಚು ಮಾಡಲು ಸಲಹೆಗಳನ್ನು ಕೇಳಿದ್ದಾರೆ, ಅಲ್ಲಿ ಅನೇಕರು ತಮಾಷೆಯಾಗಿ ದಂಪತಿಗಳನ್ನು ದತ್ತು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ.
"ತೆರಿಗೆಯಲ್ಲಾ ಹೋದ ಬಳಿಕ ತಿಂಗಳಿಕೆ 7 ಲಕ್ಷ ರೂಪಾಯಿ ಆದಾಯ ಬರುತ್ತದೆ. ನಮಗೆ ಮಕ್ಕಳಿಲ್ಲ, ಆದರೆ ಎಲ್ಲಾ ಹಣವನ್ನು ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ" ಎಂದು ಬರೆದುಕೊಂಡಿದ್ದಾರೆ.
ಅವರು ಮತ್ತು ಅವರ ಪತ್ನಿ ಒಟ್ಟಾಗಿ ತಿಂಗಳಿಗೆ ₹ 7 ಲಕ್ಷ ಮತ್ತು ವಾರ್ಷಿಕ ಬೋನಸ್ ಗಳಿಸುತ್ತಾರೆ ಎಂದು ಅವರು ವಿವರಿಸಿದರು. ಇದರಲ್ಲಿ ₹2 ಲಕ್ಷವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಅವರ ಜೀವನ ವೆಚ್ಚವು ತಿಂಗಳಿಗೆ ಸುಮಾರು ₹1.5 ಲಕ್ಷ ಆಗಿದೆ. ಖರ್ಚು ಮಾಡಲು ಅವರು ಹೆಚ್ಚಾಗಿ ಯೋಚನೆ ಕೂಡ ಮಾಡುವುದಿಲ್ಲವಂತೆ.
ಇಷ್ಟೆಲ್ಲ ಆದ ನಂತರವೂ ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹3 ಲಕ್ಷ ಉಳಿಯುತ್ತದೆ. ಸಾಫ್ಟ್‌ವೇರ್ ಇಂಜಿನಿಯರ್ ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ಸಲಹೆಗಳನ್ನು ಕೇಳಿದ್ದಾರೆ.
ಅವರ ಪೋಸ್ಟ್‌ಗೆ ಅನೇಕರು ವಿವಿಧ ರೀತಿ ಕಮೆಂಟ್ ಮಾಡಿದ್ದಾರೆ, ನನಗೆ ಸ್ವಲ್ಪ ಕೊಡು. ನನಗೆ ಸಾಕಷ್ಟು ಸಂಬಳ ಸಿಗುತ್ತಿಲ್ಲ ಎಂದು ಒಬ್ಬರು ಮನವಿ ಮಾಡಿದ್ದಾರೆ.
"ನೀವು ನನ್ನನ್ನು ಏಕೆ ದತ್ತು ತೆಗೆದುಕೊಳ್ಳಬಾರದು?" ಮತ್ತೊಬ್ಬರು ಕೇಳಿದರು. "ಯಶಸ್ಸಿನಿಂದ ಬಳಲುತ್ತಿದ್ದಾರೆ," ಮೂರನೆಯವರು ತಮಾಷೆ ಮಾಡಿದರು.
ಕೆಲವು ಜನರು ಹೆಚ್ಚು ಹೂಡಿಕೆ ಮಾಡಲು ಅಥವಾ ದತ್ತಿ ನೀಡಲು ದಂಪತಿಗಳಿಗೆ ಸಲಹೆ ನೀಡಿದ್ದಾರೆ. ಹಲವಾರು ಜನರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದರು, ಕನಿಷ್ಠ ಒಬ್ಬ ವ್ಯಕ್ತಿ ದಂಪತಿಗೆ ಮನೆ ಖರೀದಿಸಲು ಮತ್ತು ಎರಡನೇ ಆದಾಯದ ಮೂಲವನ್ನು ಸೃಷ್ಟಿಸಲು ಸಲಹೆ ಕೊಟ್ಟಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gas Bill: ಗ್ಯಾಸ್ ಬಿಲ್ ಹೆಸರಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಲೂಟಿ ಮಾಡಿದ ಸೈಬರ್ ವಂಚಕರು -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು











Click it and Unblock the Notifications