ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಬಗ್ಗೆ ಮಹತ್ವದ ಸುದ್ದಿ!
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ಉಪ ಚುನಾವಣೆ 2024ರ ಸಂಬಂಧ ತಯಾರಿ ಭರ್ಜರಿಯಾಗಿ ಸಾಗಿದೆ. ಇನ್ನೇನು ಮುಂದಿನ ತಿಂಗಳೇ ಎಲೆಕ್ಷನ್ ನಡೆಯಲಿದೆ. ಇದೇ ಸಮಯದಲ್ಲಿ ನಾಮಪತ್ರ ಸಲ್ಲಿಕೆ ಕುರಿತು ಇದೀಗ ಮಹತ್ವದ ಮಾಹಿತಿ ಹೊರಬಿದ್ದಿದೆ. ಹಾಗಾದರೆ ನಾಮಪತ್ರ ಸಲ್ಲಿಸಲು ಏನು ಮಾಡಬೇಕು? ಮುಂದೆ ಓದಿ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಒಬ್ಬ ಸದಸ್ಯರ ಚುನಾಯಿಸುವ ಸಂಬಂಧ ಫೆಬ್ರವರಿ 16 ಕ್ಕೆ ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರಗಳ ಉಮೇದುದಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಇವರಿಗೆ ಜನವರಿ 30ರ ಒಳಗೆ ಸಲ್ಲಿಸಬಹುದಾಗಿದೆ, ಎಂದು ಮಾಹಿತಿ ನೀಡಲಾಗಿದೆ. ಹಾಗಾದರೆ ಈಗ ನಾಮಪತ್ರ ಸಲ್ಲಿಸಬೇಕಾದ ವಿಳಾಸ ಯಾವುದು? ಮುಂದೆ ಓದಿ.

ನಾಮಪತ್ರ ಸಲ್ಲಿಕೆ ವಿಳಾಸ ಇದು!
ಇನ್ನು ನಾಮಪತ್ರ ನಮೂನೆಗಳನ್ನು ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಬೆಂಗಳೂರು ವಿಭಾಗ, 2ನೇ ಮಹಡಿ, ಬಿ.ಎಂ.ಟಿ.ಸಿ ಕಟ್ಟಡ, ಕೆ.ಎಚ್.ರಸ್ತೆ, ಶಾಂತಿನಗರ, ಬೆಂಗಳೂರು 27 ಇಲ್ಲಿ ಬೆ. 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗು ಸಲ್ಲಿಸಬಹುದು ಎನ್ನಲಾಗಿದೆ. ಇನ್ನು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ನಾಮಪತ್ರ ಸಲ್ಲಿಸಬಹುದು. ಇನ್ನೊಂದು ಕಡೆ ನಾಮಪತ್ರಗಳ ಪರಿಶೀಲನೆಯನ್ನ ಪ್ರಾದೇಶಿಕ ಆಯುಕ್ತರ ಕಚೇರಿಗೆ, ಬೆಂಗಳೂರು ವಿಭಾಗ 2ನೇ ಮಹಡಿ, ಬಿ.ಎಂ.ಟಿ.ಸಿ. ಕಟ್ಟಡ, ಕೆ.ಎಚ್.ರಸ್ತೆ, ಶಾಂತಿನಗರ ಬೆಂಗಳೂರು-560027 ಇಲ್ಲಿ ಜನವರಿ 31ರ ಬುಧವಾರ ಬೆಳಗ್ಗೆ 11 ಗಂಟೆಗೆ ನಡೆಸಲಾಗುತ್ತದೆ.
ಹಾಗೇ ಉಮೇದುವಾರಿಕೆ ಹಿಂಪಡೆಯಲು ಫೆಬ್ರವರಿ 2 ರಂದು ಮಧ್ಯಾಹ್ನ 3 ಗಂಟೆಗು ಮುಂಚೆ ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 16 ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಉಪ ಚುನಾವಣೆಯ ಮತದಾನ ನಡೆಯಲಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿ
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆಗೆ ನಿಗದಿಯಾದ ದಿನಾಂಕ ಪ್ರಕಾರ 16-02-2024 ಕ್ಕೆ ಮತದಾನ ನಡೆಯಲಿದೆ. ಹಾಗೇ ದಿನಾಂಕ 20-02-2024 ರಂದು ಮತ ಎಣಿಕೆ ನಡೆಯಲಿದೆ. 16.02.2024 ರಂದು ಮತದಾನ ನಡೆಸಿದರೆ ಕೆಲ ದಿನದಲ್ಲಿ ಫಲಿತಾಂಶ ಕೂಡ ಹೊರಬೀಳಲಿದೆ. ಹಾಗೇ ಚುನಾವಣೆಯ ಹಿನ್ನೆಲೆ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರಿಗೆ ಬಲಗೈನ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿ ಹಚ್ಚುವ ಬಗ್ಗೆ ತಿಳಿಸಲಾಗಿದೆ.

ಮಾದರಿ ನೀತಿ ಸಂಹಿತೆ ಜಾರಿ
ದಿ. 16.01.2024ರಿಂದ 23.02.2024 ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಾದ, 150 ಯಲಹಂಕ & 152 ಬ್ಯಾಟರಾಯನಪುರ, 153 ಯಶವಂತಪುರ, 155 ದಾಸರಹಳ್ಳಿ, 174 ಮಹದೇವಪುರ ಮತ್ತೆ 176 ಬೆಂಗಳೂರು ದಕ್ಷಿಣ ಸೇರಿದಂತೆ, 177 ಆನೇಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕರ ದೂರು ಮತ್ತು ಕುಂದು ಕೊರತೆಗಳ ನಿವಾರಣೆಗಾಗಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24/7 ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ/ದೂರು ನಿವಾರಣಾ ಕೇಂದ್ರ ಸ್ಥಾಪಿಸಲಾಗಿದೆ.












Click it and Unblock the Notifications