ಬೆಂಗಳೂರು ಉಪನಗರ ರೈಲ್ವೆ ಯೋಜನೆ: ಎರಡನೇ ಹಂತ 146 ಕಿ.ಮೀ ವ್ಯಾಪ್ತಿಗೆ, ಈ ಭಾಗದ ಜನರಿಗೆ ಅನುಕೂಲ!
ಬೆಂಗಳೂರು ಉಪನಗರ ರೈಲ್ವೆ ಯೋಜನೆಯ (ಬಿಎಸ್‌ಆರ್‌ಪಿ)ಲ್ಲಿ ಮಹತ್ವದ ಬೆಳಗಣಿಗೆಯಾಗಿದೆ. ಇದೀಗ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಎರಡನೇ ಹಂತದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು. ಈ ಯೋಜನೆಯ ಎರಡನೇ ಹಂತವನ್ನು 146 ಕಿ.ಮೀ ವ್ಯಾಪ್ತಿಗೆ ವಿಸ್ತರಿಸುತ್ತಿದೆ. ಇದು ಬೆಂಗಳೂರು ವೃತ್ತಾಕಾರದ ರೈಲು ಜಾಲದ ಯೋಜನೆ ಈಗಾಗಲೇ ಪ್ರಗತಿಯಲ್ಲಿದೆ. ಈ ಯೋಜನೆಯನ್ನು 146 ಕಿ.ಮೀ. ವ್ಯಾಪ್ತಿಗೆ ವಿಸ್ತರಿಸುವ ಪ್ರಸ್ತಾವಿತ ಯೋಜನೆಯನ್ನು ರೂಪಿಸಲಾಗಿದೆ. ಬೆಂಗಳೂರು ಉಪ ನಗರ ರೈಲು ಯೋಜನೆ ದಶಕಗಳ ಕನಸಾಗಿದೆ. ಬೆಂಗಳೂರಿಗೆ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿರುವ ಸಾವಿರಾರು ಜನ ಬೆಂಗಳೂರಿಗೆ ಕೆಲಸ ಸೇರಿದಂತೆ ವಿವಿಧ ಕಾರಣಗಳಿಗೆ ಬರುತ್ತಾರೆ. ಉಪ ನಗರ ರೈಲು ಯೋಜನೆ ಹಲವು ಕಾರಣಕ್ಕೆ ಮಹತ್ವವನ್ನು ಪಡೆದುಕೊಂಡಿದೆ.
ಇದೀಗ ಉದ್ದೇಶಿತ ಯೋಜನೆಯಲ್ಲಿ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ (18 ಕಿ.ಮೀ), ಚಿಕ್ಕಬಾಣಾವರದಿಂದ ಕುಣಿಗಲ್ (50 ಕಿ.ಮೀ), ಚಿಕ್ಕಬಾಣಾವರದಿಂದ ದಾಬಸ್ ಪೇಟೆ (36 ಕಿ.ಮೀ), ಕೆಂಗೇರಿಯಿಂದ ಹೆಜ್ಜಾಲ (11 ಕಿ.ಮೀ), ಹೀಲಲಿಗೆಯಿಂದ ಆನೇಕಲ್ ರಸ್ತೆ (11 ಕಿ.ಮೀ) ಹಾಗೂ ರಾಜನುಕುಂಟೆಯಿಂದ ಒಡೇರಹಳ್ಳಿ (20 ಕಿ.ಮೀ) ವ್ಯಾಪ್ತಿಗೆ ಸೇರಿವೆ.

2024 ರ ಕೊನೆಯಲ್ಲಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಮತ್ತು ರೈಲ್ವೆ ಮತ್ತು ಕೆ-ರೈಡ್‌ನ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಉಪನಗರ ರೈಲು ವಿಸ್ತರಣೆಯನ್ನು ಸೀಮಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ತರುವಾಯ, ಕೆ-ರೈಡ್, ಪ್ರಸ್ತಾವಿತ ವೃತ್ತಾಕಾರದ ರೈಲು ಜಾಲದೊಂದಿಗೆ ಉಪನಗರ ರೈಲು ವಿಸ್ತರಣೆಯನ್ನು ಸಂಯೋಜಿಸುವ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಕೇಂದ್ರ ರೈಲ್ವೆ ಸಚಿವಾಲಯದಿಂದ ಅನುಮೋದನೆಯನ್ನು ಕೋರಿತು.
ಮಹತ್ವದ ಯೋಜನೆಗೆ ಕಡಿವಾಣ: ಉದ್ದೇಶಿತ ಯೋಜನೆಯನ್ನು 452 ಕಿ.ಮೀ ಉಪ ನಗರ ರೈಲು ವ್ಯಾಪ್ತಿಗೆ ವಿಸ್ತರಿಸಬೇಕು ಎನ್ನುವ ಪ್ರಸ್ತಾವನೆ ಇತ್ತು. ಆದರೆ, ಈ ಪ್ರಸ್ತಾವಿತ ಯೋಜನೆಯನ್ನು ನೈರುತ್ಯ ರೈಲ್ವೆ ಪ್ರಾರಂಭದಲ್ಲೇ ತಿರಸ್ಕರಿಸಿತ್ತು. ಮೊದಲು ಇದನ್ನು ಬೆಂಗಳೂರು ಹಾಗೂ ದೇವನಹಳ್ಳಿ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮೈಸೂರು ಹಾಗೂ ಹೊಸೂರು ಸೇರಿದಂತೆ ವಿವಿಧ ಭಾಗಗಳೊಂದಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೆ-ರೈಡ್ ಹೆಚ್ಚು ವಿಸ್ತಾರವಾದ 452 ಕಿ.ಮೀ ಉಪನಗರ ರೈಲು ಜಾಲ ಯೋಜನೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಇದಕ್ಕೆ ಅನುಮೋದನೆ ಸಿಕ್ಕಿಲ್ಲ.
ಬೆಂಗಳೂರು ಸಂಚಾರ ದಟ್ಟಣೆ ಕಡಿವಾಣಕ್ಕೆ ಸಹಕಾರಿ: ಇನ್ನು ಈ ಯೋಜನೆಯಿಂದ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರಿಗೆ ಸುತ್ತಮುತ್ತಲಿನ ಜಿಲ್ಲೆಗಳಿಂದ ನಿತ್ಯವೂ ಸಾವಿರಾರು ಜನ ಬರುತ್ತಾರೆ. ಈ ರೀತಿ ಬೆಂಗಳೂರಿಗೆ ಬರುವವರು ರೈಲು ಸೇವೆಯನ್ನು ಬಳಸುವುದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇಳಿಕೆಯಾಗಲಿದೆ. ಇದು ಮಾತ್ರವಲ್ಲ ಈ ರೀತಿ ಬರುವ ಪ್ರಯಾಣಿಕರು ಆರಾಮಾಗಿ ರೈಲುಗಳ ಮೂಲಕ ಬೆಂಗಳೂರಿಗೆ ಬರುವುದಕ್ಕೆ ಅನುಕೂಲವಾಗಲಿದೆ.
ಸಂಚಾರ ಸಮಸ್ಯೆ ಇರುವುದರಿಂದ ಸುತ್ತಮುತ್ತಲಿನ ಜನ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ನೆಲೆಸಿರುವುದು ಸಹ ಇದೆ. ಇದೀಗ ಉದ್ದೇಶಿತ ಯೋಜನೆ ಅಭಿವೃದ್ಧಿ ಆಗುವುದರಿಂದ ಸುತ್ತಮುತ್ತಲಿನ ಹಳ್ಳಿಗಳಿಂದಲೇ ಅವರು ನಿತ್ಯ ಬೆಂಗಳೂರಿಗೆ ಬರುವುದಕ್ಕೂ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications