ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಪ್ರಿಂಟೆಡ್ ಅಂಚೆ ಕಚೇರಿ : ಶುಕ್ರವಾರ ಉದ್ಘಾಟನೆ

ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ ಸೇವೆಗೆ ಸಿದ್ಧವಾಗಿದೆ. ಶುಕ್ರವಾರ ಕೇಂದ್ರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ರಿಮೋಟ್ ಮೂಲಕ ಹಲಸೂರು ಬಜಾರ್ ನಲ್ಲಿರುವ ಅಂಚೇ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಮಾರ್ಚ್ 21ರಂದು ಅಂಚೆ ಕಚೇರಿ ನಿರ್ಮಾಣ ಕೆಲಸ ಶುರುವಾಗಿತ್ತು. ಕೇವಲ 44 ದಿನಗಳಲ್ಲಿ ಈ ಅಂಚೆಕಚೇರಿಯನ್ನು ನಿರ್ಮಿಸಲಾಗಿದೆ.

ಉದ್ಘಾಟನೆಯಾದ ಬಳಿಕ ಅಶ್ವಿನ್ ವೈಷ್ಣವ್ ಬೆಂಗಳೂರಿಗೆ ಭೇಟಿ ನೀಡಲಿದ್ದು, ವಿಶಿಷ್ಠವಾಗಿ ರಚನೆಯಾಗಿರುವ ಅಂಚೆಕಚೇರಿಯನ್ನು ವೀಕ್ಷಿಸಲಿದ್ದಾರೆ, 'ಕೇಂಬ್ರಿಡ್ಜ್ ಲೇಔಟ್ ಅಂಚೆ ಕಚೇರಿ' ಎಂದು ಹೆಸರಿಸಲಾಗಿದೆ.

host-indias-maiden-3d-printed-post-office

ಕಟ್ಟಡದ ರಚನೆಯು ಮೇ 3 ರೊಳಗೆ ಪೂರ್ಣಗೊಂಡಿದ್ದರೂ, ಒಳಚರಂಡಿ ಮತ್ತು ನೀರಿನ ಜಾಲವನ್ನು ನಿರ್ಮಿಸಲು ಎರಡು ತಿಂಗಳು ಸಮಯ ತೆಗೆದುಕೊಂಡಿತು. ಕಟ್ಟಡ ಉದ್ಘಾಟನೆಗೆ ಸಚಿವರ ಲಭ್ಯತೆಗೆ ಇನ್ನೂ ಒಂದು ತಿಂಗಳು ಕಾಯಲಾಗಿದೆ. ಹೊಸ ಅಂಚೆ ಕಚೇರಿ ಉದ್ಘಾಟನೆಯಾದ ಬಳಿಕ ಹಲಸೂರು ಬಜಾರ್‌ನಲ್ಲಿರುವ ಪ್ರಸ್ತುತ ಅಂಚೆ ಕಚೇರಿಯನ್ನು ಮುಚ್ಚಲಾಗುವುದು ಮತ್ತು ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

66 ಲಕ್ಷ ರೂಪಾಯಿ ವೆಚ್ಚ

"ಎಲ್ & ಟಿ ಈ ಕಟ್ಟಡವು ನಿರ್ಮಾಣ ಮಾಡಿದೆ. 1,100 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡ ತಲೆ ಎತ್ತಿದೆ. 3ಡಿ ಕಾಂಕ್ರೀಟ್ ಮುದ್ರಣಕ್ಕಾಗಿ ತೆರಿಗೆ ಸೇರಿ ಸುಮಾರು 26 ಲಕ್ಷ ರೂಪಾಯಿ ವ್ಯಯಿಸಲಾಗಿದೆ. ಪವರ್, ಡ್ರೈನೇಜ್ ಸಂಪರ್ಕ ಮತ್ತು ನೀರಿನ ಸಂಪರ್ಕದಂತಹ ಇತರ ವೆಚ್ಚಗಳನ್ನು ಅಂಚೆ ಇಲಾಖೆಯ ಸಿವಿಲ್ ವಿಂಗ್ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಡಿದೆ," ಎಂದು ಮೂಲಗಳು ತಿಳಿಸಿವೆ.

ವಿನ್ಯಾಸದ ಪ್ರಕಾರ ಕಟ್ಟಡವನ್ನು ಸೈಟ್‌ನಲ್ಲಿ ಮುದ್ರಿಸಲಾಗಿದೆ. "ಇದು ಬಹುಶಃ ಈ ಪ್ರಕ್ರಿಯೆಯಿಂದ ನಿರ್ಮಿಸಲಾದ ಮೊದಲ ಸಾರ್ವಜನಿಕ ಕಟ್ಟಡವಾಗಿದೆ" ಎಂದು ಪೋಸ್ಟ್ ಆಫೀಸ್ ಅಧಿಕಾರಿಗಳು ಹೇಳಿದ್ದಾರೆ.

ಇತರ 3ಡಿ-ಮುದ್ರಿತ ಕಟ್ಟಡಗಳನ್ನು ಬೇರೆಡೆ ಮುದ್ರಣ ಮಾಡಿ ನಂತರ ಸೈಟ್‌ಗಳಲ್ಲಿ ತಂದು ಜೋಡಿಸಲಾಗುತ್ತದೆ. ಆದರೆ ಇದನ್ನು ಸೈಟ್‌ನಲ್ಲೇ ಮುದ್ರಣ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಬೆಂಗಳೂರು, ಈಗ 3-ಡಿ ಕಟ್ಟಡ ಅಂಚೆ ಕಚೇರಿ ಹೊಂದಿದ ನಗರಗಳಲ್ಲಿ ಮೊದಲನೆಯದಾಗಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಟ್ಟಿದ ಕಟ್ಟಡ ಹೇಗಿರುತ್ತದೆ ಎನ್ನುವ ಕುತೂಹಲ ಇದ್ದರೆ ನೀವೂ ಒಮ್ಮೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+