ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವಿಗಾಗಿ ಬಿಗ್ ಫೈಟ್!
2024ರ ಲೋಕಸಭಾ ಚುನಾವಣೆಗಾಗಿ ರಣಕಹಳೆ ಮೊಳಗಿದ್ದು, ಇನ್ನೇನು ಕೆಲವೇ ದಿನದಲ್ಲಿ ಗೆಲುವಿನ ಗುಟ್ಟು ಬಯಲಾಗಲಿದೆ. ಅದರಲ್ಲೂ ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಈ ಬಾರಿ ದೇಶಿಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಭಾಗದಲ್ಲಿ ಯಾರ ಹವಾ ಹೇಗಿದೆ? ಬನ್ನಿ ತಿಳಿಯೋಣ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರವಾಗಿಯೇ ಹಣಾಹಣಿ ನಡೆಸುತ್ತಿವೆ. ಹೀಗಿದ್ದಾಗ ಗೆಲುವಿಗಾಗಿ, ದೊಡ್ಡ ತಿಕ್ಕಾಟವೇ ಶುರುವಾಗಿದೆ. ಅತ್ತ ಒಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಸತತ 4ನೇ ಗೆಲುವಿನ ನಿರೀಕ್ಷೆಯ ಇಟ್ಟುಕೊಂಡಿದ್ದರೆ, ಮತ್ತೊಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಹಾಗಾದ್ರೆ ಈಗ ಸ್ಥಳೀಯ ಮಟ್ಟದಲ್ಲಿ ಯಾರ ಹವಾ ಹೇಗಿದೆ? ಗೆಲುವು ಯಾರಿಗೆ ಸಿಗಬಹುದು? ಮುಂದೆ ಓದಿ.

ಬೆಂಗಳೂರು ಗ್ರಾಮಾಂತರ ಗೆಲುವು ಯಾರಿಗೆ?
ಇಡೀ ದೇಶದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಜಯದೇವ ಆಸ್ಪತ್ರೆ ಮಾಜಿ ಮುಖ್ಯಸ್ಥ ಡಾ.ಮಂಜುನಾಥ್ ಅವ್ರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ವಿರುದ್ಧ ಸ್ಪರ್ಧೆ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಹೀಗೆಯೇ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಸಹ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಇದೀಗ ಇರುವ ಹೀಟ್ ಪ್ರಕಾರ ಗೆಲುವು ಯಾರಿಗೆ ಸಿಗಬಹುದು?
4ನೇ ಬಾರಿಗೆ ಡಿ.ಕೆ. ಸುರೇಶ್ ಆಯ್ಕೆ?
ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಗೆಲುವಿನ ರೇಸ್‌ನಲ್ಲಿ ಡಿ.ಕೆ. ಸುರೇಶ್ ಅವರೇ ಮುಂದಿದ್ದು ಸತತ 4ನೇ ಬಾರಿಗೆ ಗೆದ್ದು ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಆದರೂ ಬಿಜೆಪಿ & ಜೆಡಿಎಸ್ ನಾಯಕರು ಡಾ. ಮಂಜುನಾಥ್ ಗೆಲುವಿಗಾಗಿ ಸತತ ಪ್ರಯತ್ನ ನಡೆಸುತ್ತಿದ್ದು, ಈ ಮೂಲಕ ಫೈಟಿಂಗ್ ಬಲು ಜೋರಾಗಿದ್ದು. ಮತದಾರರ ಅಂತರಾಳ ಅರಿಯಲು & ಯಾರಿಗೆ ಚುನಾವಣೆ ಗೆಲುವು ಸಿಗಲಿದೆ ಅಂತಾ ತಿಳಿಯಲು ಚುನಾವಣಾ ಫಲಿತಾಂಶದ ತನಕವು ಕಾದು ನೋಡಬೇಕಿದೆ.












Click it and Unblock the Notifications