ಬೆಂಗಳೂರಿನಲ್ಲಿ ದಾಖಲಾಯಿತು ಆಘಾತಕಾರಿ ಕೊವಿಡ್19 ಪ್ರಕರಣ

ಬೆಂಗಳೂರು, ಸೆ. 6: ಕೊರೊನಾವೈರಸ್ ಸೋಂಕಿನ ಅಲೆ ಮೇಲಕ್ಕೇರಿ ಕೆಳಗಿಳಿಯುತ್ತದೆ, ಸೆಪ್ಟೆಂಬರ್ ವೇಳೆಗೆ ಪ್ರಕರಣಗಳು ಇಳಿಮುಖವಾಗುತ್ತವೆ ಎಂಬ ವರದಿ ಬೆನ್ನಲ್ಲೇ ಆಘಾತಕಾರಿ ಘಟನೆ ನಡೆದಿದೆ. ಸೋಂಕಿನಿಂದ ಗುಣಮುಖರಾಗಿದ್ದ ಮಹಿಳೆಯೊಬ್ಬರಿಗೆ ಮತ್ತೆ ಸೋಂಕು ಕಾಣಿಸಿಕೊಂಡಿದೆ.

Recommended Video

      IPL 2020 ವೇಳಾಪಟ್ಟಿ ಬಿಡುಗಡೆ ಮಾಡಿದ BCCI | Oneindia Kannada

      ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಪುನಃ ಸೋಂಕು ಕಾಣಿಸಿಕೊಂಡ ಪ್ರಕರಣ ಎದುರಿಸುವಂತಾಗಿದೆ. ಒಂದೆಡೆ ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕೊವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿವೆ. ಇನ್ನೊಂದೆಡೆ ಮರುಸೋಂಕು ಪ್ರಕರಣಗಳು ಈ ರೀತಿ ಕಾಣಿಸಿಕೊಂಡರೆ ಏನು ಮಾಡುವುದು ಎಂಬ ಆತಂಕ ಎದುರಾಗಿದೆ.

      ನಗರದ 27 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಕಳೆದ ಜುಲೈ ತಿಂಗಳಿನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕ್ವಾರಂಟೈನ್, ಐಸೋಲೇಷನ್ ನಲ್ಲಿದ್ದು, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದ ಪರಿಣಾಮ ಸೋಂಕಿನಿಂದ ಮುಕ್ತರಾಗಿದ್ದರು. ಸಂಪೂರ್ಣವಾಗಿ ಕೊವಿಡ್ 19 ನೆಗಟಿವ್ ಎಂದು ವರದಿ ಬಂದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

      Bengaluru registers first #COVID19 reinfection Case

      ಆದರೆ, ಇದಾದ ಕೇವಲ ಒಂದು ತಿಂಗಳಿನಲ್ಲೇ ಮತ್ತೆ ಕೊವಿಡ್ 19 ರೋಗ ಲಕ್ಷಣಗಳು ಕಾಣಿಸಿಕೊಳ್ಳತೊಡಗಿವೆ. ಇದರಿಂದ ಗಾಬರಿಗೊಂಡ ಮಹಿಳೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

      ಇದೀಗ ಸೋಂಕಿನಿಂದ ಗುಣಮುಖರಾದವರಿಗೂ ಮತ್ತೆ ಸೋಂಕು ಕಾಣಿಸಿಕೊಳ್ಳಲಿದೆ ಎಂಬುದು ಈ ಪ್ರಕರಣದಿಂದ ದೃಢಪಟ್ಟಿದೆ. ಇದು ಮೊದಲ ಅಧಿಕೃತ ಕೇಸ್ ಎಂದು ಫೋರ್ಟಿಸ್ ಆಸ್ಪತ್ರೆ ವರದಿ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+