ರಾಜಕಾಲುವೆ ಒತ್ತುವರಿಗೆ ಬಿಗ್ ಶಾಕ್; ₹6 ಕೋಟಿ ಮೌಲ್ಯದ 6 ಗುಂಟೆ ಜಾಗ ತೆರವು
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬೊಮ್ಮನಹಳ್ಳಿ ವಲಯ-2ರ ಹೆಚ್.ಎಸ್.ಆರ್ ವಿಭಾಗ, ಕುಡ್ಲು ಉಪವಿಭಾಗ ವ್ಯಾಪ್ತಿಯ ಹರಳೂರು ಗ್ರಾಮದ ಸರ್ವೆ ನಂ. 2/1ರಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 6 ಗುಂಟೆ (ಅಂದಾಜು 6,534 ಚದರ ಅಡಿ) ಬಿ-ಖರಾಬ್ ರಾಜಕಾಲುವೆ ಜಾಗವನ್ನು ತೆರವುಗೊಳಿಸಿ ಪಾಲಿಕೆಯ ಸುಪರ್ದಿಗೆ ಮರಳಿ ಪಡೆಯಲಾಗಿದೆ ಎಂದು ಆಯುಕ್ತರಾದ ಕೆ. ಎನ್. ರಮೇಶ್ ರವರು ತಿಳಿಸಿದ್ದಾರೆ.

ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶ
ಹರಳೂರು ಗ್ರಾಮದ ಸರ್ವೆ ನಂ. 2/1ರಲ್ಲಿನ ರಾಜಕಾಲುವೆ ಹಾಗೂ ಹಳ್ಳದ ಖರಾಬು ಜಾಗದ ಒತ್ತುವರಿ ಕುರಿತಂತೆ ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ NCR(E) CR/121/2024-25 ರಾಜ್ಯ ಸರ್ಕಾರ ಹಾಗೂ ಲಕ್ಷ್ಮಿನಾರಾಯಣ ರೆಡ್ಡಿ ಮತ್ತು ಇನ್ನಿತರರು ಪ್ರಕರಣದ ದಾಖಲಾಗಿದ್ದು, ಈ ಪ್ರಕರಣದಲ್ಲಿ ನ್ಯಾಯಾಲಯವು ಒತ್ತುವರಿದಾರರಿಗೆ ರಾಜಕಾಲುವೆ ಹಾಗೂ ಹಳ್ಳದ ಖರಾಬು ಜಾಗದ ಒತ್ತುವರಿಯನ್ನು ತೆರವುಗೊಳಿಸಲು ಸೂಚನೆ ನೀಡಿರುತ್ತದೆ. ತಪ್ಪಿದಲ್ಲಿ ಪಾಲಿಕೆ ವತಿಯಿಂದ ತೆರವುಗೊಳಿಸಲು ಅದೇಶ ನೀಡಿರುತ್ತದೆ.
ಸ್ಥಳ ಪರಿಶೀಲನೆ ಹಾಗೂ ಒತ್ತುವರಿ ತೆರವು
ವಿಶೇಷ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಪಾಲಿಕೆಯ ಕೂಡ್ಲು ವಿಭಾಗದ ಅಭಿಯಂತರರು ಸರ್ವೇಯರ್, ಸ್ಥಳೀಯ ಪೊಲೀಸರ ನೇರವಿನೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕಾಂಪೌಂಡ್ ಹಾಗೂ ಶೆಡ್ ಗಳಿಂದ ಒತ್ತುವರಿಯಾಗಿದ್ದ 6 ಗುಂಟೆ ಬಿ-ಖರಾಬ್ ರಾಜಕಾಲುವೆ ಜಾಗವನ್ನು ತೆರವುಗೊಳಿಸಿ, ಸುಮಾರು 6 ಕೋಟಿ ಮೌಲ್ಯದ ಪ್ರದೇಶವನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ.
ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಹಾಗೂ ರಾಜಕಾಲುವೆಯ ನೈಸರ್ಗಿಕ ಹರಿವನ್ನು ಸಂರಕ್ಷಿಸಲು ಈ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಸಾರ್ವಜನಿಕ ರಾಜಕಾಲುವೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Bengaluru Rajakaluve: ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ, ಘನತ್ಯಾಜ್ಯ ನಿರ್ವಹಣಾ (SWM) ವಿಭಾಗದ ಅಧಿಕಾರಿಗಳು ಬ್ಲಾಕ್‌ವಾರು ಆಟೋ ಟಿಪ್ಪರ್ ಮೈಕ್ರೋ ಪ್ಲಾನ್, ಪೌರಕಾರ್ಮಿಕರ ಬೀದಿ ಮ್ಯಾಪಿಂಗ್ ಹಾಗೂ ಬಲ್ಕ್ ವೇಸ್ಟ್ ಜನರೇಟರ್‌ಗಳ (BWG) ಗುರುತಿಸುವಿಕೆ ಮತ್ತು ನಿರ್ವಹಣೆಗಾಗಿ ಮೈಕ್ರೋ ಪ್ಲಾನ್ ಸಿದ್ಧಪಡಿಸಿದ್ದು, ಇದೇ ಅಕ್ಟೋಬರ್ 3 ರಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು.
BNCC ವ್ಯಾಪ್ತಿಯ ಏಳು ವಿಭಾಗಗಳಿಗೆ ಪ್ರತ್ಯೇಕ ಮೈಕ್ರೋ ಪ್ಲಾನ್ ಸಿದ್ಧಪಡಿಸಲಾಗಿದ್ದು, ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ, ರಸ್ತೆ ಸ್ವಚ್ಛತೆ ಹಾಗೂ ಬಲ್ಕ್ ತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸುವುದು ಇದರ ಉದ್ದೇಶವಾಗಿದೆ.
Bengaluru Rajakaluve: ಬ್ಲಾಕ್‌ವಾರು ಮೈಕ್ರೋ ಪ್ಲಾನಿಂಗ್
ಮೈಕ್ರೋ ಪ್ಲಾನ್ ಸಿದ್ಧಪಡಿಸುವಾಗ ಪ್ರತಿ ಪ್ರದೇಶದಲ್ಲಿರುವ ಬ್ಲಾಕ್‌ಗಳು, ಮನೆಗಳು, ವಾಣಿಜ್ಯ ಅಂಗಡಿಗಳು ಮತ್ತು ಸಂಸ್ಥೆಗಳು, ಜನಸಂಖ್ಯೆ, ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಮತ್ತು ವಿಧ, ಪೌರಕಾರ್ಮಿಕರ ಸಂಖ್ಯೆ, ಆಟೋ ಟಿಪ್ಪರ್‌ಗಳ ಸಂಖ್ಯೆ ಮತ್ತು ಮಾರ್ಗಗಳು, ಕಾಂಪ್ಯಾಕ್ಟರ್‌ಗಳು, ಮಿನಿ ಟ್ರಾನ್ಸ್‌ಫರ್ ಸ್ಟೇಷನ್‌ಗಳು (MTS), ಬಲ್ಕ್ ವೇಸ್ಟ್ ಜನರೇಟರ್‌ಗಳು (BWG), ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು, ಉದ್ಯಾನವನಗಳು, ಬಸ್ ನಿಲ್ದಾಣಗಳು, ಆಟದ ಮೈದಾನಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಬ್ಲಾಕ್‌ಸ್ಪಾಟ್‌ಗಳು ಹಾಗೂ ಹೆಚ್ಚಿನ ಸಾಂದ್ರತೆಯ ವಸತಿ ಪ್ರದೇಶಗಳು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಲಾಗಿದೆ.


Click it and Unblock the Notifications
