Bengaluru Rain: ಆ ಒಂದು ಕೆಲಸ ಮಾಡಿದ್ರೆ ಬೆಂಗಳೂರು ಮಳೆ ಅನಾಹುತ ತಪ್ಪಿಸಬಹುದಿತ್ತು!
Bengaluru rain problem: ಬೆಂಗಳೂರಲ್ಲಿ ಮಳೆ ಅನಾಹುತಗಳು ಒಂದೆರಡಲ್ಲ. ಮಳೆಯಿಂದಾಗಿ ಬೆಂಗಳೂರಲ್ಲಿ ಭಾರೀ ಅನಾಹುತವೇ ಸಂಭವಿಸಿ, ಜನ ಸಂಕಷ್ಟದಲ್ಲಿ ಇದ್ದಾರೆ. ಮಳೆ ನಿಂತಿದ್ದರೂ ಮಳೆಯಿಂದ ಆಗುತ್ತಿರುವ ಅನಾಹುತಗಳು ನಿಂತಿಲ್ಲ. ಆದರೆ, ಆ ಒಂದು ಕೆಲಸವನ್ನು ಮಾಡಿದ್ರೆ. ಬೆಂಗಳೂರಲ್ಲಿ ಈ ಪರಿ ಮಳೆ ಅನಾಹುತ ಆಗ್ತಿರಲಿಲ್ಲ. ಮಳೆ ಅನಾಹುತದ ಅರ್ಧ ಸಮಸ್ಯೆಗಳನ್ನು ತಪ್ಪಿಸಬಹುದಿತ್ತು.
ಬೆಂಗಳೂರು ದೇಶದ ಪ್ರಮುಖ ನಗರಗಳಲ್ಲಿ ಬೆಸ್ಟ್ ಸಿಟಿ. ಆದರೆ, ಈ ಬಾರಿ ಸುರಿದಿರುವ ಮಳೆ ಬ್ರ್ಯಾಂಡ್ ಬೆಂಗಳೂರು ಕಾನ್ಸೆಪ್ಟ್‌ಗೆ ಕಪ್ಪು ಚುಕ್ಕಿ ಆಗಿದೆ. ಈ ಬಾರಿ ಪ್ರತಿಷ್ಠಿತ ಕಂಪನಿಗಳು, ಐಟಿ - ಬಿಟಿ ಕಂಪನಿಗಳು ಹೆಚ್ಚಾಗಿ ಇರುವ ಮಾನ್ಯತಾ ಟೆಕ್‌ಪಾರ್ಟ್, ಸರ್ಜಾಪುರ, ಮಹದೇವಪುರ ಸೇರಿದಂತೆ ಬೇರೆ ಬೇರೆ ಜಾಗದಲ್ಲಿ ಮಳೆಯಾಗಿದೆ. ಬಿಬಿಎಂಪಿಯ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಒಂದು ವಿಚಾರದಲ್ಲಿ ಸರ್ಕಾರ ಮಾಡಿದ ತಪ್ಪಿನಿಂದ ಈ ಸಮಸ್ಯೆ ಎದುರಾಗ್ತಿದೆ ಅಂತಿದ್ದಾರೆ ನಗರ ತಜ್ಞರು.

ಬಿಬಿಎಂಪಿ ಬೆಂಗಳೂರಿನ ಜನರ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಮೂಲಸೌಕರ್ಯ ಕಲ್ಪಿಸುವ ಸಂಸ್ಥೆ. ಆದರೆ, ಕಳೆದ ನಾಲ್ಕು ವರ್ಷದಿಂದ ಬಿಬಿಎಂಪಿಯ ಅಧಿಕಾರಿಗಳನ್ನು ಕೇಳುವವರಿಲ್ಲ, ಹೇಳುವವರಿಲ್ಲ ಎನ್ನುವಂತಿದೆ. ಬಿಬಿಎಂಪಿಗೆ ಚುನಾವಣೆ ನಡೆಸಿ, ನಾಲ್ಕು ವರ್ಷಗಳೇ ಕಳೆದಿವೆ. ಬಿಬಿಎಂಪಿಯಲ್ಲಿ ಈಗ ಕೌನ್ಸಿಲ್ ಇಲ್ಲ, ಮೇಯರ್ ಹಾಗೂ ಉಪ ಮೇಯರ್ ಯಾರೂ ಇಲ್ಲ. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಯಲ್ಲಿ ಅಧಿಕಾರಿಗಳದ್ದೇ ದರ್ಬಾರು ನಡೆದಿದೆ.
ಬಿಬಿಎಂಪಿಯ ಪಾಲಿಕೆ ಸದಸ್ಯರ ಅವಧಿ ಮುಕ್ತಾಯವಾದಾಗಲೇ ಪಾಲಿಕೆಯ ಚುನಾವಣೆ ಮಾಡಬೇಕಿತ್ತು. ಆದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಒಂದಿಲ್ಲೊಂದು ಕಾರಣಗಳನ್ನು ನೀಡಿ, ಪಾಲಿಕೆಯ ಚುನಾವಣೆಯನ್ನು ಮುಂದೂಡುತ್ತಲ್ಲೇ ಇವೆ. ಇನ್ನು ಬಿಬಿಎಂಪಿ ಚುನಾವಣೆ ನಡೆಸಿದ್ದರೆ, ಪ್ರತಿ ವಾರ್ಡ್‌ನಲ್ಲೂ ಪಾಲಿಕೆಯ ಸದಸ್ಯರು ಇರ್ತಿದ್ರು. ಆಯಾ ವಾರ್ಡ್‌ನ ಪ್ರಾಬ್ಲಂ ಅಲ್ಲಲ್ಲೇ ಬಗೆಹರಿಸತ್ತಿದ್ದರು. ಆದರೆ, ಕಳೆದ ನಾಲ್ಕು ವರ್ಷದಿಂದ ಪಾಲಿಕೆಯ ಚುನಾವಣೆಯೇ ಆಗಿಲ್ಲ. ಹೀಗಾಗಿ, ಪಾಲಿಕೆಯ ದರ್ಬಾರು ಈಗ ಅಧಿಕಾರಿಗಳದ್ದೇ.
ವಾರ್ಡ್ ಜನರಿಗೆ ನೆರವಾಗ್ತಿದ್ರು: ಬೆಂಗಳೂರಿನಲ್ಲಿ ಪಾಲಿಕೆ ಚುನಾವಣೆ ಆಗಿದ್ರೆ ಪ್ರತಿ ವಾರ್ಡ್‌ನಲ್ಲೂ ಪಾಲಿಕೆಯ ಸದಸ್ಯರು ಇರ್ತಿದ್ರು. ಈ ಸದಸ್ಯರು ಆಯಾ ವಾರ್ಡ್‌ನ ಜನರ ಸಂಕಷ್ಟದ ಸಮಯದಲ್ಲಿ ಸ್ಪಂದಿಸುತ್ತಿದ್ದರು. ಆದರೆ, ಈಗ ಜನರು ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎನ್ನುವುದೇ ತಿಳಿಯದಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಶಾಸಕರನ್ನೇ ಅವಲಂಬಿಸುವಂತಾಗಿದೆ. ಚರಂಡಿ, ರಾಜಕಾಲುವೆ ಸೇರಿದಂತೆ ಸ್ಥಳೀಯ ಸಮಸ್ಯೆಗಳು ಪರಿಹಾರವಾಗ್ತಿಲ್ಲ.
ಅಲ್ಲದೇ ಕಸ ವಿಲೇವಾರಿ ಸಮಸ್ಯೆಯೂ ಉಳಿದಿದೆ. ಪಾಲಿಕೆಯ ಸದಸ್ಯರು ಇರುವಾಗ ತಿಂಗಳಿಗೊಮ್ಮೆ ಕೌನ್ಸಿಲ್ ಸಭೆಗಳು ನಡೆಯುತ್ತಿದ್ದವು ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಯಾವ ಪ್ರದೇಶದಲ್ಲಿ ಯಾವ ಸಮಸ್ಯೆ ಇದೆ ಅಂತ ಬೆಂಗಳೂರಿನ ಎಲ್ಲಾ ಭಾಗದ ಜನರಿಗೂ ತಿಳಿಯುತ್ತಿತ್ತು. ಆದರೆ, ಈಗ ಯಾವ ಸಭೆಗಳೂ ನಡೆದಿಲ್ಲ. ಪಾಲಿಕೆಯಲ್ಲಿ ತೆಗೆದುಕೊಳ್ಳುವ ಹಲವು ಪ್ರಮುಖ ನಿರ್ಣಯಗಳ ಬಗ್ಗೆ ಚರ್ಚೆಯೇ ಆಗುತ್ತಿಲ್ಲ.
ಹಲವು ನಿರ್ಧಾರಗಳನ್ನು ಏಕರೂಪವಾಗಿ ತೆಗೆದುಕೊಳ್ಳಲಾಗುತ್ತಿದೆ ಎನ್ನುವ ಆರೋಪವೂ ಇದೆ. ಪಾಲಿಕೆ ಚುನಾವಣೆಯನ್ನು ಈಗ ಕಾಂಗ್ರೆಸ್ ಸರ್ಕಾರವೂ ನೆಪವೊಡ್ಡಿ ಮುಂದೂಡುತ್ತಲ್ಲೇ ಇದೆ. ಪಾಲಿಕೆ ಸದಸ್ಯರು ಇದ್ದಿದ್ದರೆ, ಮಳೆ ಅನಾಹುತ ಸ್ವಲ್ಪವಾದರೂ ತಪ್ಪುತ್ತಿತ್ತು ಎನ್ನುವುದು ಬೆಂಗಳೂರು ಜನರ ಅಭಿಪ್ರಾಯ.












Click it and Unblock the Notifications