Bengaluru Railway Division: ನವೆಂಬರ್ ಒಂದೇ ತಿಂಗಳಲ್ಲಿ ಅತ್ಯಧಿಕ ಆದಾಯ ಗಳಿಕೆ, ಅಂಕಿ-ಅಂಶಗಳು ಇಲ್ಲಿವೆ
ಬೆಂಗಳೂರು, ಡಿಸೆಂಬರ್ 05: ದಕ್ಷಿಣ ಪಶ್ಚಿಮ ರೈಲ್ವೆಯ (SWR) ಬೆಂಗಳೂರು ರೈಲ್ವೆ ವಿಭಾಗವು ಒಂದೇ ತಿಂಗಳಲ್ಲಿ ದಾಖಲೆ ಮಟ್ಟದಲ್ಲಿ ಆದಾಯ ಗಳಿಸಿದೆ. ಈ ಕುರಿತು ವಿಭಾಗದ ರೈಲ್ವೆ ಅಧಿಕಾರಿಗಳೇ ಮಾಹಿತಿ ಬಹಿರಂಗಪಡಿಸಿದ್ದಾರೆ. ಅದರ ವಿವರ ಇಲ್ಲಿದೆ.
ಬೆಂಗಳೂರು ರೈಲ್ವೆ ವಿಭಾಗವು ಅತ್ಯಧಿಕ ಸರಕು ಸಾಗಾಣೆ ಮೂಲಕ ನವೆಂಬರ್ ಒಂದೇ ತಿಂಗಳಲ್ಲಿ 24.22 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಒಂದು ತಿಂಗಳಲ್ಲಿ ಅದರ ಅತ್ಯಧಿಕ ಸರಕು ಆದಾಯವಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ತಿಳಿಸಿದ್ದಾರೆ ಎಂದು 'ಡಿಚ್' ವರದಿ ಮಾಡಿದೆ.

ಬೆಂಗಳೂರು ರೈಲ್ವೆ ವಿಭಾಗವು ಪ್ರಸಕ್ತ 2023-24ರ ಸಾಲಿನಲ್ಲಿ ಈವರೆಗೆ 173.17 ಕೋಟಿ ರೂಪಾಯಿ ಆದಾಯವನ್ನು ಸರಕು ಸಾಗಣೆಯಿಂದ ಸಂಗ್ರಹಿಸಿದೆ. ಈ ಕುರಿತು ಸೋಮವಾರ ನಡೆದ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ (ಡಿಆರ್‌ಯುಸಿಸಿ) ಸಭೆಯಲ್ಲಿ ಅಧಿಕಾರಿಗಳಿಗೆ ಅವತು ಮಾಹಿತಿ ನೀಡಿದ್ದಾರೆ.
ಈ ವರ್ಷ ಶೇ.46ರಷ್ಟು ಪ್ರಗತಿ
ಪ್ರಸಕ್ತ ಹಣಕಾಸು ವರ್ಷದದಲ್ಲಿ ಅಂದರೆ ನವೆಂಬರ್ ತಿಂಗಳವರೆಗೆ ಬೆಂಗಳೂರು ರೈಲ್ವೆ ವಿಭಾಗವು 515 ರೇಕ್‌ಗಳನ್ನು (ಟ್ರೇನ್‌ಸೆಟ್‌ಗಳು) ಸರಕನ್ನು ಲೋಡ್ ಮಾಡಿದೆ. ಇದನ್ನು ಹಿಂದಿನ ವರ್ಷ 2022-23 ಸಾಲಿನ ಅವಧಿಗೆ ಹೋಲಿಕೆ ಮಾಡಿದೆ. ಈ ಬಾರಿ 46 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. ಇದು ರೈಲ್ವೆ ಆದಾಯ ಹೆಚ್ಚಳಕ್ಕೆ ಪುಷ್ಠ ನೀಡಿದೆ ಎಂದರು.
ಕಳೆದ ತಿಂಗಳು ನವೆಂಬರ್‌ವರೆಗೆ 430 ರೇಕ್‌ಗಳ ಆಟೋಮೊಬೈಲ್‌ಗಳನ್ನು ಲೋಡ್ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಆಟೋ ಮೊಬೈಲ್ ಲೋಡಿಂಗ್ ನಲ್ಲಿ ಶೇಕಡಾ 35 ರಷ್ಟು ಹೆಚ್ಚಾಗಿದೆ. 63 ರೇಕ್‌ಗಳ ಮೂಲಕ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಯಿಂದ ಈ ವರ್ಷ ಬರೋಬ್ಬರಿ 9.33 ಕೋಟಿ ರೂಪಾಯಿ ಆದಾಯ ಗಳಿಸಿದಂತಾಗಿದೆ ಎಂದು ಸಭೆಗೆ ಅಂಕಿ ಅಂಶಗಳನ್ನು ವಿವರಿಸಿದರು.

ಈ ರೈಲು ನಿಲ್ದಾಣಗಳು ಆಧುನೀಕರಣ
ಬೆಂಗಳೂರಿನಿಂದ ಹೊರ ವಲಯದ ಪ್ರದೇಶಗಳು ಮತ್ತು ಜಿಲ್ಲೆಗಳಾದ ಮಂಡ್ಯ, ಚನ್ನಪಟ್ಟಣ, ಹೊಸೂರು, ಹಿಂದೂಪುರ, ಕುಪ್ಪಂ, ಮಾಲೂರು, ಬಂಗಾರಪೇಟೆ, ಕೆಂಗೇರಿ, ಕೆಆರ್ ಪುರಂ, ರಾಮನಗರ, ತುಮಕೂರು ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳನ್ನು 'ಅಮೃತ್ ಭಾರತ್ ಸ್ಟೇಷನ್ ಯೋಜನೆ' ಯಡಿ ಆಧುನೀಕರಣ ಮಾಡಲಾಗುವುದು.
ಈಗಾಗಲೇ ಕರ್ನಾಟಕದ 50ಕ್ಕೂ ಹೆಚ್ಚು ರೈಲು ನಿಲ್ದಾಣಗಳು ಈ ಯೋಜನೆಯಡಿ ಮೇಲ್ದರ್ಜೆಗೆ ಏರುತ್ತಿವೆ. ಅಧುನಿಕ ವ್ಯವಸ್ಥೆಯನ್ನು ಈ ಅಳಡಿಕೆಸಲಾಗುವುದು. ಪ್ರಯಾಣಿಕರಿಗೆ ಸುವ್ಯವಸ್ಥಿತ ಸೇವೆ ಈ ನಿಲ್ದಾಣಗಳಲ್ಲಿ ಸಿಗಲಿದೆ ಎಂದು ರೈಲ್ವೆ ತಿಳಿಸಿದರು.












Click it and Unblock the Notifications