ಬೆಂಗಳೂರು: ಸೈಕೋ ಕಿಲ್ಲರ್ ದೊರೆ ಬಂಧನ
ಬೆಂಗಳೂರು, ಮೇ 29: ಅತ್ಯಾಚಾರ, ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಸೈಕೋ ಕಿಲ್ಲರ್ ದೊರೆಯನ್ನು ಬ್ಯಾಡರಹಳ್ಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸೈಕೋ ಕಿಲ್ಲರ್ ದೊರೆ(50) ಬ್ಯಾಡರಹಳ್ಳಿ, ಪೀಣ್ಯ,, ಯಶವಂತಪುರದಲ್ಲಿ 8 ಕ್ಕೂ ಹೆಚ್ಚು ಅತ್ಯಾಚಾರವನ್ನು ಮಾಡಿದ್ದ, ಹಾಗೂ ಕೊಲೆ ಮಾಡಿದ ಆರೋಪದೊಂದಿಗೆ, ತಲೆ ತಪ್ಪಿಸಿಕೊಂಡಿದ್ದ, ಪೊಲೀಸರು ನಿರಂತರ ಆತನ ಹುಡುಕಾಟದಲ್ಲಿದ್ದರು. ಇದೀಗ ಮಂಗಳವಾರ ಬೆಳಗ್ಗೆ ಅವನು ಬ್ಯಾಡರಹಳ್ಳಿಯಲ್ಲಿದ್ದ ಸುಳಿವು ಪಡೆದ ಬ್ಯಾಡರಹಳ್ಳಿ ಪೊಲೀಸರು ಇನ್ಸ್‌ಪೆಕ್ಟರ್ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ಇದರಿಂದ ಬೆಂಗಳೂರು ಜತೆಗೆ ಬ್ಯಾಡರಹಳ್ಳಿ, ಪೀಣ್ಯ ಸುತ್ತಮುತ್ತಲಿನ ಪ್ರದೇಶದಲ್ಲಿರುವವರು ನಿಟ್ಟುಸಿರು ಬಿಡುವಂತಾಗಿದೆ. ಇನ್ನು ವಿಚಾರಣೆ ವೇಳೆ ಆತನ ಇನ್ನಷ್ಟು ಅಪರಾಧಗಳು ಬೆಳಕಿಗೆ ಬರಲಿವೆ.












Click it and Unblock the Notifications