Bengaluru: "ಡಿ.ಕೆ ಶಿವಕುಮಾರ್‌, ಗುಂಡುಹಾಕಿ ಸಿಟಿ ನೈಟ್‌ ರೌಂಡ್ಸ್‌ ಯಾವಾಗ ಮಾಡ್ತೀರಿ"

ಬಿಜೆಪಿ ಹಾಗೂ ಜೆಡಿಎಸ್‌ ಏಕಕಾಲಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರನ್ನು ಟಾರ್ಗೆಟ್‌ ಮಾಡಿದೆ. ಕಲೆಕ್ಷನ್‌ ಅಧ್ಯಕ್ಷನ "ಪರ್ಸಂಟೇಜ್‌ ಪುರಾಣ" ಎಂದು ಜೆಡಿಎಸ್‌ ಟೀಕೆ ಮಾಡಿದೆ. ಇತ್ತ ಬಿಜೆಪಿ ಡಿಸಿಎಂ ಶಿವಕುಮಾರ್‌ ಅವರೇ ಇದೇನಾ ಬ್ರ್ಯಾಂಡ್‌ ಬೆಂಗಳೂರು ಎಂದು ಪ್ರಶ್ನೆ ಮಾಡಿದೆ. ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರನ್ನು ಎರಡೂ ಪಕ್ಷಗಳು ಏಕಕಾಲಕ್ಕೆ ಯಾಕೆ ಟಾರ್ಗೆಟ್‌ ಮಾಡಿದ್ದೇಕೆ ಎನ್ನುವ ವಿವರ ಇಲ್ಲಿದೆ.

ರಾಜ್ಯದಲ್ಲಿ ಕಳೆದ 15 ದಿನಗಳಿಂದ ಮಳೆಯಾಗುತ್ತಿದೆ. ಬೆಂಗಳೂರಿನಲ್ಲೂ ಮಳೆ ಮುಂದುವರಿದಿದೆ. ಈಚೆಗೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿತ್ತು. ಆದರೆ, ಒಂದು ವಾರದ ಅಂತರದಲ್ಲಿ ಸುರಿದ ಮಳೆಯಿಂದ ಬೆಂಗಳೂರಿನಲ್ಲಿ ಮತ್ತೆ ರಸ್ತೆಗುಂಡಿಗಳು ನಿರ್ಮಾಣವಾಗಿವೆ. ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಸಣ್ಣಪುಟ್ಟ ದುರಸ್ತಿ ಕಾರ್ಯವಿದ್ದು, ಅದನ್ನೂ ಕಾಲಮಿತಿಯಲ್ಲಿ ಮುಗಿಸುವುದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹೇಳಿತ್ತು.

Bengaluru Potholes BJP JDS trolled DK Shivakumar

ಇದೀಗ ಬೆಂಗಳೂರಿನಲ್ಲಿ ಮತ್ತೆ ಸಾಲು ಸಾಲು ರಸ್ತೆ ಗುಂಡಿಗಳು ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಮತ್ತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 15 ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಬರೋಬ್ಬರಿ 14,000 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಿರುವುದಾಗಿ ಬಿಬಿಎಂಪಿ ಹೇಳಿಕೊಂಡಿತ್ತು. ಆದರೆ, ರಸ್ತೆ ಗುಂಡಿಗಳ ಗುಣಮಟ್ಟದ ಬಗ್ಗೆ ಈಗ ಅನುಮಾನ ವ್ಯಕ್ತವಾಗಿದೆ. ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಆದ್ಯತೆಯ ಮೇಲೆ ರಸ್ತೆಗುಂಡಿ ಮುಚ್ಚಿದ್ದೇವೆ ಎಂದಿದ್ದರು. ರಾತ್ರಿ - ಹಗಲು ಎನ್ನದೆ ರಸ್ತೆಗುಂಡಿಗಳನ್ನು ಮುಚ್ಚಲಾಗಿತ್ತು.

ಆದರೆ, ಒಂದು ವಾರದ ಮಳೆಗೆ ಬಿಬಿಎಂಪಿಯ ರಸ್ತೆಗುಂಡಿ ಬಣ್ಣ ಬಯಲಾಗಿದೆ. ಬಿಬಿಎಂಪಿ ಎಷ್ಟು ಕಳಪೆ ಕಾಮಗಾರಿ ನಡೆಸುತ್ತದೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ ಎಂದು ಬೆಂಗಳೂರಿನ ಜನ ಟೀಕೆ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಡಿ.ಕೆ ಶಿವಕುಮಾರ್‌ ಅವರನ್ನು ಟ್ಯಾಗ್‌ ಮಾಡಿ ಇದೇನಾ ಬ್ರ್ಯಾಂಡ್‌ ಬೆಂಗಳೂರು ಎಂದು ಕೇಳುತ್ತಿದ್ದಾರೆ.

Bengaluru Potholes BJP JDS trolled DK Shivakumar

ಬಿಜೆಪಿ - ಜೆಡಿಎಸ್‌ ಏಕಕಾಲಕ್ಕೆ ಟೀಕೆ: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಹಾಗೂ ಜೆಡಿಎಸ್‌ ಏಕಕಾಲಕ್ಕೆ ವಾಗ್ದಾಳಿ ನಡೆಸಿವೆ. ಬೆಂಗಳೂರು ರಸ್ತೆಗುಂಡಿಯ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿಯು, ಡಿಸಿಎಂ ಡಿ.ಕೆ ಶಿವಕುಮಾರ್‌ ಅವರ ಆ ದಿನಗಳ ಬ್ರ್ಯಾಂಡ್‌ ಬೆಂಗಳೂರಿನಲ್ಲಿ ಯಮರೂಪಿ ಗುಂಡಿಗಳದ್ದೇ ದರ್ಬಾರ್‌ ಜೋರಾಗಿದೆ.

ರಾಜಧಾನಿಯ ಯಾವುದೇ ರಸ್ತೆಗಳಿಗೂ ಹೋದರೂ ನೂರಾರು ಗುಂಡಿಗಳು ಕಾಣುತ್ತಿವೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡಬೇಕಾದ ದುಸ್ಥಿತಿಯನ್ನ ರಾಜ್ಯ ಕಾಂಗ್ರೆಸ್‌ ಸರ್ಕಾರ ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ರಸ್ತೆ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಅಧಿಕಾರದಲ್ಲಿದೆ ಎಂದು ಪ್ರಶ್ನೆ ಮಾಡಿದೆ.

ಗುಂಡುಹಾಕಿ ಸಿಟಿ ನೈಟ್‌ ರೌಂಡ್ಸ್‌ ಯಾವಾಗ ಎಂದ ಜೆಡಿಎಸ್‌

ಮತ್ತೊಂದು ಕಡೆ ರಸ್ತೆಗುಂಡಿಯ ವಿಷಯನ್ನೇ ಪ್ರಧಾನವಾಗಿರಿಸಿಕೊಂಡು ಜೆಡಿಎಸ್‌ ಸಹ ವಾಗ್ದಾಳಿ ನಡೆಸಿದೆ. ಡಿ.ಕೆ ಶಿವಕುಮಾರ್‌ ಅವರನ್ನು ಟಾರ್ಗೆಟ್‌ ಮಾಡಿಕೊಂಡು ಟ್ವೀಟ್‌ ಮಾಡಿರುವ ಜೆಡಿಎಸ್, ಕಲೆಕ್ಷನ್‌ ಅಧ್ಯಕ್ಷನ "ಪರ್ಸಂಟೇಜ್‌ ಪುರಾಣ" ಎನ್ನುವ ಶೀರ್ಷಿಕೆಯೊಂದಿಗೆ ಟ್ವೀಟ್‌ ಮಾಡಿದೆ. ಆ ಟ್ವೀಟ್‌ನಲ್ಲಿ ಪರ್ಸೆಂಟೇಜ್ ಗಿರಾಕಿ ಎಂದು ಸ್ವತಃ ಕಾಂಗ್ರೆಸ್‌ ವಕ್ತಾರರೇ, ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ನ ರೋಲ್‌ ಕಾಲ್‌ ಪುರಾಣ ಬಿಚ್ಚಿಟ್ಟಿದ್ದಾರೆ ಎಂದು ಹಳೆಯ ವಿಡಿಯೋವನ್ನು ಶೇರ್‌ ಮಾಡಿದೆ.

ಬೆಂಗಳೂರಿನಲ್ಲಿ 15 ದಿನಗಳ ಕಾಲ ತೇಪೆ ಹಚ್ಚಿದ ರಸ್ತೆ ಗುಂಡಿಗಳು ಒಂದೇ ರಾತ್ರಿ ಸುರಿದ ಮಳೆಗೆ ಕೊಚ್ಚಿಹೋಗಿದೆ.

ಬ್ರ್ಯಾಂಡ್‌ ಬೆಂಗಳೂರು ಹೆಸರಲ್ಲಿ ಮೇಯುತ್ತಿರುವ "ಕಲೆಕ್ಷನ್‌ ಗಿರಾಕಿ"ಯ ಪರ್ಸಂಟೇಜ್‌ ಅವ್ಯವಹಾರಕ್ಕೆ ಮತ್ತು ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ. ಅಂದ್ಹಾಗೆ.., ಕಿತ್ತುಹೋಗಿರುವ ರಸ್ತೆ ಗುಂಡಿಗಳನ್ನು ವೀಕ್ಷಿಸಲು ಗುಂಡುಹಾಕಿ ಸಿಟಿ ನೈಟ್‌ ರೌಂಡ್ಸ್‌ ಯಾವಾಗ ಮಾಡ್ತೀರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+