ಬೆಂಗಳೂರು: ಕಿಡ್ನಿ ಮಾರಾಟ ಹೈಟೆಕ್ ಜಾಲ ಭೇದಿಸಿದ ಪೊಲೀಸರು

ಬೆಂಗಳೂರು, ಫೆಬ್ರವರಿ 10: 'ಕಿಡ್ನಿ ಮಾರಾಟ'ದ ಹೆಸರಿನಲ್ಲಿ ಕೋಟ್ಯಂತರ ಹಣವನ್ನು ದೋಚುತ್ತಿದ್ದ ವಿದೇಶಿ ಮತ್ತು ಅನ್ಯರಾಜ್ಯದ ಕಳ್ಳರ ಗುಂಪನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಕಿಡ್ನಿ ದಾನ ಮಾಡಿದರೆ ಲಕ್ಷಾಂತರ ಹಣ ನೀಡುವುದಾಗಿ, ಹಾಗೂ ಕಿಡ್ನಿಯನ್ನು ಮಾರಾಟ ಮಾಡುವುದಾಗಿ ಅಂತರ್ಜಾಲದಲ್ಲಿ ಜಾಹಿರಾತು ಹರಿಬಿಟ್ಟು ಗ್ರಾಹಕರಿಗೆ ಲಕ್ಷಾಂತರ ಹಣ ದೋಚುತ್ತಿದ್ದ ನೈಜೀರಿಯಾ ಮತ್ತು ತ್ರಿಪುರಾ ರಾಜ್ಯದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆ ಹೆಸರಿನಲ್ಲಿ ವೆಬ್‌ಸೈಟ್ ತಯಾರಿಸಿ, ನಕಲಿ ಇ-ಮೇಲ್ ಐಡಿ ತಯಾರಿಸಿಕೊಂಡು ಕಿಡ್ನಿ ದಾನ ಮಾಡಿದರೆ ಹಣ ನೀಡುವುದಾಗಿ ಜಾಹೀರಾತು ನೀಡಿ ನಂತರ ಕಿಡ್ನಿ ಮಾರುವುದಾಗಿಯೂ ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ದೋಚಿದ್ದಾರೆ.

ದೊಡ್ಡ ಆಸ್ಪತ್ರೆಯೊಂದರ ಹೆಸರು ಬಳಸಿಕೊಂಡಿದ್ದ ಕಳ್ಳರು

ದೊಡ್ಡ ಆಸ್ಪತ್ರೆಯೊಂದರ ಹೆಸರು ಬಳಸಿಕೊಂಡಿದ್ದ ಕಳ್ಳರು

ದೊಡ್ಡ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಮ್ಮ ಆಸ್ಪತ್ರೆ ಹೆಸರು ಬಳಸಿಕೊಂಡು ಚಂದ್ರು ಎಂಬಾತ ಕಿಡ್ನಿ ಮಾರುವುದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಡಿಸೆಂಬರ್ 30 ರಂದು ಠಾಣೆಗೆ ದೂರು ದಾಖಲಿಸಿದ್ದರು.

ವೆಬ್‌ಸೈಟ್, ಇ-ಮೇಲ್, ವಾಟ್ಸ್‌ ಆಫ್ ಸಂದೇಶಗಳ ಪರಿಶೀಲನೆ

ವೆಬ್‌ಸೈಟ್, ಇ-ಮೇಲ್, ವಾಟ್ಸ್‌ ಆಫ್ ಸಂದೇಶಗಳ ಪರಿಶೀಲನೆ

ಚಂದ್ರುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದೊಂದು ದೊಡ್ಡ ಜಾಲವೆಂದು ಅರಿತ ಪೊಲೀಸರು, ವೆಬ್‌ಸೈಟ್, ಫೇಸ್‌ಬುಕ್ ಜಾಹೀರಾತು, ನಕಲಿ ಇ-ಮೇಲ್ ಐಡಿ ಇವುಗಳ ಮೇಲೆಲ್ಲಾ ಕಣ್ಣಿಟ್ಟು ಸತತ ತನಿಕೆ ಮಾಡಿ ಇಡೀಯ ಗುಂಪನ್ನು ಬಂಧಿಸಿದ್ದಾರೆ.

200 ಮಂದಿಗೆ ಮೋಸ ಮಾಡಿದ್ದ ತಂಡ

200 ಮಂದಿಗೆ ಮೋಸ ಮಾಡಿದ್ದ ತಂಡ

ಆರೋಪಿಗಳು ಸುಮಾರು 200 ಮಂದಿಗೆ ಮೋಸ ಮಾಡಿದ್ದಾರೆಂದು ವಿಚಾರಣೆ ವೇಳೆ ತಿಳಿದುಬಂದಿದೆ. ಪ್ರತಿಯೊಬ್ಬರಿಂದಲೂ 50,000 ದಿಂದ ಒಂದು ಲಕ್ಷದ ವರೆಗೆ ಹಣ ವಸೂಲಿ ಮಾಡಿದ್ದರು. ಕಿಡ್ನಿ ದಾನ ಮಾಡಲು ಮುಂದೆ ಬಂದವರಿಂದಲೂ 'ವಿಮೆ ಮಾಡಿಸಬೇಕು' ಎಂದು ಹೇಳಿ ಅವರಿಂದಲೂ ಹಣ ದೋಚಿದ್ದರು.

ಮೂವರು ವಿದೇಶಿಗಳರು, ಮೂವರು ತ್ರಿಪುರಾ ರಾಜ್ಯದವರು

ಮೂವರು ವಿದೇಶಿಗಳರು, ಮೂವರು ತ್ರಿಪುರಾ ರಾಜ್ಯದವರು

ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಇಬ್ಬರು ನೈಜಿರಿಯಾದವರು, ಒಬ್ಬರು ಸೂಡಾನ್ ದೇಶದವರಾಗಿದ್ದಾರೆ. ಇನ್ನು ಮೂರು ಮಂದಿ ತ್ರಿಪುರಾ ರಾಜ್ಯದವರಾಗಿದ್ದಾರೆ. ಬಂಧಿತರಿಂದ ಪಾಸ್‌ಬುಕ್, ಮೊಬೈಲ್, ಎಟಿಎಂ, ಚೆಕ್‌ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+