ಬೆಂಗಳೂರು ಪೊಲೀಸರ 'ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್' ವಿಡಿಯೋ ವೈರಲ್
Recommended Video
ಬೆಂಗಳೂರು, ಸೆಪ್ಟೆಂಬರ್ 12: ಪೊಲೀಸರು 'ಢರ್ಡ್ ಡಿಗ್ರಿ ಟ್ರೀಟ್‌ಮೆಂಟ್' ಕೊಡುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೊಡಿಯೇ ಇರುತ್ತಿರಿ. ಆದರೆ ನಿಜವಾಗಿಯೂ ಈ ವಿಧಾನ ಎಷ್ಟು ಭಯಾನಕವಾಗಿರುತ್ತದೆ ಎಂಬುದಕ್ಕೆ ವೈರಲ್ ಆಗಿರುವ ವಿಡಿಯೋ ಒಂದು ಸಾಕ್ಷ್ಯ ನೀಡಿದೆ.
ವ್ಯಕ್ತಿಯೊಬ್ಬನ ಕಾಲನ್ನು ಉದ್ದನೆಯ ಕೋಲೊಂದಕ್ಕೆ ಕಟ್ಟಿ ಆತನನ್ನು ಉಲ್ಪಾ ಮಲಗಿಸಿ ಕಾಲಿಗೆ ಲಾಠಿಯಿಂದ ಹೊಡೆಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು. ಇದು ನಗರದ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ವಿಡಿಯೋ ಎನ್ನಲಾಗಿದೆ.
ಪೊಲೀಸರು ಹೊಡೆಯುತ್ತಿರುವ ಈ ಮಾದರಿಯನ್ನು ಪೊಲೀಸ್ ಭಾಷೆಯಲ್ಲಿ 'ಬಾಂಬೆ ಕಟ್ಟು' ಎನ್ನುತ್ತಾರೆ. ಆರೋಪಿಯ ತಲೆ ನೆಲಕ್ಕೆ ತಾಗಿ ಆತನ ಕಾಲು ಮೇಲ್ಮುಖವಾಗಿರುವಂತೆ ಆತನನ್ನು ಹಿಡಿದು, ಕಾಲಿನ ಪಾದಕ್ಕೆ ಹೊಡೆಯಲಾಗುತ್ತದೆ. ಇದು ಆರೋಪಿಗೆ ಅಪಾರ ನೋವು ಉಂಟುಮಾಡುತ್ತದೆ.

ವಿಡಿಯೋದಲ್ಲಿ ಹೊಡೆಸಿಕೊಳ್ಳುತ್ತಿರುವ ವ್ಯಕ್ತಿಯು ನಗರದ ಪ್ರತಿಷ್ಟಿತ ಸಂಸ್ಥೆಯೊಂದರಲ್ಲಿ ಟೆಕ್ನೀಶಿನಯನ್ ಆಗಿ ಕೆಲಸ ಮಾಡುತ್ತಿದ್ದ, ಅಲ್ಲಿಯೇ ಕೆಳಹಂತದ ಹುದ್ದೆಯಲ್ಲಿದ್ದ ಯುವತಿಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ ಹಾಗಾಗಿ ಪೊಲೀಸರ ಆತನಿಗೆ ಬುದ್ಧಿ ಕಲಿಸಲು ಹೀಗೆ ಬಾಂಬೆ ಕಟ್ಟು ಹಾಕಿ ಸರಿಯಾಗಿ ಥಳಿಸಿದ್ದಾರೆ.
ಆದರೆ ಈ ವಿಡಿಯೋ ವೈರಲ್ ಆಗಲು ಠಾಣೆಯ ಸಿಬ್ಬಂದಿಯೇ ಕಾರಣವಾಗಿದ್ದು, ಎಸ್‌ಐ ಜೊತೆ ದ್ವೇಷ ಇಟ್ಟುಕೊಂಡಿದ್ದ ಸಿಬ್ಬಂದಿಯೇ ವಿಡಿಯೋವನ್ನು ಹೊರಗೆ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ. ಕಾನೂನು ಪ್ರಕಾರ ಪೊಲೀಸರು ಹೀಗೆ ಹಿಂಸೆ ಮಾಡುವಂತಿಲ್ಲವಾದ್ದರಿಂದ ಎಸ್‌ಐ ಮೇಲೆ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ.












Click it and Unblock the Notifications